Saturday, February 22, 2025
Flats for sale
Homeಕ್ರೀಡೆಬೆಂಗಳೂರು : ಆರ್‌ಸಿಬಿ ತಂಡದ ನಾಯಕನಾಗಿ ರಜತ್ ಪಟೀದಾರ್‌ ಆಯ್ಕೆ ..!

ಬೆಂಗಳೂರು : ಆರ್‌ಸಿಬಿ ತಂಡದ ನಾಯಕನಾಗಿ ರಜತ್ ಪಟೀದಾರ್‌ ಆಯ್ಕೆ ..!

ಬೆಂಗಳೂರು : 18 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಇನ್ನು 4೦ ದಿನಗಳು ಕೂಡ ಕಾಲಾವಕಾಶವಿಲ್ಲ. ಹಾಗಾಗಿ, ಬಹುದಿನಗಳಿಂದ ಕಾಯುತ್ತಿದ್ದ ಆರ್‌ಸಿಬಿಯ ನಾಯಕನ್ಯಾರು ಎಂಬ ಪ್ರಶ್ನೆಗೆ ಆರ್‌ಸಿಬಿ ಫ್ರಾಂಚೈಸಿ ಉತ್ತರ ನೀಡಿದೆ. ನಿರೀಕ್ಷೆಯಂತೆಯೇ ಆರ್‌ಸಿಬಿ ತಂಡ ಬ್ಯಾಟರ್ ರಜತ್ ಪಟೀದಾರ್‌ಗೆ ತಮ್ಮ ತಂಡದ ನಾಯಕತ್ವವನ್ನು ನೀಡಲಾಗಿದೆ.

ಕಳೆದ ಮೂರು ಆವೃತ್ತಿಗಳಲ್ಲೂ ಉತ್ತಮ ಪ್ರದರ್ಶನ ತೋರಿ ಎರಡು ಬಾರಿ ಪ್ಲೇ ಆಫ್ ಹಂತ ಕೂಡ ತಲುಪಿದ್ದ ಆರ್‌ಸಿಬಿಗೆ ಫಾಫ್ ಡು ಪ್ಲೇಸಿ ನಾಯಕತ್ವ ವಹಿಸಿದ್ದರು. ಆದರೆ, 3 ವರ್ಷಗಳ ಒಪ್ಪಂದ ಮುಗಿದ ಕಾರಣ, ಫಾಫ್ ಬದಲಿಗೆ ಈಗ ರಜತ್ ಪಟೀದಾರ್‌ಗೆ ನಾಯಕತ್ವ ನೀಡಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅವರಣದಲ್ಲೇ ನಡೆದ ಸುದ್ದಿಗೋಷ್ಠಿಯಲ್ಲಿ ರಜತ್ ಪಟೀದಾರ್ ಅವರನ್ನು ನಾಯಕನೆಂದು ಘೋಷಿಸಲಾಯಿತು. ಇದೇ ವೇಳೆ ಆರ್‌ಸಿಬಿ ಫ್ರಾಂಚೈಸಿಯ ಅಧ್ಯಕ್ಷ ಮೊ ಬಾಬಟ್, ಸಿಇಓ ರಾಜೇಶ್ ಮೆನನ್, ಕೋಚ್ ಆಂಡಿ ಫ್ಲವರ್ ಅವರಿಂದಲೇ ರಜತ್ ಪಟೀದಾರ್‌ಗೆ ಆರ್‌ಸಿಬಿಯ ಜರ್ಸಿ ತೊಡಗಿಸಿ ಹೊಸ ನಾಯಕನನ್ನು ಪರಿಚಯಿಸಿದರು.

8 ನೇ ನಾಯಕನಾಗಿ ರಜತ್ ಪಟೀದಾರ್: ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2008 ರಿAದ ಈಗಿನವರೆಗೂ ಒಟ್ಟು 7 ನಾಯಕರನ್ನು ಕಂಡಿದೆ. ಈಗ ರಜತ್ ಪಟೀದಾರ್ ೮ನೇ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈವರೆಗೂ 31 ವರ್ಷದ ರಜತ್ ಪಟೀದಾರ್‌ರನ್ನು ನಾಯಕತ್ವಕ್ಕೆ ನೇಮಿಸುವ ವಿಚಾರದಲ್ಲಿ ಆರ್‌ಸಿಬಿ ಸಾಕಷ್ಟು ಅಳೆದು ತೂಗಿ ನಿರ್ಧಾರ ತೆಗೆದುಕೊಂಡಿದೆ. ಆದರೂ, ಆರ್‌ಸಿಬಿಯಂತಹ ತಂಡಕ್ಕೆ ರಜತ್ ಪಟೀದಾರ್‌ರಂತಹ ಅನಾನುಭವಿ ಆಟಗಾರ ನಾಯಕನಾಗಿರುವುದು ಇದೇ ಮೊದಲು. ಅಂತಾರಾಷ್ಟಿçÃಯ
ಕ್ರಿಕೆಟ್‌ನಲ್ಲಿ ಕೇವಲ 3 ಟೆಸ್ಟ್ ಹಾಗೂ 1 ಏಕದಿನ ಪಂದ್ಯವನ್ನು ಆಡಿರುವ ರಜತ್ ಪಡೀದಾರ್, ಈವರೆಗೂ ಒಂದೇ ಒAದು ಅರ್ಧಶತಕ ಗಳಿಸಿಲ್ಲ. ಆದರೆ, ತಂಡದ ನಾಯಕತ್ವ ವಹಿಸಿಕೊಳ್ಳಲು ವಿರಾಟ್ ಕೊಹ್ಲಿ ನಿರಾಕರಿಸಿದ ಕಾರಣ, ಬೇರೆ ದಾರಿಯಿಲ್ಲದೇ, ರಜತ್‌ರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular