Saturday, March 29, 2025
Flats for sale
Homeರಾಜ್ಯಬೆಂಗಳೂರು : ರಾಜ್ಯದ ಜನೆತೆಗೆ ಮತ್ತೊಂದು ಶಾಕ್ : ಹಾಲಿನ ದರದಲ್ಲಿ ಮತ್ತೊಮ್ಮೆ 3 ರೂ....

ಬೆಂಗಳೂರು : ರಾಜ್ಯದ ಜನೆತೆಗೆ ಮತ್ತೊಂದು ಶಾಕ್ : ಹಾಲಿನ ದರದಲ್ಲಿ ಮತ್ತೊಮ್ಮೆ 3 ರೂ. ಹೆಚ್ಚಳ ಸಾಧ್ಯತೆ,ಇಂದು ಸರ್ಕಾರ ತೀರ್ಮಾನ…!

ಬೆಂಗಳೂರು : ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಇಂದು ಸಂಜೆ ಸರ್ಕಾರ ತೀರ್ಮಾನ ಕೈಗೊಳ್ಳಲಿದ್ದು, ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಾಗುವ ಸಾಧ್ಯತೆಗಳು ಇವೆ.

ಕರ್ನಾಟಕ ಹಾಲು ಮಹಾ ಮಂಡಳ ಪ್ರತಿ ಲೀಟರ್ ಹಾಲಿಗೆ 5 ರೂ. ಏರಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಹಾಲಿನ ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಹಾಗೂ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಹಾಲಿನ ದರ ಏರಿಕೆ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ.

ಕೆಎಂಎಫ್ ಸಲ್ಲಿಸಿರುವ 5 ರೂ. ಹಾಲಿನ ದರ ಏರಿಕೆ ಬದಲು ಪ್ರತಿ ಲೀಟರ್‌ಗೆ 3 ರೂ. ದರ ಹೆಚ್ಚಳ ಮಾಡಲು ಈ ಸಭೆಯಲ್ಲಿ ಒಪ್ಪಿಗೆ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಸಾರಿಗೆ ಬಸ್ ದರ, ವಿದ್ಯುತ್, ಮೆಟ್ರೋ ಪ್ರಯಾಣ ದರಗಳು ಏರಿಕೆಯಾಗಿದ್ದು, ಹಾಲಿನ ದರ ಏರಿಕೆಯೂ ಜನರಿಗೆ ಗಾಯದ ಮೇಲೆ ಬರೆ ಎಳದಂತಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular