ಬೆಂಗಳೂರು : ರಾಜ್ಯದಲ್ಲಿ ಲಕ್ಷಾಂತರ ಜನ ಬಿಪಿಎಲ್ ಕಾರ್ಡ್ದಾರರು ಹಾಗೂ ಅಂತ್ಯೋದಯ ಕಾರ್ಡ್ದಾರರಿದ್ದು ಅವರಲ್ಲಿ 22 ಲಕ್ಷ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತಿದೆ. ಅಥವಾ ತಪ್ಪು ದಾಖಲೆಗಳನ್ನು ನೀಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಮಾಡಿಸಿಕೊಂಡಿರುವವರನ್ನು ರಾಜ್ಯ ಸರ್ಕಾರ ಪತ್ತೆ ಮಾಡಿದೆ. ಅಅದರಲ್ಲಿ ಬ್ಯಾಂಕ್ ಸಾಲ, ವಾರ್ಷಿಕ ವರಮಾನ ಎನ್ನುವುದನ್ನು ಪರಿಶೀಲನೆ ಮಾಡಿ ಲಿಸ್ಟ್ ಮಾಡಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಕೆಲವರು ತಪ್ಪು ತಿಗಳನ್ನು ನೀಡಿ ಹಾಗೂ ಶ್ರೀಮಂತರಾಗಿದ್ದರೂ ಸುಳ್ಳು ಮತ್ತು ತಪ್ಪು ದಾಖಲೆಗಳನ್ನು ನೀಡಿ ಜನ ಬಿಪಿಎಲ್ ಕಾರ್ಡ್ಗಳನ್ನು ಪಡೆದುಕೊಂಡಿದ್ದಾರೆ. ಇಂತ ಹಲವರನ್ನು ಪತ್ತೆ ಮಾಡಲಾಗಿದೆ. ಆದರೆ, ಕೆಲವರು ಸರ್ಕಾರದ ನಿಯಮಗಳನ್ನು ತಿಳಿದುಕೊಳ್ಳದೆ ಬಿಪಿಎಲ್, ಅಂತ್ಯೋದಯ ಕಾರ್ಡ್ಗಳನ್ನು ಮಾಡಿಸಿಕೊಂಡಿದ್ದಾರೆ. ಈಗ ಇಂತಹವರ ಕಾರ್ಡ್ಗಳನ್ನೂ ರದ್ದು ಮಾಡಲಾಗುತ್ತಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕುಟುಂಬ ತಂತ್ರಾಂಶದ (ಸಾಫ್ಟ್ವೇರ್) ಸಹಾಯದಿಂದ ೨೨ ಲಕ್ಷಕ್ಕೂ ಹೆಚ್ಚು (22,62,412) ಬಿಪಿಎಲ್ ಹಾಗೂ ಅಂತ್ಯೋದಯ ಅನರ್ಹ ಕಾರ್ಡ್ಗಳನ್ನು ಪತ್ತೆ ಮಾಡಿದೆ. ಇದೀಗ ಇಷ್ಟು ಜನರ ಕಾರ್ಡ್ ರದ್ದಾಗುವುದು ಖಚಿತವಾಗಿದೆ.
ಇ – ಆಡಳಿತ ನೆರವು ರಾಜ್ಯದಲ್ಲಿ ನಿಯಮ ಉಲ್ಲಂಘನೆ ಮಾಡಿ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಮಾಡಿಸಿಕೊಂಡಿರುವವರನ್ನು ಪತ್ತೆ ಮಾಡುವುದಕ್ಕೆ ಮಾಸ್ಟರ್ ಪ್ಲಾನ್ ಮಾಡಲಾಗಿತ್ತು. ರಾಜ್ಯ ಆಹಾರ ಇಲಾಖೆಯು ಈ ರೀತಿ ನಿಯಮ ಮೀರಿ ಪಡಿತರ ಚೀಟಿ (ರೇಷನ್ ಕಾರ್ಡ್) ಪತ್ತೆಗಾಗಿ ಇ – ಆಡಳಿತಕ್ಕೆ ಮನವಿ ಮಾಡಿತ್ತು. ಇ – ಆಡಳಿತದಿಂದ ಪರಿಶೀಲನೆ ಮಾಡಿದಾಗ 10,54,367ಕ್ಕೂ ಹೆಚ್ಚು ಕಾರ್ಡ್ದಾರರು 1.2 ಲಕ್ಷಕ್ಕಿಂತ ಹೆಚ್ಚು ಆದಾಯ ಪಡೆಯುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಈ ಎಲ್ಲಾ ಕಾರ್ಡ್ ಗಳು ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿವೆ ಎನ್ನುವುದು ಸ್ಪಷ್ಟವಾಗಿದೆ.