ಬೆಂಗಳೂರು : ಚಿನ್ನದ ಬೆಲೆ ದಿನೇ ದಿನೇ ಏರುಮುಖ ವಾಗುತ್ತಲೇ ಇದ್ದು, ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದು 10 ಗ್ರಾಂ ಚಿನ್ನದ ಬೆಲೆ 1,08,460 ರೂ ಆಗಿದೆ.
ಸೋಮವಾರ ಚಿನ್ನದ ಬೆಲೆ 10 ಗ್ರಾಮ್‌ಗೆ ಒಂದು ಲಕ್ಷ ರೂ ದಾಟಿತ್ತು. ಮಂಗಳವಾರ ಒಂದೇ ದಿನ ೨೪೦೦ ರೂ ಏರಿಕೆ ಕಂಡಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಷ್ಟು ಪ್ರಮಾಣದಲ್ಲಿ ಹಳದಿ ಲೋಹದ ಬೆಲೆ ಹೆಚ್ಚಳವಾಗಿದೆ.
ಇನ್ನು 22 ಕ್ಯಾರೆಟ್‌ನ ಚಿನ್ನದ ಬೆಲೆಯೂ ಏರಿಕೆಯಾಗಿದೆ. ಇದು ದೇಶದ ಇತರೆ ನಗರಗಳಿಗಿಂತ 10 ಗ್ರಾಂಗೆ 3 ಸಾವಿರಕ್ಕಿಂತ ಹೆಚ್ಚು ದರ ಜಾಸ್ತಿಯಾಗಿದೆ. ಅಕ್ಷಯ ತೃತೀಯ ಸಮೀಪಿಸುತ್ತಿದ್ದಂತೆ ಚಿನ್ನದ ದರ ಏರಿಕೆ ಗ್ರಾಹಕರಿಗೆ ಸಂಕಷ್ಟ ತಂದಿದೆ. ಚಿನ್ನದ ದರ ಇನ್ನೂ ತುಟ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ.