Wednesday, October 22, 2025
Flats for sale
Homeರಾಜ್ಯಬೆಂಗಳೂರು : ರಾಜ್ಯದಲ್ಲಿ 2 ಕೋಟಿ ಹಳೆ ವಾಹನಗಳ ಪೈಕಿ ಕೇವಲ 55 ಲಕ್ಷ ವಾಹನ...

ಬೆಂಗಳೂರು : ರಾಜ್ಯದಲ್ಲಿ 2 ಕೋಟಿ ಹಳೆ ವಾಹನಗಳ ಪೈಕಿ ಕೇವಲ 55 ಲಕ್ಷ ವಾಹನ ಮಾತ್ರ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ,ಮತ್ತೆ ಜ.31ರವರೆಗೆ ಗಡುವು ವಿಸ್ತರಣೆ..!

ಬೆಂಗಳೂರು : ರಾಜ್ಯ ಸಾರಿಗೆ ಇಲಾಖೆ ಮತ್ತೊಮ್ಮೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ ಮಾಡಿದ್ದು, ಈ ತಿಂಗಳು ಕೊನೆ ಅಂದರೆ ಜನವರಿ ೩೧ರವರೆಗೆ ನಂಬರ್ ಪ್ಲೇಟ್ ಅಳವಡಿಕೆಗೆ ಸಮಯ ನೀಡಿದೆ.

ಈವರೆಗೆ ೬ ಬಾರಿ ಗಡುವು ವಿಸ್ತರಣೆ ಮಾಡಿದೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ 6 ಬಾರಿ ಸಮಯ ವಿಸ್ತರಿಸಿದರೂ ಸಹ ವಾಹನ ಮಾಲೀಕರು ತಮ್ಮ ವಾಹನಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ.ಹೀಗಾಗಿ, ರಾಜ್ಯ ಸಾರಿಗೆ ಇಲಾಖೆ ಮತ್ತೊಂದು ಅವಕಾಶ ನೀಡಿದೆ.

ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಈಗಾಗಲೇ ಅವಧಿ ಮುಗಿದಿದ್ದರೂ ಸಹ ರಾಜ್ಯ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಇದೆ. ಬರೊಬ್ಬರಿ ಆರು ಬಾರಿ ಗಡುವು ವಿಸ್ತರಿಸಿದೆ. 2019 ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಸುಮಾರು 2 ಕೋಟಿ ಹಳೆ ವಾಹನಗಳಿದ್ದು, 55 ಲಕ್ಷ ವಾಹನ ಮಾತ್ರ ಹೆಚ್ಎಸ್‌ಆರ್‌ಪಿ ಅಳವಡಿಸಿಕೊಂಡಿವೆ.

2019ರ ಏ. 1ಕ್ಕೆ ಮೊದಲು ನೋಂದಣಿಯಾದ ವಾಹನಗಳಿಗೆ ಕಡ್ಡಾಯ ಮಾಡಲಾಗಿದೆ. ಬಹುತೇಕ ವಾಹನಗಳಿಗೆ ಇನ್ನೂ ಹೆಚ್.ಎಸ್.ಆರ್.ಪಿ. ಹಾಕಿಸದ ಹಿನ್ನಲೆಯಲ್ಲಿ ಮತ್ತೆ ಗಡುವು ವಿಸ್ತರಣೆ ಮಾಡಲಾಗಿದೆ. ಹೆಚ್‌ಎಸ್‌ಆರ್‌ಪಿ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಂದು ಅರ್ಥವಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ವಾಹನ ಗಳಿಗೆ ಇದನ್ನು ಕಡ್ಡಾಯಗೊಳಿಸಿದೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ವಾಹನ ಮಾಲೀಕರು ವಿಳಾಸ ಬದಲಾವಣೆ, ನಕಲಿ ಆರ್ ಸಿ,ವಿಮೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular