ಬೆಂಗಳೂರು : ಕಳೆದ 2 ತಿಂಗಳುಗಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟಕ್ಕಿರುವ ಬಗ್ಗೆ ಭಾರಿ ಚರ್ಚೆಗಳೇ ನಡೆಯುತ್ತಿವೆ. ಬೆಂಗಳೂರಿನ ಮೂಲದವರೇ ಆದ ಜೆರೋಧಾ ಸಂಸ್ಥೆ ಮಾಲೀಕರಾದ ನಿಖಿಲ್ ಕಾಮತ್ ಆರ್‌ಸಿಬಿ ಖರೀದಿಗೆ ಆಸಕ್ತಿ ವಹಿಸಿದ್ದಾರೆ ಎಂದು ಒಂದು ಸುದ್ದಿಯಾದರೆ, ಮತ್ತೊಂದೆಡೆ ಕನ್ನಡ ಚಿತ್ರರಂಗ ಹೆಸರಾಂತ ಪ್ರೊಡಕ್ಷನ್ ಸಂಸ್ಥೆಯಾಗಿರುವ ಹೊಂಬಾಳೆಯೂ ಪಾಲುದಾರಿಕೆ ಪಡೆಯುವುದು ಬಹುತೇಕ ಖಚಿತ ಎನ್ನುವ ಸುದ್ದಿಯೂ ಕೇಳಿ ಬಂದಿತ್ತು. ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆಯೊಂದೇ ಬಾಕಿ ಎಂಬಂತೆ ಪೋಸ್ಟ್ಗಳು ಹರಿದಾಡಿದವು. ಅದರೆ, ಇವೆಲ್ಲಾ ವದಂತಿಗಳೆAಬುದು ಎಂಬುದು ಸ್ಪಷ್ಟವಾಗಿದೆ.
ಸದ್ಯ ಹೊಂಬಾಳೆ ಫೀಮ್ಲ್ಸ್ ಆರ್‌ಸಿಬಿ ಖರೀದಿ ಪ್ರಕ್ರಿಯೆಯಲ್ಲೇ ಎಲ್ಲೂ ಗುರುತಿಸಿಕೊಳ್ಳುತ್ತಿಲ್ಲ. ಅಷ್ಟೇ ಏಕೆ ಹೊಂಬಾಳೆ ಮಾಲೀಕರಾದ ವಿಜಯ್ ಕಿರಗಂದೂರ್ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಆರ್‌ಸಿಬಿ ಖರೀದಿ ಬಗ್ಗೆ ಯಾವುದೇ ಚರ್ಚೆಗಳೇ ನಡೆದಿಲ್ಲ ಎಂದಿದ್ದಾರೆ. ಹೌದು, ಇತ್ತೀಚ್ಚಿನ ದಿನಗಳಲ್ಲಿ ಆರ್‌ಸಿಬಿ ತಂಡವನ್ನು ಕನ್ನಡಿಗರೇ ಖರೀದಿಸಲಿದ್ದು, ಮಾಲೀಕತ್ವ ಬದಲಾಗಲಿದೆ ಎಂದು ಹಲವಾರು ಮಂದಿ ಚರ್ಚಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾರಾಟಕ್ಕಿರುವುದು ಖಚಿತವೇ ಆಗಿದ್ದು, ಈ ಹಿಂದೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆದರ್ ಪೂನವಲ್ಲಾ ಮತ್ತು ಬ್ರೋಕರೇಜ್ ಪ್ಲಾಟ್‌ಫಾರ್ಮ್ ಜೆರೋಧಾದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಗುಂಪಿನ ಅಧ್ಯಕ್ಷ ರಂಜನ್ ಪೈ ಅವರು ಆರ್‌ಸಿಬಿಯನ್ನು ಬಿಡ್ ಮಾಡಲು ಒಕ್ಕೂಟವನ್ನು ರಚಿಸಲು ಮುಂದಾಗಿದ್ದರು ಎಂದು ಹಲವು ವರದಿಗಳು ಬಂದಿದ್ದವು. ಆದರೆ, ಇದರ ಮಧ್ಯೆ ಹೊಂಬಾಳೆ ಫಿಲಂಸ್ ಹೆಸರು ಕೇಳಿ ಬಂದಿರುವುದೇ ಅಚ್ಚರಿದಾಯಕ.
ಐಪಿಎಲ್ ಫ್ರಾಂಚೈಸಿಯನ್ನು2 ಬಿಲಿಯನ್ ಡಾಲರ್ (ಸುಮಾರು 17,555 ಕೋಟಿ) ಗೆ ಮಾರಾಟ ಮಾಡಲು ಡಿಯಾಜಿಯೊ ಯೋಜಿಸುತ್ತಿದೆ. ಆದರೆ ಪೂನವಾಲಾ ಸಂಸ್ಥೆ ಮಾಲೀಕರಿಗೆ ಇದು ಒಪ್ಪಿಗೆಯಾಗದೇ, ಆರ್‌ಸಿಬಿಯ ಮೌಲ್ಯಮಾಪನದ ಬಗ್ಗೆ ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರು. ಕಳೆದ ಎರಡು ವರ್ಷಗಳಿಂದ ಐಪಿಎಲ್‌ನ ಮೌಲ್ಯಮಾಪನ ಕಡಿಮೆಯಾಗಿರುವುದು ಹಾಗೂ ಕೊಹ್ಲಿ ನಿವೃತ್ತಿ ವಿಷಯಗಳು ಕೇಳಿ ಬಂದಿರುವುದು ಆರ್‌ಸಿಬಿಯ ಮೌಲ್ಯವನ್ನು ಕುಗ್ಗಿಸಿದೆ. ಹಾಗಾಗಿ, ಸದ್ಯ ಆರ್‌ಸಿಬಿಯನ್ನು ಖರೀದಿಸಲು ಹಲವು ದೊಡ್ಡ ದೊಡ್ಡ ಸಂಸ್ಥೆಗಳೇ ಮುಂದಾಗಲು ಯೋಚಿಸುತ್ತಿವೆ. ಹಾಗಾಗಿ, ಹೊಂಬಾಳೆ ಸಂಸ್ಥೆಯೂ ಈಗ ಇದೇ ಹಾದಿಯಲ್ಲಿ ಯೋಚಿಸುತ್ತಿದೆ.
ಆದರೆ, ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಸಿಬಿ ಯಾರ ಪಾಲಾಗಲಿದೆ ಎಂಬುದು ೨೦೨೬ರ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಪಷ್ಟ ಉತ್ತರ ಸಿಗಲಿದೆ.
ಐಪಿಎಲ್ ಫ್ರಾಂಚೈಸಿಯನ್ನು ಹೊಂದುವುದು ಅಷ್ಟೊಂದು ಸುಲಭವಲ್ಲ. ಅದರಲ್ಲೂ ಆರ್‌ಸಿಬಿಯಂತಹ ಚಾಂಪಿಯನ್ ತAಡವನ್ನು ಖರೀದಿಸುವುದು ಕೇವಲ ದುಡ್ಡಿದ್ದರಷ್ಟೇ ಸಾಕಾಗಲ್ಲ. ಸಾಕಷ್ಟು ಅಡೆತಡೆಗಳಿವೆ. ಅದರಲ್ಲೂ ಬೆಂಗಳೂರಿನಲ್ಲಿ ಮುಂದಿನ ಐಪಿಎಲ್ ಪಂದ್ಯಗಳು ಆಯೋಜನೆಗೊಳ್ಳದೇ ಹೋದಲ್ಲಿ, ಆರ್ಥಿಕವಾಗಿ ಹೊಡೆತ ಬೀಳಲಿದೆ. ಕೆಎಸ್‌ಸಿಎ ಕಾಲ್ತುಳಿತದ ನಂತರ ಆರ್‌ಸಿಬಿ ಬಗ್ಗೆ ಅಭಿಮಾನಿಗಳೇ ಅಸಮಾಧಾನ ಹೊಂದಿದ್ದಾರೆ. ಈ ಮಧ್ಯೆ ಆರ್‌ಸಿಬಿ ಸಿಇಓ ಮೇಲೆ ಸೇರಿದಂತೆ ಹಲವರ ವಿರುದ್ಧ ಪ್ರಕರಣ
ದಾಖಲಾಗಿದೆ. ಇವೆಲ್ಲಾಗಳ ಹೊರತಾಗಿ ಹೊಸ ಸಂಸ್ಥೆ ಆರ್‌ಸಿಬಿಯನ್ನು ಖರೀದಿಸಬೇಕು. ಐಪಿಎಲ್‌ನಲ್ಲಿ ಗೆದ್ದರಷ್ಟೇ ಹಣ, ಇಲ್ಲವಾದಲ್ಲಿ ಕೈ ಸುಡಲಿದೆ. ಇದರಿಂದ, ಸದ್ಯ ಹೊಂಬಾಳೆ ಫ್ಲಿಮ್ಸ್ ಸಂಸ್ಥೆ ಆರ್‌ಸಿಬಿಯಿಂದ ಹಿಂದೆ ಸರಿಯುವುದು ಖಚಿತ.
ಆರ್‌ಸಿಬಿ ಖರೀದಿ ಪ್ರಕ್ರಿಯೆಯಲ್ಲಿ ಹೊಂಬಾಳೆ ಸಂಸ್ಥೆ ಪಾಲ್ಗೊಳ್ಳುತ್ತಿದೆ ಎಂಬುದು ಒಂದು ವದಂತಿಯಷ್ಟೇ. ಸದ್ಯಕ್ಕೆ ನಾವು ಅದರ ಬಗ್ಗೆ ಚರ್ಚೆಯೂ ನಡೆಸುತ್ತಿಲ್ಲ. ಆರ್‌ಸಿಬಿ ಖರೀದಿ ಪ್ರಕ್ರಿಯೆ ಅಷ್ಟೊಂದು ಸುಲಭವೂ ಅಲ್ಲ. ಸಾಕಷ್ಟು ವಿಚಾರಗಳು ಅಡಗಿವೆ. ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿ ಹರಿದಾಡಿದ್ದು, ಇವೆಲ್ಲಾ ಊಹಾಪೋಹಗಳಷ್ಟೇ. ಹಾಗಾಗಿ, ಈ ವದಂತಿಯನ್ನು ಸದ್ಯಕ್ಕೆ ಯಾರೂ ನಂಬಬಾರದು ಎಂದು ವಿಜಯ್ ಕಿರಗಂದೂರ್ ತಿಳಿಸಿದ್ದಾರೆ.


