Wednesday, March 4, 2026
Flats for sale
Homeಜಿಲ್ಲೆಬೆಂಗಳೂರು : ರಾಜ್ಯದಲ್ಲಿ ಸಾಲಬಾಧೆಯಿಂದ ಒಂದೇ ವರ್ಷದಲ್ಲಿ 983 ರೈತರ ಆತ್ಮಹತ್ಯೆ..!

ಬೆಂಗಳೂರು : ರಾಜ್ಯದಲ್ಲಿ ಸಾಲಬಾಧೆಯಿಂದ ಒಂದೇ ವರ್ಷದಲ್ಲಿ 983 ರೈತರ ಆತ್ಮಹತ್ಯೆ..!

ಬೆಂಗಳೂರು : ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರೂ 983 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಅಂಶವನ್ನು ಸರ್ಕಾರದ ಅಂಕಿ ಅಂಶಗಳೇ ತಿಳಿಸಿವೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯ ಏರಿಕೆ ಕಂಡಿದೆ. ಪಂಚ ಗ್ಯಾರಂಟಿ ಯೋಜನೆಗಳ ಕೇಂದ್ರಿತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಆತ್ಮಹತ್ಯೆ ದುಸ್ವಪ್ನವಾಗಿ ಪರಿಣಮಿಸಿದೆ. ಕಳೆದ ಮುಂಗಾರು ಹAಗಾಮಿನಲ್ಲಿ ಉತ್ತಮ ಮಳೆಯಾಗಿ ಬೆಳೆಯಾಗಿದ್ದರೂ, ರೈತರ ಸಂಕಷ್ಟಕ್ಕೆ ಮಾತ್ರ ಕೊನೆ ಇಲ್ಲದಂತಾಗಿದೆ. 2024-25ರ ಸಾಲಿನಲ್ಲೂ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಏರಿಕೆ ಕಂಡಿದೆ.

ಕೃಷಿಯಲ್ಲಿ ಅನುಭವಿಸಿದ ನಷ್ಟ ಮತ್ತು ಸಾಲದ ಶೂಲ ರೈತರನ್ನು ಆತ್ಮಹತ್ಯೆಯ ಕೂಪಕ್ಕೆ ನೂಕುತ್ತಿವೆ. ರೈತರ ನೆರವಿಗಾಗಿ ಸರ್ಕಾರದ ಹತ್ತಾರು ಯೋಜನೆಗಳು ಇದ್ದರೂ ರೈತರನ್ನು ಆತ್ಮಹತ್ಯೆಯ ದವಡೆಯಿಂದ ಪಾರು ಮಾಡಲು ಆಗುತ್ತಿಲ್ಲ. ರಾಜ್ಯಾದ್ಯಂತ ಏಪ್ರಿಲ್ 2024ರಿಂದ ಮೇ 29, 2025ರ ವರೆಗೆ 983 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮುಂದಿಟ್ಟ ವರದಿಯAತೆ ರಾಜ್ಯದಲ್ಲಿ ಇಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ.

139 ಪ್ರಕರಣ ತಿರಸ್ಕೃತ 983 ವರದಿಯಾದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ 139 ಪ್ರಕರಣಗಳನ್ನು ಸರ್ಕಾರ ತಿರಸ್ಕರಿಸಿದೆ. ಆ ಮೂಲಕ 828 ಅರ್ಹ ರೈತರು ಆತ್ಮಹತ್ಯೆಯಾಗಿರುವುದಾಗಿ ಗುರುತಿಸಿದೆ. ಈ ಪೈಕಿ 828 ಪ್ರಕರಣಗಳಲ್ಲೂ ಪರಿಹಾರ ಪಾವತಿಸಲಾಗಿದೆ ಎಂದು ಅಧಿಕಾರಿಗಳು ಅಂಕಿ-ಅAಶ ನೀಡಿದ್ದಾರೆ. ಜಿಲ್ಲಾ ಹಂತದಲ್ಲಿ ಸುಮಾರು 16 ಪ್ರಕರಣಗಳ ಬಗ್ಗೆ ಇನ್ನೂ ತೀರ್ಮಾನಿಸಬೇಕಾಗಿದೆ. ರೈತರ ಆತ್ಮಹತ್ಯೆಗೆ ಸಾಲಬಾಧೆ ಪ್ರಮುಖ ಕಾರಣವಾಗಿದೆ. ಬೆಳೆ ನಷ್ಟ ಹಾಗೂ ಇತರ ಕಾರಣಗಳಿಗಾಗಿ ಸಾಲ ಪಡೆದುಕೊಂಡ ರೈತರು ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿರ ಗಡಿಯಲ್ಲೇ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ 2022-23 ಸಾಲಿನಲ್ಲಿ ಸುಮಾರು922 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿತ್ತು. ಅದೇ 2023-24ರಲ್ಲಿ ಸುಮಾರು 1,161 ರೈತರು ಸಾವಿಗೆ ಶರಣಾಗಿರುವ ಬಗ್ಗೆ ಕಂದಾಯ ಇಲಾಖೆ ಅಂಕಿ-ಅAಶ ನೀಡಿದೆ. 2024-25ರಲ್ಲಿ ಸುಮಾರು 983 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿಲ್ಲ. ಬದಲಿಗೆ ಮೂರು ವರ್ಷಗಳಿಂದಲೂ ಸಾವಿರದ ಗಡಿಯಲ್ಲೇ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ.2024-25 ಸಾಲಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ರೈತರ ಆತ್ಮಹತ್ಯೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ.

ದಿನಕ್ಕೆ ಸರಾಸರಿ 2-3 ರೈತರ ಆತ್ಮಹತ್ಯೆ ಅಂಕಿ-ಅAಶಗಳ ಪ್ರಕಾರ, ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ 2-3 ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಕಳೆದ ಮೂರು ನಾಲ್ಕು ವರ್ಷಗಳ ರೈತರ ಆತ್ಮಹತ್ಯೆ ಪ್ರಕರಣವನ್ನು ನೋಡಿದರೆ, ನಿತ್ಯ ಸರಾಸರಿ ಇಬ್ಬರು, ಮೂವರಂತೆ ಅನ್ನದಾತರು ಸಾವಿನ ಮನೆಬಾಗಿಲು ತಟ್ಟುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ರೈತ ಪರ ಯೋಜನೆ, ಸೌಲತ್ತುಗಳನ್ನು ನೀಡಿದರೂ ರೈತರ ಸರಣಿ ಆತ್ಮಹತ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ತೀವ್ರ ಬೆಲೆ ಕುಸಿತ, ಅತಿವೃಷ್ಟಿ ಅಥವಾ ಅನಾವೃಷ್ಟಿಗೆ ಬೆಳೆ ನಾಶದಿಂದಾಗಿ ಸಾಲದ ಹೊರೆಗೆ ಅನ್ನದಾತರು ಅನ್ಯದಾರಿ ಕಾಣದೇ, ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಮೈಸೂರಿನಲ್ಲಿ 2022-23ರಲ್ಲಿ 72 ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದರೆ, 2023-24ರಲ್ಲಿ 67 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಈಗ 2024-25ರಲ್ಲಿ (ಮೇ 29ರ ವರೆಗೆ)73 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ವರದಿಯಾಗುತ್ತಿರುವ ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ ಮೈಸೂರು ಜಿಲ್ಲೆ ೩ನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣ ವರದಿಯಾದ ರಾಜ್ಯದ ಜಿಲ್ಲೆಗಳ ಪೈಕಿ ಹಾವೇರಿ ಮೊದಲನೇ ಸ್ಥಾನದಲ್ಲಿದೆ. ಇಲ್ಲಿ ಸುಮಾರು 128 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಬಳಿಕದ ಸ್ಥಾನ ಕಲಬುರಗಿಯದ್ದಾಗಿದೆ. ಕಲಬುರಗಿಯಲ್ಲಿ ಸುಮಾರು 82 ಮಂದಿ ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ನಂತರ, ಮೈಸೂರಿನಲ್ಲಿ ಸುಮಾರು 72 ರೈತರು ಸಾವಿಗೆ ಶರಣಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ72 ರೈತರು, ಬೆಳಗಾವಿ ಜಿಲ್ಲೆಯಲ್ಲಿ 72, ಹಾಸನ ಜಿಲ್ಲೆಯಲ್ಲಿ 47 ರೈತರು, ಬೀದರ್‌ನಲ್ಲಿ 45 ಮಂದಿ, ಶಿವಮೊಗ್ಗ ಜಿಲ್ಲೆಯಲ್ಲಿ 45 ರೈತರು, ಗದಗದಲ್ಲಿ 44 ರೈತರು, ಯಾದಗಿರಿ 43 ರೈತರು, ದಾವಣಗೆರೆ 42 ರೈತರು, ಚಿಕ್ಕಮಗಳೂರು ಹಾಗೂ ಮಂಡ್ಯದಲ್ಲಿ ತಲಾ 39 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಯಾಗಿದೆ. ಬಾಗಲಕೋಟೆ 35, ಚಿತ್ರದುರ್ಗ 34, ರಾಯಚೂರು 26, ಕೊಪ್ಪಳ ಜಿಲ್ಲೆಯಲ್ಲಿ 25 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೂನ್ಯ ರೈತರು ಆತ್ಮಹತ್ಯೆ ಕಂಡ ಜಿಲ್ಲೆಗಳ ಪೈಕಿ ಉಡುಪಿ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿಲ್ಲ. ಉಳಿದಂತೆ ದಕ್ಷಿಣ ಕನ್ನಡ 5, ಕೊಡಗು 5, ಬಳ್ಳಾರಿ 4, ಚಾಮರಾಜನಗರ 4, ರಾಮನಗರ 3, ಚಿಕ್ಕಬಳ್ಳಾಪುರ 3 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿವೆ. ಈ ಆರು ಜಿಲ್ಲೆಗಳಲ್ಲಿ ಕನಿಷ್ಠ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular