Saturday, March 7, 2026
Flats for sale
Homeರಾಜ್ಯಬೆಂಗಳೂರು : ರಾಜ್ಯ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ...

ಬೆಂಗಳೂರು : ರಾಜ್ಯ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಕೊನೆಗೂ 7 ತಿಂಗಳ ನಂತರ ಹುದ್ದೆ.

ಬೆಂಗಳೂರು : ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ರಾಜ್ಯ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದ ಹಿನ್ನೆಲೆಯಲ್ಲಿ ಕಳೆದ ಏಳು ತಿಂಗಳುಗಳಿAದ ಯಾವುದೇ ಹುದ್ದೆಗಳಿಲ್ಲದೇ ವನವಾಸ ಅನುಭವಿಸುತ್ತಿದ್ದ ಇಬ್ಬರು
ಐಎಎಸ್ ಮತ್ತು ಐಪಿಎಸ್ ಮಹಿಳಾ ಅಧಿಕಾರಿಗಳಿಗೆ ಕೊನೆಗೂ ಸರಕಾರ ಹುದ್ದೆ ದಯ ಪಾಲಿಸಿದೆ.

ರಾಜ್ಯದ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಬುಧವಾರ ಕರ್ನಾಟಕ ಗೆಜೆಟೇರಿಯರ್ ಮುಖ್ಯ ಸಂಪಾದಕಿ ಹುದ್ದೆಗೆ ನಿಯೋಜಿಸಲಾಗಿತ್ತು. ಇದರ ಬೆನ್ನಲ್ಲೇ ಗುರುವಾರ ಬೆಳಗ್ಗೆ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಆಂತರಿಕ ಭದ್ರತಾ ವಿಭಾಗದ ಪೊಲೀಸ್ಮ ಹಾನಿರೀಕ್ಷಕಿ (ಐಜಿಪಿ) ಹುದ್ದೆ ನೀಡಲಾಗಿದೆ.


ಕಳೆದ ಫೆಬ್ರವರಿಯಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಸಾಮಾಜಿಕ ಜಾಲತಾಣಗಳ ಮುಖಾಂತರ ರೋಹಿಣಿ ಸಿಂಧೂರಿ ಅವರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು. ಅದಕ್ಕೆ ರೋಹಿಣಿ ಸಿಂಧೂರಿ ಅವರು ಮಾಧ್ಯಮಗಳ ಮೂಲಕ ತಿರುಗೇಟು ನೀಡಿದ್ದರು. ನಾಲ್ಕೆöÊದು ದಿನಗಳ ಸತತ ಪರಸ್ಪರ ವಾಗ್ದಾಳಿ
ನಂತರ ಸರಕಾರ ಇಬ್ಬರನ್ನೂ ಅವರಿದ್ದ ಹುದ್ದೆಗಳಿಂದ ಯಾವುದೇ ಹುದ್ದೆ ತೋರಿಸದೇ ವರ್ಗಾವಣೆಗೊಳಿಸಿತ್ತು.
ಈ ಮಧ್ಯೆ ಪರಸ್ಪರ ಅಧಿಕಾರಿಗಳು ಕಾನೂನು ಸಮರ ಆರಂಭಿಸಿದ್ದರು. ನ್ಯಾಯಾಲಯದಲ್ಲಿ ಪರಸ್ಪರರ ನಡುವೆ
ಕಾನೂನು ಹೋರಾಟ ಮುಂದುವರಿದಿದೆ. ಈ ಮಧ್ಯೆ ಏಳು ತಿಂಗಳ ನಂತರ ರಾಜ್ಯ ಸರಕಾರ ಇಬ್ಬರೂ ಅಧಿಕಾರಿಗಳನ್ನು ಹುದ್ದೆಗಳನ್ನು ನೀಡಿ ಆದೇಶ ಹೊರಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular