ಬೆಂಗಳೂರು : ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ, ಚಿತ್ರನಟ ಸಿಹಿಕಹಿ ಚಂದ್ರು, ಹಿರಿಯ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್, ಲೇಖಕಿ ದು.ಸರಸ್ವತಿ, ಡಾ. ಮೀರಾ ಶಿವಲಿಂಗಯ್ಯ, ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ಉಪಸಂಪಾದಕ ರಾಜು ಮಳವಳ್ಳಿ ಸೇರಿದಂತೆ ನೂರು ಮಂದಿ ವಿವಿಧ ಕ್ಷೇತ್ರಗಳ ಗಣ್ಯರು ಸುವರ್ಣ ಮಹೋತ್ಸವ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ' ವೆಂದು ನಾಮಕರಣಗೊಂಡು ಐವತ್ತು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ನಾಡು-ನುಡಿಗೆ ಸೇವೆ ಸಲ್ಲಿಸಿದ ಸಾಧಕರಿಗೆ
ಸುವರ್ಣ ಮಹೋತ್ಸವ’ ಪ್ರಶಸ್ತಿ ನೀಡುತ್ತಿದ್ದು ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು, ಪ್ರಶಸ್ತಿಫಲಕವನ್ನೊಳಗೊಂಡಿದೆ.
ನವೆಂಬರ್ ಒಂದರಂದು ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ. ಲೇಖಕಿ ಡಾ. ವಸುಂಧರಾ ಭೂಪತಿ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ
ಜಾನಪದ : ಸಿ.ವಿ.ವೀರಣ್ಣ, ಪ್ರೊ. ಹಿ.ಚಿ.ಬೋರಲಿಂಗಯ್ಯ, ತಂಬೂರಿ ಉಮಾನಾಯ್ಕ, ಕೆಂಚಯ್ಯ, ಗೋಂದಳಿ ರಾಮಪ್ಪ, ಸುರೇಶ್ ಕಾತರಪ್ಪ ಲಮಾಣಿ,
ವೈದ್ಯಕೀಯ : ಡಾ. ಚಂದ್ರಪ್ಪ, ಡಾ.ಎಚ್.ಎಸ್.ಕೃಷ್ಣಪ್ಪ, ಡಾ.ಶಿವಲಿಂಗಯ್ಯ, ಡಾ.ಎಸ್.ಎಸ್.ಗುಬ್ಬಿ,
ಮಾಧ್ಯಮ : ವಿಶ್ವನಾಥ ಸುವರ್ಣ, ಲಕ್ಷ್ಮಿ ನರಸಪ್ಪ, ರುದ್ರಪ್ಪ ಆಸಂಗಿ, ಎಂ. ಸಿದ್ದರಾಜು, ಮದನಗೌಡ, ಮಲ್ಲಿಕಾರ್ಜುನ ಹೆಗ್ಗಳಗಿ, ಮಂಜುನಾಥ್ ಅದ್ದೆ,
ಪರಿಸರ : ಎಸ್.ಎಂ. ಚಲವಾದಿ, ಹೆಚ್.ಆರ್.ಜಯರಾಮ್,
ಯಕ್ಷಗಾನ : ಪೇತ್ರಿ ಮಂಜುನಾಥ ಪ್ರಭು,
ರಂಗಭೂಮಿ : ಲಕ್ಷö್ಮಯ್ಯ, ರಾಜು ಮಳವಳ್ಳಿ, ಎಂ.ಪಿ.ರಾಜಣ್ಣ,
ಶಿಲ್ಪಕಲೆ : ಟಿ.ಸೋಮೇಶ್, ಫಜ್ಲು ರೆಹಮಾನ್ ಖಾನ್, ಶ್ರೀಕಾಂತ ಬಿರಾದಾರ
ಛಾಯಾಚಿತ್ರ : ಶ್ರೀವತ್ಸ ಶಾಂಡಿಲ್ಯ,
ಸಂಗೀತ : ಆಮಯ್ಯ ಲಿಂಗಯ್ಯ ಮಠ, ನಿರ್ಮಲಪ್ಪ ಭಜಂತ್ರಿ, ಸಂಕೀರ್ಣ : ಆರ್.ಜಿ.ಹಳ್ಳಿ ನಾಗರಾಜ್, ಆರ್.ವೆಂಕಟರಮಣಪ್ಪ, ಬಾಬು ಕಿಲಾರ್, ದ್ವಾರಕಾನಾಥ್,
ಸಮಾಜಸೇವೆ : ಮಡ್ಲಿಕೆರೆ ಗೋಪಾಲ, ಚಕ್ರವರ್ತಿ ಅನ್ನದಾನೇಶ್ವರ ಅಪ್ಪಾಜಿ, ಎಸ್.ಆರ್.ಜೋಳದ್,
ಸಾಹಿತ್ಯ : ನೀಲಕಂಠ ಮ. ಕಾಳಗಿ, ಸಿದ್ದಪ್ಪ ತಿಮ್ಮಪ್ಪ ಮಾದರ, ಪ್ರೊ.ಜಿ.ಶರಣಪ್ಪ, ಅಮರೇಶ್ ನುಗಡೋಣಿ, ಡಾ.ಬಿ.ವಿ.ಶಿರೂರು,
ಶಿಕ್ಷಣ : ಟಿ.ಎಂ.ಚಂದ್ರ ಶೇಖರಯ್ಯ,
ಕ್ರೀಡೆ : ಜಿಮ್ಮಿ ಅಣ್ಣಯ್ಯ, ಎಂ.ಗಿರೀಶ್‌ಕುಮಾರ್,
ಕೃಷಿ : ಕೇದಾರಲಿಂಗಯ್ಯ ಹಿರೇಮಠ, ಜಿ.ಎಸ್.ನಾರಾಯಣಸ್ವಾಮಿ,
ಕಿರುತೆರೆ : ಸಿಹಿಕಹಿ ಚಂದ್ರು,
ಹೊರನಾಡು : ದಯಾಶಂಕರ್ ಅಡಪ, ಸದಾಶಿವ ಶೆಟ್ಟಿ ಕನ್ಯಾನ.
ಮಹಿಳಾ ಸಾಧಕಿಯರು
ಜಾನಪದ : ಜಯಲಕ್ಷ್ಮಮ್ಮ , ಲಕ್ಷ್ಮಮ್ಮ, ಬ್ರುರಕಥಾ ಅಯ್ಯಮ್ಮ, ಲಕ್ಷ್ಮಿ ಬಾಯಿ ಹರಿಜನ, ಭಾಗ್ಯಮ್ಮ, ಚಂದ್ರಕಲಾ ಹರಕುಡ,
ವೈದ್ಯಕೀಯ : ಡಾ. ಅಕ್ಕಮಹಾದೇವಿ,
ಮಾಧ್ಯಮ : ಭಾರತಿ ಹೆಗಡೆ, ಕೆ.ಶಾಂತಕುಮಾರಿ, ಮಾಲತಿಶ್ರೀ ಮೈಸೂರು, ಸುನಂದಾ ಎಸ್.ಕಂದಗಲ್ಲ, ಶಾಂತಬಾಯಿ ಜೋಷಿ, ಕಲಾವತಿ, ರಾಧಿಕ ಬೇವಿನಕಟ್ಟೆ, ಸಾವಿತ್ರಿ ರಿತ್ರಿ,
ಚಿತ್ರಕಲೆ : ಡಾ.ರೇಣುಕಾ ಮಾರ್ಕಂಡೆ, ಸುರೇಖಾ, ರುಕ್ಮಿಣಿಬಾಯಿ,
ಸಂಗೀತ : ಲತಾ ಜಹಗೀರದಾರ್,
ಸಮಾಜಸೇವೆ : ಡಾ. ದು.ಸರಸ್ವತಿ, ರುಕ್ಮಿಣಿ ಕೃಷ್ಣಸ್ವಾಮಿ, ಲೂಸಿ ಸಲ್ಡಾನ, ಚನ್ನಬಸಮ್ಮ ಸೂಲಗಿತ್ತಿ, ರಾವಣಮ್ಮ. ರೀಟಾ ನರೋನಾ, ಶಂಕ್ರಮ್ಮ, ಪ್ರೇಮಲತಾ ಕೃಷ್ಣಸ್ವಾಮಿ, ಎಂ.ಪದ್ಮಾ,
ಸಾಹಿತ್ಯ : ಡಾ.ರಾಧ ಕುಲಕರ್ಣಿ, ಡಾ.ಎನ್.ಗಾಯತ್ರಿ, ಲಲಿತಾ ಹೊಸಪ್ಯಾಟಿ, ಸಂಕಮ್ಮ ಸಂಕಣ್ಣನವರ, ಡಾ.ಬಾನು ಮುಷ್ತಾಕ್,
ಶಿಕ್ಷಣ : ಮುಕ್ತ, ಭಾಗ್ಯಲಕ್ಷ್ಮಿ
ಕ್ರೀಡೆ : ನಂದಿನಿ ಬಸಪ್ಪ (ಬ್ಯಾಸ್ಕೆಟ್‌ಬಾಲ್), ಸುಶ್ಮಿತ ಪವಾರ್ (ಕಬ್ಬಡಿ), ನಂದಿನಿ ಎನ್.ಎಸ್. (ಈಜು),
ಕೃಷಿ : ನಾಗಮ್ಮಜ್ಜಿ, ಶಾಂಭವಿ,
ಬಯಲಾಟ/ಯಕ್ಷಗಾನ : ಯಮುನಾಬಾಯಿ, ಹುಲಿಗೆಮ್ಮ,
ವಿಜ್ಞಾನ/ತಂತ್ರಜ್ಞಾನ : ಡಾ. ರತಿರಾವ್,
ಆಡಳಿತ : ಜೀಜಾ ಹರಿಸಿಂಗ್, ನೃತ್ಯ : ಮಿನಲ್ ಪ್ರಭು,
ಹೊರನಾಡು : ಎಸ್.ಎ.ಲತಾ,
ಸಂಕೀರ್ಣ : ಡಾ.ಮೀರಾ ಶಿವಲಿಂಗಯ್ಯ,
ಶಿಲ್ಪಕಲೆ : ಶಕುಂತಲಾ ಎಂ. ಬಡಿಗೇರಾ,
ಸ್ವಾತಂತ್ರö್ಯ ಹೋರಾಟಗಾರರು : ಮಲ್ಲಮ್ಮ ಯಲವಾಳ