ಬೆಂಗಳೂರು : ಇಸ್ರೇಲಿ ಪ್ರಜೆ ಹಾಗೂ ಮತ್ತೊಬ್ಬ ಮಹಿಳೆ ಮೇಲೆ ಹಲ್ಲೆ, ಅತ್ಯಾಚಾರ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಪಹರೆಯನ್ನು ಬಿಗಿಗೊಳಿಸಲು ತೀರ್ಮಾನಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಅನಧಿಕೃತ ಹೋಂ ಸ್ಟೇಗಳಿದ್ದರೆ ಅವುಗಳನ್ನು ಪರಿಶೀಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಅವರು ಅತ್ಯಾಚಾರ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊAಡಿರುವ ಮತ್ತೊಬ್ಬ ಆರೋಪಿ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಆದರೆ
ಪ್ರವಾಸಿ ತಾಣಗಳಲ್ಲಿ ಇಂತಹ ಘಟನೆಗಳು ನಡೆಯಬಾರದಿತ್ತು. ಇಂತಹ ಘಟನೆಗಳು ಮರುಕಳುಹಿಸಬಾರದು. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ
ಪೊಲೀಸ್ ಪಹರೆಯನ್ನು ನಿಯೋಜಿಸಲು ಮುಂದಾಗಿದೆ ಎಂದು ಹೇಳಿದರು.
ಇದಕ್ಕಾಗಿಯೇ ಟೂರಿಸ್ಟ್ ಪೊಲೀಸರನ್ನು ಪ್ರವಾಸಿ ತಾಣಗಳಲ್ಲಿ ಹೆಚ್ಚಾಗಿ ನಿಯೋಜನೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರವಾಸಿ ತಾಣಗಳಿರುವ ಕಡೆ ಸಹಜವಾಗಿ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಹಾಗೂ ವಿದೇಶಿಗಳಿಂದ ಪ್ರವಾಸಿಗಳು ಬರುತ್ತಾರೆ. ಅವರ ಸುರಕ್ಷತೆಗೆ ಪೊಲೀಸ್ ನಿಯೋಜನೆ ಮಾಡುತ್ತೇವೆ ಮತ್ತು ಸಹಾಯ ಮಾಡುವುದಾಗಿಯೂ ಹೇಳಿದರು
ಪ್ರವಾಸಿ ತಾಣಗಳಿಗೆ ಪಹರೆ ಇಸ್ರೇಲಿ ಮಹಿಳೆ ಮತ್ತು ಹಾಗೂ ಮತ್ತೊಬ್ಬ ಮಹಿಳೆ ಮೇಲೆ ಅತ್ಯಾಚಾರ, ಹಲ್ಲೆ ಪ್ರಕರಣ ಕುರಿತಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮಲ್ಲೇಶ್ (21), ಚೇತನ್ (21) ಇವರಿಬ್ಬರು ಗಂಗಾವತಿ ನಿವಾಸಿಗಳಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದು, ಆತನನ್ನು ಟ್ರಾಪ್ ಮಾಡಲಾಗಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದರು.
ಜನ ಪ್ರವಾಸಿಗರು ತುಂಗಭದ್ರಾ ಎಡದAಡೆ ಬಳಿಯಿರುವ ಹೋಸ್ಟೇ ಬಳಿ ಬಾಡಿಗೆ ಪಡೆದಿದ್ದರು. ಇದರ ಮಾಲೀಕರು ತಮಿಳುನಾಡು ಮೂಲದ ಅಂಬಿಕಾ ಪರಮೇಶ್ವರ್ ನಾಯಕ್ ಇವರು ಆನೆಗೊಂಡಿಗೆ ಬಂದು 2 ಹೋಂ ಸ್ಟೇ ಗಳನ್ನುಗುತ್ತಿಗೆ ಆಧಾರದ ಮೇಲೆ ಪಡೆದಿದ್ದರು ಎಂದು ಹೇಳಿದರು. ಈ ಹೋಂ ಸ್ಟೇ ಯಲ್ಲಿ ಇಬ್ಬರು ವಿದೇಶಿಯರಾದ ಸೇರಿದಂತೆ 6 ಮಂದಿ ಉಳಿದುಕೊಂಡಿದ್ದರು. ಫೆ. 6 ರಂದು ನಕ್ಷತ್ರ ವೀಕ್ಷಣೆಗಾಗಿ ತುಂಗಭದ್ರಾ ಎಡದಂಡೆ ಬಳಿಯಿರುವ ಉದ್ಯಾನವನದಲ್ಲಿ ರಾತ್ರಿ 10.30 ರಲ್ಲಿ ಗಿಟಾರ್ ಬಾರಿಸಿ ಗಾಯನ ಮಾಡಿಕೊಂಡು ಕುಳಿತುಕೊಂಡಿದ್ದರು. ಈ ಸಮಯದಲ್ಲಿ ಮೂವರು ಬೈಕ್ ನಲ್ಲಿ ಬಂದ ಅಪರಿಚಿತರು ಈ ಪ್ರದೇಶದಲ್ಲಿ ಪೆಟ್ರೋಲ್ ಸಿಗುತ್ತಾ ಎಂದು ಕೇಳಿದ್ದಾರೆ. ಇಲ್ಲಿ ಸಿಗಲ್ಲ, ನಾಗಪುರ ಗ್ರಾಮದ ಬಳಿ ಸಿಗುತ್ತೇ ಎಂದು ಹೇಳಿದ್ದಾರೆ. ಆಗ ದುಡ್ಡು ಕೊಡಿ ಎಂದು ಕೇಳಿದ್ದಾರೆ. ಬಿಬಾಶ ಎಂಬುವರು 20 ರೂ. ಕೊಟ್ಟಿದ್ದಾರೆ. ಇದರಿಂದ ತೃಪ್ತರಾಗದ ಈ ಮೂವರು ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.
ಈ ವಿಚಾರವಾಗಿ ಪ್ರವಾಸಿಗರು ಮತ್ತು ಅಪರಿಚಿತರ ನಡುವೆವಾಗ್ವಾದ, ಘರ್ಷಣೆ, ನೂಕಾಟ ತಳ್ಳಾಟ ನಡೆದಿದೆ. ಈ ಸಂರ್ಭದಲ್ಲಿ ಪ್ರವಾಸಿಗರನ್ನು ಈ ದುಷ್ಕರ್ಮಿಗಳು ತುಂಗಾಭದ್ರ ಕಾಲುವೆಗೆ ತಳ್ಳಿದ್ದಾರೆ. ಕನ್ನಡ, ತೆಲುಗು ಮಾತನಾಡುತ್ತಿದ್ದ ಆರೋಪಿಗಳು ಅವರ ಮೇಲೆ ಹಲ್ಲೆನಡೆಸಿ, ಅತ್ಯಾಚಾರ ನಡೆಸಿದ್ದಾರೆ. ಇಸ್ರೇಲಿ ಪ್ರಜೆ ಮೇಲೆ ಅತ್ಯಾಚಾರ ಎಸೆಗಿ ಅವರ ಬಳಿಯಿದ್ದ 9,500 ನಗದು, ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಮಾರನೇ ದಿನ ದೂರು ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಡಿವೈಎಸ್‌ಪಿ, ಎಸ್‌ಐ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು ಎಂದು ಹೇಳಿದರು. ನಿರ್ಜನ ಪ್ರದೇಶಗಳಲ್ಲಿ ಮದ್ಯರಾತ್ರಿ ಓಡಾಡಲು ಅವಕಾಶವಿಲ್ಲ. ಗಸ್ತು ಪೊಲೀಸರು ಇರುತ್ತಾರೆ. ಅನುಮಾನಬಂದಾಗ ಅವರನ್ನು ವಿಚಾರಿಸುತ್ತಾರೆ. ಈಗಾಗಲೇ ಪ್ರವಾಸಿ ತಾಣಗಳಲ್ಲಿ ಮಾರ್ಗಸೂಚಿಗಳಿವೆ ಎಂದು ತಿಳಿಸಿದರು.