ಬೆಂಗಳೂರು : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಗೆಲುವಿಗೆ ರೂಪಿಸಬೇಕಾದ ರಣತಂತ್ರ, ಸಚಿವರು, ಶಾಸಕರು ಹಾಗೂ ಪದಾಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿ ಸೇರಿದಂತೆ ಉಪಚುನಾವಣೆಗೆ ಸಂಬAಧಿಸಿದAತೆ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಚಿವರು, ಕೈ ಶಾಸಕರು, ಸಂಸದರು ಹಾಗೂ ಮುಖಂಡರ ಜತೆ ವಿಡಿಯೋ ಸಂವಾದ ನಡೆಸಿ ಉಪಚುನಾವಣೆಗೆ ಸಂಬಂಧಿಸಿದಂತೆ ಕೆಲ ಸಲಹೆ-ಸೂಚನೆಗಳನ್ನು ನೀಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಈ ವಿಡಿಯೋ ಸಂವಾದದಲ್ಲಿ ಉಪಚುನಾವಣೆಯ ಗೆಲುವು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಉಪಚುನಾವಣೆಯನ್ನು ಗಂಭೀರವಾಗಿ ತಗೆದುಕೊAಡು ಚುನಾವಣಾ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಲಾಯಿತು.
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಕುಂದಿಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ. ಹಾಗಾಗಿ ಪ್ರತಿಯೊಬ್ಬರೂ ತಮಗೆ ವಹಿಸಿರುವ ಚುನಾವಣಾ ಜವಾಬ್ದಾರಿಯನ್ನು
ನಿಷ್ಠೆಯಿಂದ ನಿರ್ವಹಿಸುವಂತೆಯೂ ಸೂಚನೆ ಕೊಡಲಾಯಿತು.
ಈ ಉಪಚುನಾವಣೆಯ ಗೆಲುವಿನ ಮೂಲಕ ಸರ್ಕಾರದ ವಿರುದ್ಧ ಟೀಕೆ ಟಿಪ್ಪಣಿ ಮಾಡುತ್ತಿರುವ ವಿಪಕ್ಷಗಳ ಬಾಯಿಗೆ ಬೀಗ ಹಾಕುವ ಕೆಲಸ ಮಾಡಬೇಕಿದೆ. ಹಾಗಾಗಿ ಪ್ರತಿಯೊಬ್ಬ ಸಚಿವರು, ಶಾಸಕರು, ಸಂಸದರು
ಹಾಗೂ ಮುಖಂಡರುಗಳು ಉಪಚುನಾವಣೆಯಲ್ಲಿ ಸಕ್ರಿಯರಾಗಿ ಪಕ್ಷ ವಹಿಸಿರುವ ಚುನಾವಣಾ ಕೆಲಸಗಳನ್ನು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರಿಗೂ ತಾಕೀತು ಮಾಡಿದರು.
ಈ ಉಪಚುನಾವಣೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿದೆ. ಈ ಅಗ್ನಿ ಪರೀಕ್ಷೆಯನ್ನು ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ಎದುರಿಸೋಣ. ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ತಕ್ಕ ಪ್ರತ್ಯುತ್ತರ ಕೊಡೋಣ ಎಂಬ ಸAಕಲ್ಪವನ್ನು ವಿಡಿಯೋ ಸಂವಾದದಲ್ಲಿ ತೊಡಲಾಯಿತು.
ಶತಾಯ-ಗತಾಯ ಮೂರು ಕ್ಷೇತ್ರಗಳಲ್ಲೂ ನಾವು ಗೆಲ್ಲಲೇಬೇಕು. ಅದಕ್ಕೆ ಏನೆಲ್ಲಾ ರಣತಂತ್ರಗಳನ್ನು ರೂಪಿಸಬೇಕೋ ಆ ಕೆಲಸ ಮಾಡೋಣ. ಎಲ್ಲ ಸಚಿವರು, ಶಾಸಕರು ತಮ್ಮ ವೈಯುಕ್ತಿಕ ಕೆಲಸಗಳನ್ನು ಬದಿಗಿಟ್ಟು
ಚುನಾವಣೆ ಮುಗಿಯುವವರೆಗೂ ತಮಗೆ ಜವಾಬ್ದಾರಿ ವಹಿಸಿರುವ ಕ್ಷೇತ್ರ, ಬೂತ್‌ಗಳಲ್ಲೇ ವಾಸ್ತವ್ಯ ಹೂಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡಬೇಕು ಎಂಬ ಕಟ್ಟಾಜ್ಞೆಯನ್ನು ಈ ವಿಡಿಯೋ ಸಂವಾದದಲ್ಲಿ ನಾಯಕರುಗಳು ನೀಡಿದರು.
ಚುನಾವಣೆ ಮುಗಿಯುವವರೆಗೂ ಎಲ್ಲ ಕೆಲಸಗಳನ್ನು ಬಿಟ್ಟು ಚುನಾವಣಾ ಕಾರ್ಯದಲ್ಲಿ ತೊಡಗಿಕೊಳ್ಳಿ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಮೂರು ಕ್ಷೇತ್ರಗಳನ್ನು ಗೆಲ್ಲೋಣ. ಎಲ್ಲರೂ ಚುನಾವಣೆ ಗೆಲುವಿಗೆ ಶ್ರಮವಹಿಸಿ ಎಂದು ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಹೇಳಿದರು.
ಉಪಚುನಾವಣೆ ನಡೆಯುತ್ತಿರುವ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳ ಪೈಕಿ ಯಾವ ಸಚಿವರು, ಯಾವ ಶಾಸಕರು, ಯಾವ ಸಂಸದರು ಎಲ್ಲೆಲ್ಲಿ ಕೆಲಸ ಮಾಡಬೇಕು ಎಂಬ ಬಗ್ಗೆ ಪಕ್ಷದ ಅಧ್ಯಕ್ಷರು ಸೂಚನೆಗಳನ್ನು ಕೊಡುತ್ತಾರೆ. ಅವರ ಸೂಚನೆಯನ್ನು ಪಾಲಿಸಿ, ಅದರಂತೆ ಕಾರ್ಯನಿರ್ವಹಿಸಿ ಎಂದು ಮುಖ್ಯಮAತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಸಚಿವರು ಹಾಗೂ ಶಾಸಕರುಗಳಿಗೆ ಈ ವಿಡಿಯೋ ಸಂವಾದದಲ್ಲಿ ಕಿವಿಮಾತು ಹೇಳಿದರು.
ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಒಟ್ಟಾಗಿ ಚುನಾವಣೆ ಎದುರಿಸುತ್ತಿರುವುದರಿಂದ ಚುನಾವಣೆ ಗೆಲುವು ಪ್ರತಿಷ್ಠೆಯಾಗಿದೆ. ಹಾಗಾಗಿ ನಮ್ಮ ಪಕ್ಷ ಹಾಗೂ ಸರ್ಕಾರದ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಗೆಲುವಿಗೆ ಸ್ಥಳೀಯ ಮಟ್ಟದಲ್ಲಿ ಏನೆಲ್ಲಾ ರಣತಂತ್ರಗಳನ್ನು ಮಾಡಬೇಕೋ ಅದನ್ನು ಮಾಡಿ. ಚುನಾವಣಾ ಕಾರ್ಯವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಇವರುಗಳು ಸೂಚನೆ ನೀಡಿದರು.