Thursday, March 12, 2026
Flats for sale
Homeದೇಶಬೆಂಗಳೂರು : ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ ಸಾಲಭಾದೆಯಿಂದ 692 ರೈತರು ಆತ್ಮಹತ್ಯೆಗೆ ಶರಣು.

ಬೆಂಗಳೂರು : ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ ಸಾಲಭಾದೆಯಿಂದ 692 ರೈತರು ಆತ್ಮಹತ್ಯೆಗೆ ಶರಣು.

ಬೆಂಗಳೂರು : ಇಂದು ಕೂಡ ಗದಗದಲ್ಲಿ ಟ್ರ್ಯಾಕ್ಟರ್ ಸಾಲ ತುಂಬುವ ವಿಚಾರದಲ್ಲಿ 3 ರೈತರು ಆತ್ಮಹತ್ಯೆ ಮಾಡಿದ ಘಟನೆ ವರದಿಯಾದ ಬೆನ್ನಲೇ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು,ಸರಕಾರದ ಸೌಲಭ್ಯಗಳು ರೈತರ ಕೈಗೆ ತಲುಪದೇ ಇರುವುದು ಇದಕ್ಕೆ ಸಾಕ್ಷಿ ಎಂದು ತಿಳಿದುಬಂದಿದೆ.

ಮೊದಲನೆಯದಾಗಿ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ದರ ಸಿಗದೇಇರುವುದು ಮುಖ್ಯ ಕಾರಣ .ಕಳೆದ ಹಲವು ತಿಂಗಳಿಂದ ರಾಜ್ಯದಲ್ಲಿ ಅನ್ನದಾತರ ಆತ್ಮಹತ್ಯೆ ಹೆಚ್ಚುತ್ತಿದೆ. ಕೃಷಿ ಸಾಲ, ಬೆಳೆ ನಷ್ಟ, ಬರ ಸೇರಿದಂತೆ ಹಲವು ಕಾರಣಗಳಿಂದ ರೈತರು ನೇಣಿಗೆ ಕೊರಳೊಡ್ಡುತ್ತಿದ್ದಾರೆ. 10 ತಿಂಗಳಲ್ಲಿ 692 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕಂದಾಯ ಇಲಾಖೆ ಅಂಕಿ ಅಂಶಗಳು ಬಹಿರಂಗಪಡಿಸಿವೆ.

ಬೆಂಗಳೂರು ನಗರ ಹೊರತಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಹಾವೇರಿ, ಬೆಳಗಾವಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆತ್ಮಹತ್ಯೆ ಅಧಿಕ. ಹಾವೇರಿ ಜಿಲ್ಲೆಯಲ್ಲಿ86 ಮಂದಿ ರೈತರು ಮೃತಪಟ್ಟಿದ್ದಾರೆ. ಕಳೆದ 10 ತಿಂಗಳಲ್ಲಿ 124 ಮಂದಿ ರೈತರು ಆತ್ಮಹತ್ಯೆ ಹಾದಿ ತುಳಿದಿದ್ದಾರೆ. ಇದರಲ್ಲಿ 548 ರೈತರು ವಿವಿಧ ದುರ್ಘಟನೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿನಕ್ಕೆ ಸರಾಸರಿ ೪ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಮಳೆ ಇಲ್ಲದೆ ರಾಜ್ಯದ 223 ತಾಲೂಕುಗಳು ಬರಪೀಡಿತವಾಗಿವೆ. ಇವುಗಳಲ್ಲಿ 196 ತಾಲೂಕುಗಳು ತೀವ್ರ ಬರಪೀಡಿತವಾಗಿವೆ. ಬರದಿಂದ ಮಳೆ ಇಲ್ಲದೆ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ನಾಶವಾಗಿವೆ. ಕೃಷಿಗೆ ಮಾಡಿದ್ದ ಸಾಲ ತೀರಿಸಲಾಗದೆ ರೈತರು ಅಂತಿಮವಾಗಿ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ.

17,534 ಕೋಟಿ ರೂ. ಸಾಲ: ರೈತರು ಕೃಷಿ ಚಟುವಟಿಕೆಗಾಗಿ ಸೊಸೈಟಿ, ಖಾಸಗಿ ಲೇವಾದೇವಿಗಾರರು ಹಾಗೂ ವಾಣಿಜ್ಯ ಬ್ಯಾಂಕ್‌ಗಳಿAದ ಸಾಲ ಮಾಡಿದ್ದಾರೆ. 2024ರ ಜ.31ರವರೆಗೆ ರಾಜ್ಯದ 22.59 ಲಕ್ಷ ಮಂದಿ ರೈತರು ಸೊಸೈಟಿಗಳಿಂದ17,534ಕೋಟಿ ರೂ. ಸಾಲ ಮಾಡಿದ್ದಾರೆ. 2023 ಡಿ.31 ರವರೆಗೆ 8.5 ಲಕ್ಷ ರೈತರು 17,424 ಕೋಟಿ ರೂ. ಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾರೆ. ಕೇವಲ 238 ರೈತರು ಮಾತ್ರ
ಸೊಸೈಟಿಗಳಿಂದ ಪಡೆದಿದ್ದ 3.07 ಕೋಟಿ ರೂ. ಸಾಲ ಮರುಪಾವತಿ ಮಾಡಿದ್ದಾರೆ ಎಂದು
ಕAದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಲ್ಲದೆ ಕೆಲವು ರೈತರು ಖಾಸಗಿ ಲೇವಾದೇವಿಗಾರರ ಬಳಿ ಸಾಲ ಪಡೆದಿದ್ದು ಅವರು ಸಾಲ ಮರುಪಾವತಿಗೆ ರೈತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ರೈತರು ತೀವ್ರ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ.

ಕೃಷಿ ಸಾಲ, ಬರಗಾಲದಿಂದ ಆತ್ಮಹತ್ಯೆ: ರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಕೃಷಿ ಸಾಲ ಹಾಗೂ ಬರಗಾಲ ಪ್ರಮುಖ ಕಾರಣ ಎಂದು ಕAದಾಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆ ಬಾರದೆ ನಷ್ಟವಾಗುವುದರಿಂದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಇದರ ಜತೆ ಬರಗಾಲ, ಅತಿವೃಷ್ಟಿ ಕೂಡ ಕಾರಣ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular