ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ` ಟಾಕ್ಸಿಕ್’ ಚಿತ್ರದ ಟೀಸರ್ಬಿ ಡುಗಡೆಯಾಗಿದೆ.ಯಶ್ ಜನ್ಮ ದಿನದ ಅಂಗವಾಗಿ ಟಾಕ್ಸಿಕ್ ಚಿತ್ರತಂಡ ಇಂದು ಬೆಳಗ್ಗೆ 11.25 ಕ್ಕೆ ಬಿಡುಗಡೆ ಮಾಡಿದೆ.
ಕೆವಿಎನ್ ಸಂಸ್ಥೆ ನಿರ್ಮಾಣದಲ್ಲಿ ಗೀತುಮೋಹನ್ ದಾಸ್ ನಿರ್ದೇಶನ ಮಾಡುತ್ತಿರುವ ಟಾಕ್ಸಿಕ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಇಡೀ ವಿಶ್ವವೇ ಈ ಟೀಸರ್‌ಗಾಗಿ ಎದುರು ನೋಡುತ್ತಿತ್ತು. ಇದೀಗ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಪಬ್ ಮುಂದೆ ಬಂದು ನಿಲ್ಲುವ ಕಾರಿನಿಂದ ಸ್ಟೈಲಿಶ್ ಆಗಿ ಬಂದು ಇಳಿಯುವ ರಾಕಿಂಗ್ ಸ್ಟಾರ್ ಸಿಗರೇಟ್ ಹಚ್ಚಿಕೊಳ್ಳುತ್ತಾರೆ. ಮತ್ತೆ ಅದ್ದೂರಿ ಪಬ್ ಒಳಗೆ ವಿದೇಶಿ ಯುವತಿಯರು ನೃತ್ಯ ಮಾಡುತ್ತಿರುತ್ತಾರೆ. ಒಳ ಪ್ರವೇಶಿಸುವ ನಾಯಕ ವಿದೇಶಿ ಯುವತಿಜೊತೆಗೆ ಮಾದಕ ನೋಟಬೀರೀ ಮದ್ಯ ಸುರಿಯುವ ದೃಶ್ಯವಿದೆ. ಅದ್ದೂರಿಯಾಗಿ ಟೀಸರ್ ಅನ್ನು ಚಿತ್ರೀಕರಣ ಮಾಡಲಾಗಿದೆ.
ಗೋವಾದಲ್ಲಿ ಜನುಮದಿನ ಆಚರಣೆ ರಾಕಿಂಗ್ ಸ್ಟಾರ್ ಯಶ್ ತಮ್ಮ 39 ನೇ ಜನ್ಮ ದಿನವನ್ನ ಗೋವಾದಲ್ಲಿ ತಮ್ಮ ಕುಟುಂಬ ಹಾಗೂ ಸ್ನೇಹಿತರೊಡಗೂಡಿ ಆಚರಿಸಿದ್ದಾರೆ. ಗೋವಾದ ಸಮುದ್ರತೀರದಲ್ಲಿಯೇ ಕೇಕ್ ಕಟ್ ಮಾಡಿ ಖುಷಿಪಟ್ಟಿದ್ದಾರೆ. ಪತ್ನಿ ರಾಧಿಕಾ ಪಂಡಿತ್, ಮಕ್ಕಳ ಜೊತೆಗೆ ನಿಂತು ಒಂದಷ್ಟು ಫೋಟೋಗಳನ್ನೂ ತೆಗೆಸಿಕೊಂಡಿದ್ದಾರೆ.
ಯಶ್ ಜನ್ಮ ದಿನದಂದ ಊರಲ್ಲಿ ಇರೋದಿಲ್ಲ ಅಂತಲೇ ಹೇಳಿದ್ದರು. ಆ ಪ್ರಕಾರ ಬೆಂಗಳೂರಿನಿಂದ ಯಶ್ ಗೋವಾಕ್ಕೆ ಬಂದಿದ್ದಾರೆ. ಈ ಮೂಲಕ ತಮ್ಮ ಕುಟುಂಬದ ಜೊತೆಗಗೆ ಮಧ್ಯರಾತ್ರಿ ಆಚರಿಸಿಕೊಂಡಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ರಾಧಿಕಾ ಪಂಡಿತ್ ನೆಚ್ಚಿನ ತಾಣಗೋವಾ: ಗೋವಾ ರಾಧಿಕಾ ಪಂಡಿತ್ ಅವರ ಅಜ್ಜಿಯ ಊರಾಗಿದೆ. ಇಲ್ಲಿಯೇ ಬಾಲ್ಯ ಕಳೆದಿರುವ ರಾಧಿಕಾ ಪಂಡಿತ್ ಈಗಲೂ ಗೋವಾನಂಟು ಹೆಚ್ಚಿದೆ. ಹಾಗಾಗಿಯೇ ತಮ್ಮ ಖುಷಿಯ ಕ್ಷಣಗಳನ್ನ ಹೆಚ್ಚಾಗಿ ಇಲ್ಲಿಯೇ ಕಳೆಯುತ್ತಾರೆ. ಇವರ ಎಂಗೇಜ್ಮೆAಟ್ ಕೂಡ ಇಲ್ಲಿಯೇ ಆಗಿತ್ತು. ಇದೀಗ, ರಾಕಿ ಭಾಯ್ ಜನುಮ ದಿನವನ್ನು ಗೋವಾದಲ್ಲಿ ಆಚರಿಸಿದ್ದಾರೆ