Saturday, November 23, 2024
Flats for sale
Homeರಾಜ್ಯಬೆಂಗಳೂರು : ರಾಜ್ಯ ಸರಕಾರದಿಂದ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್ : ಆಗಸ್ಟ್​ 1 ರಿಂದ 7ನೇ...

ಬೆಂಗಳೂರು : ರಾಜ್ಯ ಸರಕಾರದಿಂದ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್ : ಆಗಸ್ಟ್​ 1 ರಿಂದ 7ನೇ ವೇತನ ಆಯೋಗ ಜಾರಿಗೆ ಸಂಪುಟ ಸಭೆ ತೀರ್ಮಾನ .

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಕನಸು ನನಸಾಗಿದೆ. ನೌಕರರ ಬೇಡಿಕೆಯಂತೆ ರಾಜ್ಯದಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರವು ತೀರ್ಮಾನ ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಆಗಸ್ಟ್‌ 1ರಿಂದಲೇ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಲಿವೆ.

ಶೇ 27.5 ವೇತನ ಪರಿಷ್ಕರಣೆ ಮಾಡಿದ ವರದಿಯನ್ನು ಮಾರ್ಚ್‌ 16 ರಂದು ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಸಿಎಂ ಸಿದ್ದರಾಮಯ್ಯನವರಿಗೆ ನೀಡಿತ್ತು. ಬಳಿಕ ಸಿಎಂ, ಇದನ್ನು ಜಾರಿ ತರುವ ಬಗ್ಗೆ ಹಣಕಾಸು ಇಲಾಖೆಯ ಮಾಹಿತಿ ಕೇಳಿದ್ದ‌ರು. ಇದೀಗ ಹಣಕಾಸು ಇಲಾಖೆ ವರದಿ ಬಳಿಕ ಸಿದ್ದರಾಮಯ್ಯ ಅವರು ಆಗಸ್ಟ್ 1 ರಿಂದ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ತೀರ್ಮಾನ ಪ್ರಕಟಿಸಿದ್ದಾರೆ. ಇಂದು(ಜುಲೈ 15) ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಎ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು ಮೂಲ ವೇತನ 17,000 ರೂ. ಇದ್ದರೆ, ತುಟ್ಟಿಭತ್ಯೆ ಶೇ. 31 (5,270 ರೂ.) ಹಾಗೂ ಶೇ.27.50 (4,675 ರೂ. ) ಫಿಟ್ಮೆಂಟ್‌ ಸೇರಿ ಒಟ್ಟು 26,945 ಸಿಗುತ್ತಿತ್ತು. ಇನ್ನು 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27,000 ಇದ್ದರೆ, ಅಂದಾಜು ತುಟ್ಟಿ ಭತ್ಯೆ ಶೇ.8.5 (2295 ರೂ), ಮನೆ ಬಾಡಿಗೆ ಭತ್ಯೆ ಶೇ.20 (5,400 ರೂ.), ವೈದ್ಯಕೀಯ 500, ನಗರ ಪರಿಹಾರ ಭತ್ಯೆ (ಸಿಸಿಎ) 750 ರೂ. ಸೇರಿ ಒಟ್ಟು 35,945 (01-01-2024ಕ್ಕೆ) ರೂ. ಸಿಗಲಿದೆ. 6ನೇ ವೇತನ ಆಯೋಗದಲ್ಲಾದರೆ ಒಟ್ಟು 29,005 ರೂ. ಸಿಗುತ್ತಿತ್ತು. ಪರಿಷ್ಕೃತ ವೇತನದಲ್ಲಿ 6940 ರೂ. ಹೆಚ್ಚಳವಾಗಲಿದೆ.

ಅದೇ ರೀತಿ ಎ ವಲಯದಲ್ಲಿ ಕಾರ್ಯ ನಿರ್ವಹಿಸುವ ಎ ಮತ್ತು ಬಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು 17,000 ರೂ. ವೇತನ ಇದ್ದರೆ, ಶೇ. 31 ತುಟ್ಟಿ ಭತ್ಯೆ (5270 ರೂ.), ಫಿಟ್ಮೆಂಟ್‌ ಶೇ.27.50 (4675 ರೂ.) ಸೇರಿ ಒಟ್ಟು 26945 ರೂ ವೇತನ ಸಿಗುತ್ತಿತ್ತು. ಆದರೆ, 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27000 ಇದ್ದರೆ, ತುಟ್ಟಿ ಭತ್ಯೆ ಶೇ.8.5 (2298 ರೂ.), ಮನೆ ಬಾಡಿಗೆ ಭತ್ಯೆ ಶೇ.20 (5400 ರೂ.), ನಗರ ಪರಿಹಾರ ಭತ್ಯೆ(ಸಿಸಿಎ) 900 ಸೇರಿ ಒಟ್ಟು 35,595 ವೇತನ ಸಿಗಲಿದೆ. ಇದು 6ನೇ ವೇತನ ಆಯೋಗದ ಅವಧಿಯಲ್ಲಿ 27,545 ರೂ. ಆಗಿದೆ. ಪರಿಷ್ಕೃತ ವೇತನದಲ್ಲಿ 8,050 ರೂ. ಹೆಚ್ಚಳವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular