ಬೆಂಗಳೂರು : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಹಲವು ಮಹಿಳೆಯರು ಪ್ರಾಣ ತೆತ್ತ ಘಟನೆ ಹಲವೆಡೆ ನಡೆದಿದೆ.ಮೂರು ವರ್ಷದ ಹಿಂದೆ ವಿಜೃಂಭಣೆಯಿಂದ 50 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿಸಿದ ಕುಟುಂಬಕ್ಕೆ ಇದೀಗ ಆಘಾತ ಉಂಟಾಗಿದೆ.ಕಷ್ಟಪಟ್ಟು ಓದಿ ಇನ್ಫೋಸಿಸ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಳು. ಬಳಿಕ ಅರಾಮ್ ಆಗಿ ಜೀವನ ನಡೆಸಬೇಕೆಂದು ಮದುವೆ ಆಗಿದ್ದು, ಒಂದು ಮಗು ಸಹ ಇತ್ತು. ಜತೆಗೆ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದಳು. ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ಆಕೆಯ ಸಾವಿನ ಸುದ್ದಿ ಕಂಗಾಲಾಗಿಸಿದೆ.
ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೃತಾಳನ್ನು ಇನ್ಫೋಸಿಸ್ ಉದ್ಯೋಗಿ ಶಿಲ್ಪಾ (27) ಎಂದು ತಿಳಿದಿದೆ.
ಶಿಲ್ಪಾ ಪೋಷಕರು ಸಾಫ್ಟವೇರ್ ಗಂಡ ಎಂದು 130 ಗ್ರಾಂ ಚಿನ್ನ ಕೊಟ್ಟು, 35 ಲಕ್ಷದಷ್ಟು ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಶಿಲ್ಪಾ ಬಿಟೆಕ್ ಓದಿದ್ರೆ ಪ್ರವೀಣ್ ಕೂಡ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನ . ಮದುವೆಯಾದ ಮೇಲೂ ಗಂಡ ಹಣಕ್ಕಾಗಿ ಪೀಡಿಸುತ್ತಿದ್ದು. ಪ್ರವೀಣ್ ಹಣದಾಹ ಮಾತ್ರ ತೀರಿಲ್ವಂತೆ. ಈ ಮಧ್ಯೆ ಸಾಫ್ಟವೇರ್ ಕೆಲಸ ಬಿಟ್ಟು ಶಿಲ್ಪಾ ಪೋಷಕರಿಂದ 5 ಲಕ್ಷ ಹಣ ತೆಗೆದುಕೊಂಡು ಪಾನಿಪೂರಿ ವ್ಯಾಪಾರ ಶುರು ಮಾಡಿದ್ದನು.
ಬೆಳ್ಳಂಬೆಳಗ್ಗೆ ಕರೆ ಮಾಡಿದ್ದ ಪ್ರವೀಣ್, ನಿಮ್ಮ ಮಗಳಿಗೆ ಹಾರ್ಟ್ ಆಟ್ಯಾಕ್ ಆಗಿದೆ ಬನ್ನಿ ಎಂದು ಹೇಳಿದ್ದು . ಪೋಷಕರು ಬಂದು ನೋಡಿದ್ರೆ ಮಂಚದ ಮೇಲೆ ಮಗಳ ಶವವಾಗಿ ಬಿದ್ದಿದ್ದಾಳೆ ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ. ‘ನನ್ನ ಮಗಳಿಗೆ ಪ್ರತಿದಿನ ಕಿರುಕುಳ ಕೊಡುತ್ತಿದ್ದರು. ಇತ್ತೀಚೆಗೆ ₹10 ಲಕ್ಷ ಹಣವನ್ನೂ ನೀಡಿದ್ದೆವು. ಆದರೆ ಕಿರುಕುಳ ನಿಲ್ಲಲಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಇಂತಹ ಘಟನೆ ಬೇರೆ ಹೆಣ್ಣುಮಕ್ಕಳಿಗೆ ಆಗಬಾರದು’ ಎಂದು ಕಣ್ಣೀರು ಹಾಕಿದ್ದಾರೆ. ಸುದ್ದುಗುಂಟೆ ಪಾಳ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪ್ರವೀಣ್ನನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.