ಬೆಂಗಳೂರು : ಸಂಚಾರಿ ಪೊಲೀಸರು ಇಲ್ಲವೆಂದಾದರೆ ಅಲ್ಲಿ ಬೇರೆ ಏನೋ ಇದೆ ಎಂದು ವಾಹನ ಸವಾರರು ತಿಳಿದುಕೊಳ್ಳಬೇಕು .ಜನವರಿಯಿಂದ ಅಕ್ಟೋಬರ್ ತಿಂಗಳಲ್ಲಿ ನಗರದಲ್ಲಿ ಬರೋಬ್ಬರಿ 68 ಲಕ್ಷಕ್ಕೂ ಹೆಚ್ಚು ಅಧಿಕ ಸಂಚಾರ ಉಲ್ಲಂಘನೆ ಪ್ರಕರಣಗಳು ಕ್ಯಾಮೆರಾ ಕಣ್ಣಲ್ಲಿ ದಾಖಲಾಗಿವೆ.
ಕಳೆದ ಕೆಲವು ತಿಂಗಳಿನಿAದ ಬೆಂಗಳೂರು ಸಂಚಾರ ಪೊಲೀಸರು ರಸ್ತೆಯಲ್ಲಿ ಪರಿಶೀಲನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ, ಪೊಲೀಸರು ರಸ್ತೆಯಲ್ಲಿ ಇಲ್ಲ ಎಂದು ಉಲ್ಲಂಘನೆ ಮಾಡಿದವರೇ ಹೆಚ್ಚು. ಕೇವಲ 10ತಿಂಗಳಲ್ಲಿ ಬರೋಬ್ಬರಿ 68 ಲಕ್ಷಕ್ಕೂ ಅಧಿಕ ಟ್ರಾಫಿಕ್ ರೂಲ್ಸ್ ಬ್ರೇಕ್ ಕೇಸ್ ದಾಖಲು ಮಾಡಿದ್ದಾರೆ. ಪೊಲೀಸರು ತಂತ್ರಜ್ಞಾನ ಬಳಸಿ ಕೇಸ್ ಮಾಡಿ, ನಂತರ ದಂಡ ವಸೂಲಿಗೆ ಮುಂದಾಗಿದ್ದಾರೆ.
ನಗರದಲ್ಲಿ ಸಂಚಾರ ಮಾಡುವಾಗ ಯಾವುದೇ ಸಂಚಾರ ನಿಯಮ ಉಲ್ಲಂಘನೆಯಾದರೆ ಭಾವಚಿತ್ರ ಸಮೇತ ನೋಟಿಸ್ ನೀಡಲಾಗುತ್ತದೆ. ಸಿಸಿಟಿವಿ ಪರಿಶೀಲನೆ ನಡೆಸಿ ಕೇಸ್ ಹಾಕ್ತಿದ್ದ ಪೊಲೀಸರು, ತಂತ್ರಜ್ಞಾನದ ಮೂಲಕ ಕೇಸ್ ಹಾಕಿ ದಂಡ ವಸೂಲಿಗೆ ಫ್ಲಾನ್ ಮಾಡಿದ್ದಾರೆ. ಆದರೆ, ಟ್ರಾಫಿಕ್ಪೊ ಲೀಸರ ಟೆಕ್ನಾಲಜಿಗೆ ವಾಹನ ಸವಾರರು ಡೋಂಟ್ ಕೇರ್ ಎಂದಿದ್ದಾರೆ. 2023 ರ ಹತ್ತು ತಿಂಗಳಲ್ಲಿ ಹೆಲ್ಮೆಟ್ ಧರಿಸದೇ ಸಂಚಾರ ಮಾಡುವ ಸವಾರರ ಸಂಖ್ಯೆಗೆ ಮೀತಿಯೆ ಇಲ್ಲ. ಹೆಲ್ಮೆಟ್ ರಹಿತ ಬೈಕ್ ಚಾಲನೆ 31.49 ಲಕ್ಷ ಕೇಸ್ ದಾಖಲು ಮಾಡಲಾಗಿದೆ. ಹೆಲ್ಮೆಟ್ ಧರಿಸದ ಹಿಂಬದಿ ಸವಾರ 8.97ಲಕ್ಷ ಕೇಸ್ ದಾಖಲಿಸಲಾಗಿದ್ದು, ಬೈಕ್ ಸವಾರರಿಂದ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಕ್ಕೆ 8.46 ಲಕ್ಷ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ನಗರದ ನೋ ಪಾರ್ಕಿಂಗ್ ರಸ್ತೆಯಲ್ಲಿ ತಪ್ಪಾಗಿ ಪಾರ್ಕಿಂಗ್ ಮಾಡಿದ ವಾಹನಗಳ
ಮೇಲೆ 8.91 ಲಕ್ಷ ಕೇಸ್ ದಾಖಲು ಮಾಡಲಾಗಿದೆ. ನೋ ಎಂಟ್ರಿಯಲ್ಲಿ ವಾಹನ ಚಲಾಯಿಸಿದ 1.5 ಲಕ್ಷ ಪ್ರಕರಣ, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದು6.15 ಲಕ್ಷ ಪ್ರಕರಣ ಸೇರಿದಂತೆ ಒಟ್ಟಾರೆ2023ರ ಜನವರಿಯಿಂದ ಈವರೆಗೆ 68.30 ಲಕ್ಷ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ, ಸದರಿ ವರ್ಷದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ರಿಯಾಯ್ತಿ ದರದಲ್ಲಿ ದಂಡ ಪಾವತಿಗೆ ಸರ್ಕಾರದಿಂದ ಅವಕಾಶ ನೀಡಿಲ್ಲ.
ಸಿಲಿಕಾನ್ ಸಿಟಿ ಟ್ರಾಫಿಕ್ ಪೊಲೀಸರು ಒಂದೆಡೆ ಪೇಪರ್ ಲೇಸ್ ಕೇಸ್ ಹಾಕುವ ಸಲುವಾಗಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಇನ್ನೊಂದೆಡೆ
ಹೆಲ್ಮೆಟ್ ರಹಿತ ಬೈಕ್ ಚಾಲನೆ 31.49ಲಕ್ಷ
ಹೆಲ್ಮೆಟ್ ಧರಿಸದ ಹಿಂಬದಿ ಸವಾರ 8.97 ಲಕ್ಷ
ಟ್ರಾಫಿಕ್ ಸಿಗ್ನಲ್ ಜಂಪ್- 8.46 ಲಕ್ಷ
ತಪ್ಪಾಗಿ ಪಾರ್ಕಿಂಗ್- 8.91 ಲಕ್ಷ
ನೋ ಎಂಟ್ರಿ-1.15 ಲಕ್ಷ
ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದು 6.15 ಲಕ್ಷ
ತಂತ್ರಜ್ಞಾನ, ಸಿಸಿಟಿವಿ ಏನೇ ಇದ್ರು ನಾವು ನೋಡಲ್ಲ ಅಂತಾ ಸಂಚಾರಿಸುವ ವಾಹನ ಸವಾರರು. ಜೊತೆಗೆ, ವಾಹನ ಸವಾರರಿಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಬಗ್ಗೆ ಜಾಗೃತಿ ಕೊರತೆಯೂ ಉಂಟಾಗಿದೆ. ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸದ ಪರಿಣಾಮ ಟ್ರಾಫಿಕ್ ರೂಲ್ಸ್ ಬ್ರೇಕ್ ಆಗ್ತಿರೋ ಸಾಧ್ಯತೆಯಿದೆ. ಆದರೆ, ವಾಹನ ಸವಾರರು ಮಾತ್ರ ದುಬಾರಿ ಬೆಲೆಯ ದಂಡ ತೆರುವುದನ್ನೂ ಖಚಿತ ಆಗುತ್ತಿದೆ.
ಅಪರಾಧ ,ಇನ್ನಿತರ ಕೃತ್ಯಗಳು ಹೆಚ್ಚಾಗುವುದರಿಂದ ಪೊಲೀಸ್ ಇಲಾಖೆ ಪ್ರತಿಷ್ಠಿತ ನಗರಗಳಲ್ಲಿ ಉತ್ತಮ ಗುಣಮಟ್ಟವುಳ್ಳ ಹಾಗೂ ನವೀಕೃತ ಸಿ .ಸಿ ಕ್ಯಾಮೆರಾಗಳನ್ನು ಅಳವಡಿಸಿದೆ ,ಇದರಲ್ಲಿ ಇಂತಿಷ್ಟು ಮೀಟರ್ ಗಳ ವರೆಗೆ ಜೂಮ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ,ಸವಾರರು ತಪ್ಪಿಸಿ ಕೊಳ್ಳುವ ಪರಿವೆ ಇರುವುದಿಲ್ಲ.(COURTSEY S.K )


