Friday, March 13, 2026
Flats for sale
Homeರಾಜ್ಯಬೆಂಗಳೂರು : ರಾಜ್ಯದ 22 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್ ? ಇಲ್ಲಿದೆ ಮಾಹಿತಿ ನೋಡಿ...

ಬೆಂಗಳೂರು : ರಾಜ್ಯದ 22 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್ ? ಇಲ್ಲಿದೆ ಮಾಹಿತಿ ನೋಡಿ !

ಬೆಂಗಳೂರು : ಲೋಕಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು ಕರ್ನಾಟಕದ 28 ಕ್ಷೇತ್ರಗಳ ಪೈಕಿ 18 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್​ ಫೈನಲ್​ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಬಾಕಿ 10 ಕ್ಷೇತ್ರಗಳ ಟಕೆಟ್ ಗೊಂದಲ ಮುಂದುವರೆದಿದೆ.ಚುನಾವಣೆ ಸಂಬಂಧ ನಡೆಯುತ್ತಿದ್ದ ಬಿಜೆಪಿ ಮೀಟಿಂಗ್​ ಅಂತ್ಯವಾಗಿದೆ.

ಬಿಜೆಪಿಗೆ ಕಗ್ಗಂಟಾಗಿರೋ ಕ್ಷೇತ್ರಗಳಾವುವು?
1.ಮೈಸೂರು, 2.ಉತ್ತರಕನ್ನಡ, 3.ಚಾಮರಾಜನಗರ, 4.ಬೆಂಗಳೂರು ಉತ್ತರ. 5.ಚಿಕ್ಕಬಳ್ಳಾಪುರ. 6.ಚಿಕ್ಕಮಗಳೂರು, 7.ಹಾವೇರಿ, 8.ಬೆಳಗಾವಿ, 9.ಮಂಗಳೂರು, 10.ದಾವಣಗೆರೆ ಕ್ಷೇತ್ರದ ಟಿಕೆಟ್​ ಕಗ್ಗಂಟಾಗಿ ಉಳಿದೆ. ಯಾಕಂದ್ರೆ, ಈ ಕ್ಷೇತ್ರಗಳಿಗೆ ಟಿಕೆಟ್ ಆಕಾಂಕ್ಷಿಗಳು ಇಬ್ಬರು-ಮೂವರು ಇದ್ದಾರೆ. ಹೀಗಾಗಿ ಈ ಕ್ಷೇತ್ರಗಳ ಟಿಕೆಟ್ ಗೊಂದಲ ಮುಂದುವರೆದಿದೆ.

ಮೂಲಗಳ ಪ್ರಕಾರ ಶೋಭಾಗೆ ಟಿಕೇಟ್ ಬಹುತೇಕ ಫಿಕ್ಸ್​ ಆಗಿದ್ದು ಕ್ಷೇತ್ರ ಬದಲಾಗಿದೆ. ದಕ್ಷಿಣ ಕನ್ನಡ ಟಿಕೆಟ್​​ ನಳಿನ್ ಕುಮಾರ್ ಕಟೀಲ್​​​ಗೆ ಟಿಕೆಟ್​ ಬಹುತೇಕ ಡೌಟ್​ ಆಗಿದೆ ಎಂಬ ಮಾಹಿತಿ ದೊರೆತಿದೆ. ಮೈಸೂರಿನಿಂದ ಯದುವೀರ್ ಒಡೆಯರ್​ಗೆ ಬಹುತೇಕ ಫಿಕ್ಸ್ ಆಗಿದ್ದು ಪ್ರತಾಪ್​ ಸಿಂಹಗೆ ಮೈಸೂರು ಟಿಕೆಟ್​ ಸಿಗೋದು ಅನುಮಾನವಾಗಿದೆ.ತುಮಕೂರಿನಿಂದ ವಿ.ಸೋಮಣ್ಣಗೆ ಟಿಕೆಟ್ ಸಿಗೋ ಸಾಧ್ಯತೆಯಿದ್ದು ಬೆಂಗಳೂರು ಗ್ರಾಮಾಂತರಕ್ಕೆ ಡಾ. ಮಂಜುನಾಥ್, ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಸ್ಪರ್ಧೆ ಮಾಡಲಿದ್ದು, ಚಿಕ್ಕಬಳ್ಳಾಪುರದ ಟಿಕೆಟ್ ಡಾ.ಕೆ.ಸುಧಾಕರ್​ಗೆ ಸಿಗಲಿದೆ ಎಂದು ತಿಳಿದುಬಂದಿದೆ.

ಫೈನಲ್​ ಮಾಡಲಾದ ಬಿಜೆಪಿ ಟಿಕೆಟ್​ ಪಟ್ಟಿ ​ಇಲ್ಲಿದೆ..!

ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್​.ಮಂಜುನಾಥ್​
ಚಿತ್ರದುರ್ಗ- ನಾರಾಯಣಸ್ವಾಮಿ
ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ
ಬೆಳಗಾವಿ- ಜಗದೀಶ್ ಶೆಟ್ಟರ್
ಚಿಕ್ಕೋಡಿ- ರಮೇಶ್ ಕತ್ತಿ
ಕಲ್ಬುರ್ಗಿ- ಉಮೇಶ್ ಜಾದವ್
ಬಿಜಾಪುರ- ಗೋವಿಂದ ಕಾರಜೋಳ
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್
ಶಿವಮೊಗ್ಗ – ಬಿ.ವೈ.ರಾಘವೇಂದ್ರ
ಹಾವೇರಿ – ಬಸವರಾಜ ಬೊಮ್ಮಾಯಿ
ತುಮಕೂರು- ವಿ.ಸೋಮಣ್ಣ
ಮೈಸೂರು – ಯದುವೀರ್​ ಒಡೆಯರ್
ಬೆಳಗಾವಿ- ಜಗದೀಶ್​ ಶೆಟ್ಟರ್​
ಚಿಕ್ಕೋಡಿ – ರಮೇಶ್​ ಕತ್ತಿ

RELATED ARTICLES

LEAVE A REPLY

Please enter your comment!
Please enter your name here

Most Popular