Friday, March 13, 2026
Flats for sale
Homeರಾಜ್ಯಬೆಂಗಳೂರು : ರಾಜ್ಯದಲ್ಲಿ ಹಾಲು,ವಿದ್ಯುತ್,ಟೋಲ್ ಬೆಲೆ ಹೆಚ್ಚಳದ ಬೆನ್ನಲ್ಲೇ ಡೀಸೆಲ್ ಬೆಲೆಯೂ ಏರಿಕೆ..!

ಬೆಂಗಳೂರು : ರಾಜ್ಯದಲ್ಲಿ ಹಾಲು,ವಿದ್ಯುತ್,ಟೋಲ್ ಬೆಲೆ ಹೆಚ್ಚಳದ ಬೆನ್ನಲ್ಲೇ ಡೀಸೆಲ್ ಬೆಲೆಯೂ ಏರಿಕೆ..!

ಬೆಂಗಳೂರು : ರಾಜ್ಯ ಸರಕಾರ ಡೀಸೆಲ್ ಮಾರಾಟದ ಮೇಲೆ ವಿಧಿಸುತ್ತಿರುವ ಮಾರಾಟ ತೆರಿಗೆಯನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಶೇ.21.7 ಕ್ಕೆ ಏರಿಸಿದ್ದು, ಇದರಿಂದ ಪ್ರತಿ ಲೀ.ಡೀಸೆಲ್ ದರ ಸರಾಸರಿ 2 ರೂ. ಹೆಚ್ಚಳವಾಗಲಿದೆ. 2021ರ ನವೆಂಬರ್ 4 ರಿಂದ ರಾಜ್ಯದಲ್ಲಿ ಡೀಸೆಲ್ ಮೇಲೆ ಮಾರಾಟ ತೆರಿಗೆ ದರ ಶೇ.24 ರಷ್ಟು ಇತ್ತು. ಆಗ ಡೀಸೆಲ್ ಪ್ರತಿ ಲೀಟರ್‌ಗೆ 92.03 ರೂ.ಗಳಷ್ಟು ಇತ್ತು. ಆದರೆ 2024 ರ ಜೂನ್ 15 ರಂದು ರಿಂದ ಡೀಸೆಲ್ ಮೇಲಿನ ಮಾರಾಟ ತೆರಿಗೆ ದರವನ್ನು ಶೇ.18.44 ಕ್ಕೆ
ಇಳಿಸಲಾಗಿತ್ತು. ಇದೀಗ ಶೇ.18.44 ರಿಂದ ಶೇ.21.17 ಕ್ಕೆ ಹೆಚ್ಚಿಸಲಾಗಿದೆ.

ಇದರಿಂದ ಪ್ರತಿ ಲೀಟರ್‌ಗೆ 2 ರೂ.ಗಳಂತೆ ಅಂದರೆ 91.02 ರೂ. ಆಗಲಿದೆ. ಡೀಸೆಲ್ ಮೇಲಿನ ಕರ್ನಾಟಕ ಮಾರಾಟ ತೆರಿಗೆ ದರವು ಶೇ.21.17ಕ್ಕೆ ಹೆಚ್ಚಿಸಿದ ಮೇಲೂ ನೆರೆಯ ರಾಜ್ಯಗಳಿಗಿಂತ ಸರಾಸರಿ 4 ರೂ.ಗಳಷ್ಟು ಕಡಿಮೆ ಇದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ. ಸೋಮವಾರ ದವರೆಗೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ 89.02ರಷ್ಟು ಇದ್ದ ದರವು ಮಂಗಳವಾರದಿAದ 91.01 ರೂ. ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular