ಬೆಂಗಳೂರು : ಆಡಳಿತಕ್ಕೆ ಯಾವುದೇ ಪಕ್ಷದ ಸರ್ಕಾರ ಬರಲಿ ರಾಜ್ಯದಲ್ಲಿ ಅನ್ನದಾನ ಆತ್ಮಹತ್ಯೆ ಮಾತ್ರ ಅಬಾಧಿತ ಎನ್ನುವಂತಾಗಿದೆ. ಸರ್ಕಾರದ ಅಧಿಕೃತ ಅಂಕಿಸAಖ್ಯೆಯAತೆಯೇ ಕೇವಲ ಆರು ತಿಂಗಳಲ್ಲಿ ಬರೋಬ್ಬರಿ ೨೫೧ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಲೇ ಅವರ ಜೀವಬಲಿ ತಡೆಯಲಾಗದ ಸ್ಥಿತಿಗೆ ಆಡಳಿತಶಾಹಿ ವ್ಯವಸ್ಥೆ ಬಂದಿರುವುದು ಮಾತ್ರ ಆತಂಕ ಮೂಡಿಸುತ್ತದೆ.
2023 ರಲ್ಲಿ ರಾಜ್ಯದ ರೈತರ ಪಾಲಿಗೆ ಕರಾಳವರ್ಷ ಎನ್ನಬಹುದು. ನೈಋತ್ಯ ಮುಂಗಾರು ಕೈಕೊಟ್ಟಿದ್ದು ಒಂದಾದರೆ ವಿವಿಧ ಕಾರಣದಿಂದ ಸಂಭವಿಸಿದ ಬೆಳೆಹಾನಿ ಪರಿಣಾಮ ಮಾಡಿದ್ದ ಸಾಲ ತೀರಿಸಲಾಗದ ದುಸ್ಥಿತಿಯಿಂದ ದೊಡ್ಡಸಂಖ್ಯೆಯಲ್ಲಿ ಅನ್ನದಾತರು ಸಾವಿನ ಮನೆಯ ಕದ ತಟ್ಟಿದ್ದಾರೆ. ಈ ವರ್ಷದ ಏಪ್ರಿಲ್ 1 ರಿಂದ ಸೆಪ್ಟೆಂಬರ್ ೯ರವರೆಗೆ ರಾಜ್ಯದಲ್ಲಿ ಒಟ್ಟಾರೆ ಜೀವಕಳೆದುಕೊಂಡಿರು ವ ಬಗ್ಗೆ ದಾಖಲಾಗಿರುವ ಪ್ರಕರಣಗಳ ರೈತರ ಸಂಖ್ಯೆ ಬರೋಬ್ಬರಿ 251. ಒಟ್ಟಾರೆ ಪ್ರಕರಣಗಳಲ್ಲಿ ಸರ್ಕಾರದ ಪರಿಶೀಲನೆಯ ಬಳಿಕ 18 ಆತ್ಮಹತ್ಯೆ ಪ್ರಕರಣಗಳನ್ನು ತಿರಸ್ಕೃತಗೊಳಿಸಲಾಗಿದೆ. ಅಷ್ಟೇ ಅಲ್ಲದೆ 174 ರೈತರು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಸರ್ಕಾರವೇ ಒಪ್ಪಿಕೊಂಡಿದೆ. 59ಆತ್ಮಹತ್ಯೆಗಳು ಪರಿಹಾರಕ್ಕೆ ಯೋಗ್ಯವೇ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. 39 ಪ್ರಕರಣಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕೃತ ವರದಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಮತ್ತಿತರ ದಾಖಲಾತಿ ಕಾರಣಕ್ಕೆ 20 ರೈತರ ಆತ್ಮಹತ್ಯೆ ಪ್ರಕರಣಗಳು ಪೆಂಡಿAಗ್ನಲ್ಲಿವೆ. ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ 95 ಆತ್ಮಹತ್ಯೆ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳಿಂದ ಪರಿಹಾರಕ್ಕೆ ಅರ್ಹ ಎಂದು ಪರಿಗಣಿಸಿ ಅನುಮೋದನೆ ಸಿಕ್ಕಿದ್ದು ನೇರ ನಗದು ವರ್ಗಾವಣೆ ಮೂಲಕವೇ ಪರಿಹಾರ ಮೊತ್ತವನ್ನು ಸರ್ಕಾರ ಪಾವತಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ
2022ರ ಏ. 1ರಿಂದ 2023ರ ಮಾರ್ಚ್ 31 ಕ್ಕೆ ಅಂತ್ಯ ಗೊAಡ ಒಂದು ವರ್ಷದಲ್ಲಿ 849 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ೮೪೯ ಅರ್ಹಪ್ರಕರಣ ಎಂದು ಸರ್ಕಾರ ಪರಿಗಣಿಸಿದೆ. ಇಷ್ಟೂ ಮೃತರೈತ ಕುಟುಂಬಕ್ಕೆ ಪರಿಹಾರ ಒದಗಿಸಿರುವ ಬಗ್ಗೆ ಸರ್ಕಾರ ತಿಳಿಸಿದೆ.ಇನ್ನೊಂದೆಡೆ 165 ಪ್ರಕರಣಗಳು ಡಿಬಿಟಿ ಮೂಲಕ ಪಾವತಿ ಪ್ರಗತಿಯಲ್ಲಿದೆ ಎಂದು ತಿಳಿಸಿದೆ. ತುಮಕೂರು ಜಿಲ್ಲೆಯಲ್ಲಿ ಗರಿಷ್ಠ 122ಪ್ರಕರಣ ದಾಖಲಾಗಿದ್ದರೆ, ಮೈಸೂರು ಜಿಲ್ಲೆಯಲ್ಲಿ83, ಬೆಳಗಾವಿ 81, ಧಾರವಾಡ 78, ಚಿಕ್ಕಮಗಳೂರು 53 ಹಾಗೂ ಕಲಬುರಗಿ ಜಿಲ್ಲೆಯಲ್ಲಿ 50 ಆತ್ಮಹತ್ಯೆ ವರದಿಯಾಗಿವೆ. ಹಾವೇರಿ 38 ,ಬೆಳಗಾವಿ 29,ಧಾರವಾಡ 22,ಶಿವಮೊಗ್ಗ20,ಯಾದಗಿರಿ 16 ,ಚಿಕ್ಕಮಗಳೂರು 15, ಮೈಸೂರು 14,ವಿಜಯಪುರ 12,ಕಲಬುರಗಿ 11,ವಿಜಯನಗರ 09,ಮಂಡ್ಯ 09.
ಯಾವ ಜಿಲ್ಲೆ ಎಷ್ಟು..?
ಸಾಲಬಾಧೆ, ಬೆಳೆನಷ್ಟ ಪ್ರಮುಖ ಕಾರಣ | ೧೭೧ ಅರ್ಹ ಪ್ರಕರಣ ಎಂದ ಸರ್ಕಾರ
ಹಾವೇರಿ ಜಿಲ್ಲೆ ಒಂದರಲ್ಲೇ ೩೮ ಸಾವು ರೈತರು ಕುಟುಂಬದ ಆಧಾರವಾಗಿರುವುದು ಖಚಿತಪಟ್ಟಿದ್ದರೂ ಸಕಾಲಿಕ ಪರಿಹಾರ ಇನ್ನೂ ಸಿಗದಿರುವುದು ಅಧಿಕಾರಶಾಹಿ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದರೆ ಅತಿಶಯೋಕ್ತಿಯಾಗಲಾರದು.


