ಬೆಂಗಳೂರು : ಯುಗಾದಿಯ ಸಂಭ್ರಮದ ಬೆನ್ನಲ್ಲೇ ನಾಳೆಯಿಂದ ಹಲವು ಅಗತ್ಯ ವಸ್ತು ಗಳ ಬೆಲೆ ಹೆಚ್ಚಳದಿಂದ ಜನಸಾಮಾನ್ಯರ ಬದುಕು `ದುಬಾರಿ’ ಆಗ ಲಿದ್ದು ಬೇವಿನ ಕಹಿ ಅನುಭವವಾಗಲಿದೆ.
ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣದರ ಮತ್ತು ಮೆಟ್ರೋ ದರ ಏರಿಕೆಯಿಂದ ಹೈರಾಣಾ ಗಿದ್ದ ರಾಜ್ಯದ ಜನತೆಯ ಮೇಲೆ ಮತ್ತಷ್ಟು ವಸ್ತುಗಳ ಬೆಲೆ ಹೆಚ್ಚಳದ ಭಾರ ಬಿದ್ದಿದ್ದು ನಾಳೆ (ಏಪ್ರಿಲ್ 1) ಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಹಾಲು ಒಕ್ಕೂಟಗಳ ಒತ್ತಡದ ಪರಿಣಾಮ ರಾಜ್ಯ ಸರ್ಕಾರ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಲೀಟರ್‌ಗೆ ೪ ರೂ.ಗೆ ಹೆಚ್ಚಿಸಿವೆ. ಹೊಸ ದರದನ್ವಯ ಲೀಟರ್ ಹಾಲಿಗೆ 42 ರೂ. ಇದ್ದಿದ್ದು 46 ರೂಪಾಯಿ ಆಗಲಿದೆ. ಮೊಸರಿನ ಬೆಲೆ ಲೀಟರ್‌ಗೆ 50ರೂ. ನಿಂದ 54ಕ್ಕೆ ಜಿಗಿಯಲಿದೆ. ಪರಿಣಾಮ ಹಾಲಿನ ಉತ್ಪನ್ನಗಳು, ಕಾಫಿ, ಚಹಾದ ಬೆಲೆ, ಮೊಸರಿನ ಉತ್ಪನ್ನಗಳ ದರವೂ ಹೆಚ್ಚಳವಾಗಲಿದೆ. ಪ್ರತಿ ಯೂನಿಟ್ ವಿದ್ಯುತ್‌ಗೆ 35 ಪೈಸೆ ಹೆಚ್ಚಾಗಲಿದೆ. 6.16 ರೂಪಾಯಿಗೆ ಜಿಗಿಯಲಿದೆ.
ಗೃಹ ವಿದ್ಯುತ್ ಬಳಕೆದಾರರ ಪಾಲಿಗೆ ಪರಿಷ್ಕೃತ ದರ ಬರಸಿಡಿಲಿನ ಅನುಭವ ನೀಡಲಿದೆ. ಲಿಫ್ಟ್ ನವೀಕರಣ ಶುಲ್ಕ ಏರಿಕೆ: ಈ ಮಧ್ಯೆ ರಾಜ್ಯ ಇಂಧನ ಇಲಾಖೆ ಸೋಮವಾರ ದಿಢೀರ್ ಆದೇಶ ಹೊರಡಿಸಿದ್ದು ಹಿಂದಿದ್ದ ದರಕ್ಕಿಂತ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡಿದೆ. ಹಿಂದೆ ಇದ್ದ ದರಕ್ಕಿಂತ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡಿದೆ. 800 ರೂ. ನಿಂದ 1,೦೦೦ ರೂ.ನಷ್ಟಿದ್ದ ಲಿಫ್ಟ್ ನವೀಕರಣ ಶುಲ್ಕದ ಮೊತ್ತವನ್ನು ಏಕಾಏಕಿ 5,೦೦೦ ರೂ. ನಿಂದ 8,೦೦೦ ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಅಂತೆಯೇ ಮನೆ, ಕಚೇರಿ, ಫ್ಯಾಕ್ಟರಿಗಳಿಗೆ 25 ಕೆವಿಎ ಟ್ರಾನ್ಸ್ಫಾರ್ಮರ್ ಹಾಕಿಸಿಕೊಂಡಿದ್ದರೆ ಅವುಗಳ ಪರಿಶೀಲನಾ ಶುಲ್ಕ 1,3೦೦ ರೂ.ನಿಂದ 15೦೦ ರೂಷ್ಟಿದ್ದುದನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ. ಮಾಡಲಾಗಿದೆ. 5 ರಿಂದ 10 ಕೆವಿಎ ಸಣ್ಣ ಜನರೇಟರ್ ಪರಿಶೀಲನೆ ಮತ್ತು ನವೀಕರಣ ಶುಲ್ಕ 2 ಸಾವಿರ ರೂ. ಇದ್ದದ್ದು 5 ರಿಂದ 8 ಸಾವಿರ ರೂ. ವರೆಗೆ ಹೆಚ್ಚಿಸಲಾಗಿದೆ. ರೈತರ ಐಪಿ ಸೆಟ್-25 ಕೆವಿ ವ್ಯಾಟ್‌ಗೆ 3 ಸಾವಿರ ಇದ್ದ ಶುಲ್ಕವನ್ನ ಏಕಾಏಕಿ 11,800 ರೂ.ಗಳಿಗೆ ಏರಿಕೆ ಮಾಡಲಾಗಿದ್ದು ಪರಿಷ್ಕೃತ
ದರಗಳು ನಾಳೆಯಿಂದಲೇ ಜಾರಿಗೆ ಬರಲಿವೆ.
ಟೋಲ್ ದರ ಹೆಚ್ಚಳ : ಇನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ವಿಧಿಸಲಾಗುತ್ತಿದ್ದ ಟೋಲ್ ಶುಲ್ಕವನ್ನು ಪರಿಷ್ಕರಿಸಿದ್ದು ಶೇ. 5 ರಷ್ಟು ಹೆಚ್ಚಳದ ಪರಿಷ್ಕರ ದರವೂ ಮಂಗಳವಾರದಿAದಲೇ ಅನುಷ್ಠಾನಗೊಳ್ಳಲಿದೆ. ವಾಹನ ಸವಾರರು ಹೆದ್ದಾರಿಯಲ್ಲಿ ಚಲಿಸುವ ಮುನ್ನ ಯೋಚಿಸುವುದು ಕಡ್ಡಾಯವಾಗಲಿದೆ.
ಕಸವೇ ಹೊರೆ: ಇನ್ನು ಬೆಂಗಳೂರಿನ ನಿವಾಸಿಗಳಿಗೆ ಮಂಗಳವಾರದಿಂದ ಕಸವೇ ಹೊರೆಯಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ರಾಜಧಾನಿ ವಾಸಿಗಳಿಗೆ ಕಸದ ತೆರಿಗೆ ಘೋಷಿಸಿದೆ. ಅದರನ್ವಯ 20/30 ನಿವೇಶನದ ಪ್ರತಿ ಮನೆ ಮಾಲೀಕರು ಮಾಸಿಕ 5೦ ರೂಪಾಯಿ ಶುಲ್ಕ, 3೦/4೦ ನಿವೇಶನದ ಮನೆ ಮಾಲೀಕರು 1೦೦ ರೂಪಾಯಿಯನ್ನು ಹೆಚ್ಚುವರಿಯಾಗಿ ಕಸ ವಿಲೇವಾರಿಗೆ ಪಾವತಿಸಬೇಕಾಗಿದೆ. ಹೊಸ ದರ ಏಪ್ರಿಲ್ ಒಂದರಿಂದಲೇ ಜಾರಿಗೆ ಬರಲಿದ್ದು ಹೊಸ ಆರ್ಥಿಕ ವರ್ಷದ ತೆರಿಗೆ ಪಾವತಿ ವೇಳೆ ತೆರಿಗೆಯ ಬಿಸಿ ತಟ್ಟಲಿದೆ. ಈ ಸರಣೀಕೃತ ದರ ಏರಿಕೆಯಿಂದಾಗಿ ಹೊಸ ಋತುಮಾನದ ದಿನಗಳು ಜನಶಸಾಮಾನ್ಯರು ಅದರಲ್ಲೂ ಮಧ್ಯಮ ವರ್ಗದ ಜನರ ಪಾಲಿಗೆ ಜೀವನವೇ ದುಬಾರಿಯಾಗಲಿದ್ದು ನಿತ್ಯವೂ ಬೇವಿನ ಅನುಭವವೇ ಆಗುವುದು ನಿಶ್ಚಿತವಾಗಿದೆ.