ಬೆಂಗಳೂರು : ದಿ ರಾಮೇಶ್ವರಂ ಕೆಫೆ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಮತ್ತೊಬ್ಬ ಆರೋಪಿ ಮಾಜ್ ಮುನೀರ್‌ನನ್ನು ವಶಕ್ಕೆ ಪಡೆದಿದೆ.
ಬಾಡಿ ವಾರಂಟ್ ಮೇಲೆ ಎನ್‌ಐಎ ಅಧಿಕಾರಿಗಳು ಮಾಜ್ ಮುನೀರ್‌ನನ್ನು 7 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಮುನೀರ್ ಬಂಧನವಾಗಿತ್ತು.
ಬAಧನ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದನು. ಆರೋಪಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿಯಾಗಿದ್ದು, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಸಂಬAಧ ಮುನೀರ್ ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ.
ಕೆಫೆ ಸ್ಫೋಟದ ಸುಳಿವು:
೨೦೨೦ರ ಜನವರಿಯಲ್ಲಿ ಎನ್‌ಐಎ ದಾಳಿ ವೇಳೆ ೭ ಜನರನ್ನು ಬಂಧನ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಸ್ಫೋಟದ ಸಂಚು ರೂಪಿಸಿರುವುದು ಬಯಲಾಗಿತ್ತು. ಈ ಗ್ಯಾಂಗ್‌ನಲ್ಲಿ ಕೇವಲ 7 ಜನ ಮಾತ್ರವಲ್ಲ ಇನ್ನಷ್ಟು ಯುವಕರು ಇರುವುದು ಗೊತ್ತಾಗಿತ್ತು. ಅಂದು ಪರಾರಿಯಾಗಿದ್ದವರೇ ಮಾರ್ಚ್ 1 ರಂದು ದಿ ರಾಮೇಶ್ವರಂ ಕೆಫೆ ಮೇಲೆ ಬಾಂಬ್ ದಾಳಿ ಮಾಡಿರೋ ಸುಳಿವು ಎನ್‌ಐಎಗೆ ಸಿಕ್ಕಿದೆ ಎನ್ನಲಾಗಿದೆ.
ಶಂಕಿತರ ಪಟ್ಟಿ:
ಅಲಿಹಿಂದ್ ಮಾಡ್ಯೂಲ್ ಸಂಘಟನೆ ಹಿAದೂ ಮುಖಂಡರನ್ನೇ ಟಾರ್ಗೆಟ್ ಮಾಡಿ ಸ್ಫೋಟಕ್ಕೆ ಸಂಚು ರೂಪಿಸಿತ್ತು. ಈಗಲೂ ಅದೇ ಸಂಘಟನೆಯ ಕೈವಾಡ ಇದೆ ಎನ್ನುವ ಮಾಹಿತಿ ಬಂದಿದೆ. ಹಿಂದೆ ಪರಾರಿಯಾಗಿದ್ದ ಅಬ್ದುಲ್ ಮತೀನ್, ಮುಜಾಫೀರ್ ಹುಸೇನ್, ಸೈಯದ್ ಅಲಿ ಈವರೆಗೂ ಪತ್ತೆಯಾಗಿಲ್ಲ. ಅವರ ಮೇಲೆ ಸಂಶಯ ವ್ಯಕ್ತಪಡಿಸಿರುವ ಎನ್‌ಐಎ ಶಂಕಿತರ ಪಟ್ಟಿಯನ್ನು ತಯಾರಿಸಿದೆ. ಕೆಫೆ ಸ್ಫೋಟದಲ್ಲಿ ಬಳ್ಳಾರಿ ಸೇರಿದಂತೆ ಪರಪ್ಪನ ಅಗ್ರಹಾರದಲ್ಲಿ ಬಂಧಿತರಾಗಿರುವವರು ಸೇರಿದಂತೆ ಇಲ್ಲಿಯವರೆಗೆ ಒಟ್ಟು ಆರು ಜನ ಶಂಕಿತರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.