ಬೆಂಗಳೂರು : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಎಂಬ ವದಂತಿ ಹಿನ್ನೆಲೆ ಜನರ ಆತಂಕ ದೂರು ಮಾಡುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲಾ ಬ್ಯಾಂಡ್‌ಗಳ ಮೊಟ್ಟೆ ಪರೀಕ್ಷೆಗೆ ಆರೋಗ್ಯ ಸಚಿವರು ಸೂಚಿಸಿದ್ದಾರೆ. ಜೊತೆಗೆ ಕಳೆದ 6 ತಿಂಗಳ ಹಿಂದೆ ಆಹಾರ ಸುರಕ್ಷತಾ ಇಲಾಖೆ ಪರೀಕ್ಷೆಯಲ್ಲಿ ಮೊಟ್ಟೆ ಸೇಫ್ ಎಂದು ಕೂಡ ವರದಿ ಬಂದಿದೆ.
ಜನ ಆತಂಕಕ್ಕೆ ಒಳಗಾಗಿದ್ದು ಮೊಟ್ಟೆ ತಿನ್ನುವುದಕ್ಕೂ ಭಯಪಡುವಂತಾಗಿದೆ. `ಜನರ ಆತಂಕ ದೂರ ಮಾಡುವುದಕ್ಕೆ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಮೊಟ್ಟೆ ಪರೀಕ್ಷೆ ಮಾಡುವುದಕ್ಕೆ ಸೂಚನೆ ಕೊಟ್ಟಿದ್ದಾರೆ. ಪ್ರಮುಖವಾಗಿವಾಗಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು, ಒಂದು ವೇಳೆ ತಪ್ಪು ಆಗಿದ್ದರೆ. ಶಿಕ್ಷೆಯಾಗುತ್ತದೆ. ಜನರು ಗೊಂದಲಕ್ಕೆ ಒಳಗಾಗುವುದು ಬೇಡ ಎನ್ನಲಾಗಿದೆ.


