Tuesday, March 24, 2026
Flats for sale
Homeರಾಜ್ಯಬೆಂಗಳೂರು : ರಾಸಲೀಲೆ ಪ್ರಕರಣ : ಡಿಜಿಪಿ ರಾಮಚಂದರಾವ್ ವಿಡಿಯೋಗಳು ಡೀಫ್‌ಫೇಕ್ ಅಥವಾ ಎಐ ಸೃಷ್ಟಿಯಲ್ಲ.

ಬೆಂಗಳೂರು : ರಾಸಲೀಲೆ ಪ್ರಕರಣ : ಡಿಜಿಪಿ ರಾಮಚಂದರಾವ್ ವಿಡಿಯೋಗಳು ಡೀಫ್‌ಫೇಕ್ ಅಥವಾ ಎಐ ಸೃಷ್ಟಿಯಲ್ಲ.

ಬೆಂಗಳೂರು : ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ರಾಮಚಂದ್ರರಾವ್‌ಗೆ ಸೇರಿದ ವಿಡಿಯೋಗಳು ವೈರಲ್ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸರ್ಕಾರಕ್ಕೆ 100 ಪುಟಗಳ ವರದಿ ಸಲ್ಲಿಸಿದ ಎಸ್‌ಐಟಿ, ವಿಡಿಯೋಗಳು ಡೀಪ್‌ಫೇಕ್ ಅಥವಾ ಎಐ ಅಲ್ಲ ಅಂತ ರಿಪೋರ್ಟ್ ನೀಡಲಾಗಿದೆ

ಎಸ್‌ಐಟಿ ರಿಪೋರ್ಟ್ನಲ್ಲಿ ಏನಿದೆ?

ವಿಡಿಯೋಗಳು ಡೀಪ್‌ಫೇಕ್ ಅಥವಾ ಎಐ ಸೃಷ್ಟಿಯಲ್ಲ. ವಿಡಿಯೋಗಳಲ್ಲಿನ ಯಾವುದೇ ದೃಶ್ಯಾವಳಿಯನ್ನು ತಿರುಚಿಲ್ಲ.ಮಹಿಳೆಯರು ಹಲವು ಬಾರಿ ಕಚೇರಿಗೆ ಬಂದು ಹೋಗಿದ್ದಾರೆ. ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋಗಳನ್ನು ಎಸ್‌ಐಟಿ, ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಪರಿಶೀಲನೆಯಲ್ಲಿ ಈ ವಿಡಿಯೋಗಳು ಡೀಫ್‌ಫೇಕ್ ಅಥವಾ ಎಐ ಸೃಷ್ಟಿಯಲ್ಲ ಅನ್ನೋದು ಬೆಳಕಿಗೆ ಬಂದಿದೆ.

2016-17ರ ಅವಧಿಯಲ್ಲಿ ಬೆಳಗಾವಿ ಐಜಿಪಿಯಾಗಿದ್ದಾಗಿನ ವಿಡಿಯೋಗಳಿವು ಐಜಿಪಿ ಕಚೇರಿಯಲ್ಲೇ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಕೆಲಸ ಮಾಡ್ತಿರುವ ಚಾಲಕರು, ಸಿಬ್ಬಂದಿಯಿಂದ ವಿಡಿಯೋದಲ್ಲಿರುವ 2 ಮಹಿಳೆಯರನ್ನು ಗುರುತು ಪತ್ತೆ. ಮಹಿಳೆಯರ ಪೈಕಿ ಒಬ್ಬ ಮಹಿಳೆ ತನ್ನ ಮೊಬೈಲ್‌ನಲ್ಲಿ ಉದ್ದೇಶಪೂರ್ವಕವಾಗಿ ವಿಡಿಯೋ ರೆಕಾರ್ಡ್. ವಿಡಿಯೋ ವೈರಲ್ ಆಗ್ತಿದ್ದಂತೆ ಇಬ್ಬರೂ ಮಹಿಳೆಯರು ದಿಢೀರ್ ನಾಪತ್ತೆಪ್ರಕರಣ. ಬೆಳಕಿಗೆ ಬಂದ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ತನಿಖೆಗಾಗಿ ಮಹಿಳೆಯರ ಹೇಳಿಕೆ ನಿರ್ಣಾಯಕವಾಗಿದೆ.

ಮಹಿಳೆಯರ ಪತ್ತೆಗೆ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳ ತಂಡದಿAದ ರಿಪೋರ್ಟ್.

ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆಯ ವಿಡಿಯೋ ಆಧಾರದ ಮೇಲೆ ಇಲಾಖಾ ತನಿಖೆ ನಡೆಯಲಿದ್ದು, ವರದಿ ನಂತರ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಲ್ ವಿಡಿಯೋಗಳು ಅಸಲಿ ಎಂದು ಫೊರೆನ್ಸಿಕ್ ಸೈನ್ಸ್ ಲ್ಯಾಬ್ (ಎಫ್‌ಎಸ್‌ಎಲ್) ವರದಿ ಕುರಿತಾಗಿ ಪ್ರತಿಕ್ರಿಯಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬಂದ ವಿಡಿಯೋಗಳು ಎಐ ಸೃಷ್ಟಿಯೆಂದು ರಾಮಚAದ್ರರಾವ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಡಿಯೋಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇನ್ನೂ ಮುಂದೆ ಇಲಾಖಾ ವಿಚಾರಣೆ ನಡೆಯಲಿದೆ.

ರಾಮಚಂದ್ರ ರಾವ್ ಏನು ಹೇಳುತ್ತಾರೆ ಎಂದು ಕೇಳಬೇಕಾಗುತ್ತದೆ. ಇಲಾಖಾ ವಿಚಾರಣಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕ ಅದನ್ನು ಆಧರಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಪಾವಗಡದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ಆತಹತ್ಯೆ ಪ್ರಕರಣ ಕುರಿತು ಮಾತನಾಡಿದ ಸಚಿವರು, ಇಲಾಖಾ ಮಟ್ಟದಲ್ಲಿ ಸಂಪೂರ್ಣ ಪರಿಶೀಲನೆ ನಡೆಯಲಿದೆ ಎಂದರು.ಹಿರಿಯ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಗಳು ತಪುö್ಪ ಮಾಡಿದಾಗ
ನೋಟಿಸ್ ನೀಡುವುದು ಸಾಮಾನ್ಯ. ತಪ್ಪು ದೃಢಪಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular