Tuesday, October 21, 2025
Flats for sale
Homeರಾಜಕೀಯಬೆಂಗಳೂರು : ಮುಡಾ ಹಗರಣಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ನಿಂದ ಕೊರೊನಾಸ್ತ್ರ, ಸಿದ್ದರಾಮಯ್ಯ ಕೈ ಸೇರಿದ...

ಬೆಂಗಳೂರು : ಮುಡಾ ಹಗರಣಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ನಿಂದ ಕೊರೊನಾಸ್ತ್ರ, ಸಿದ್ದರಾಮಯ್ಯ ಕೈ ಸೇರಿದ ತನಿಖಾ ವರದಿ,ಕ್ರಿಮಿನಲ್ ಕೇಸ್​ ದಾಖಲಿಸುವಂತೆ ಶಿಫಾರಸು.

ಬೆಂಗಳೂರು : ಮೂಡ ಹಗರಣದಲ್ಲಿ ಕಂಗೆಟ್ಟ ಸಿದ್ದರಾಮಯ್ಯ ಸರಕಾರ ಇದೀಗ ಬಿಜೆಪಿ ವಿರುದ್ಧ ಕೊರೊನಾಸ್ತ್ರ ಹೂಡಿದೆ. ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ವಿರುದ್ಧ ಒಂದು ಕಡೆ ಕಾನೂನು ಸಮರ ನಡೆಯುತ್ತಿದ್ದರೆ, ಅತ್ತ ಬಿಜೆಪಿ ಅವಧಿಯ ಹಗರಣ ಕುರಿತು ಸಿಎಂ ರಾಜಕೀಯ ಹೋರಾಟವನ್ನ ಮುಂದುವರಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೋವಿಡ್‌ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಜಸ್ಟಿನ್‌ ಜಾನ್‌ ಮೈಕಲ್‌ ಡಿ. ಕುನ್ಹಾ ನೇತೃತ್ವದ ಆಯೋಗ ವರದಿಯನ್ನು ಸಲ್ಲಿಕೆ ಮಾಡಿದೆ. ಹೀಗಾಗಿ ಬಿಜೆಪಿಗರಲ್ಲಿಆತಂಕ ಶುರುವಾಗಿದೆ.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಅನ್ನು ನಿಭಾಯಿಸುವಲ್ಲಿ 7,000 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಆರೋಪಿಸಿರುವ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯನ್ನು ಶನಿವಾರ ಇಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ವಿರುದ್ಧ ಅಕ್ರಮ ನಡೆಸಿರುವ ಆರೋಪ ಮಾಡಲಾಗಿದೆ. ವೆಂಟಿಲೇಟರ್‌, ಆಕ್ಸಿಜನ್‌ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್‌-19 ನಿರ್ವಹಣಾ ಉಪಕರಣಗಳು, ರ್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌ ಕಿಟ್‌ಗಳ ಖದೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲಾಗಿದೆ.

2023ರ ಆಗಸ್ಟ್ ತಿಂಗಳಲ್ಲಿ ಜಾನ್ ಮೈಕಲ್ ಕುನ್ನ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿದ ಸರ್ಕಾರವು ಕೊರೋನಾ ನಿರ್ವಹಣೆ, ಔಷಧ, ಉಪಕರಣ, ಸಾಮಗ್ರಿ ಖರೀದಿ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಕುರಿತು ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು. ಕೋವಿಡ್ ಅವ್ಯವಹಾರದ ತನಿಖೆಗೆಂದು ರಚಿಸಲಾಗಿರುವ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಶನಿವಾರ ಸಲ್ಲಿಕೆ ಮಾಡಿರುವುದು ಮಧ್ಯಂತರ ವರದಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ವರದಿಯಲ್ಲಿ ಕಂಡು ಬಂದ ಅಂಶಗಳು ಈ ರೀತಿ ಇದೆ.

1754 ಕೋಟಿ ರೂಪಾಯಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಗಿಲ್ಲ.
ಕೊವಿಡ್​ ಅವದಿಯಲ್ಲಿ ಬಾರಿ ಮೊತ್ತದ ಹಣ ಸೂಕ್ತ ರೀತಿಯಲ್ಲಿ ನಿರ್ವಹಣೆ ಆಗಿಲ್ಲ.

ಹಣ ಖರ್ಚು-ವೆಚ್ಚ ಮಾಡಿರುವ ಬಗ್ಗೆ ಸೂಕ್ತ ದಾಖಲೆ, ಮಾಹಿತಿಯಿಲ್ಲ
ಕೆಲ ಖರೀದಿ ಹಾಗೂ ನಿರ್ವಹಣೆಯಲ್ಲಿ ಹಣ ವಿನಿಯೋಗಿಸದೆ ಬಿಲ್​ ಸೃಷ್ಟಿ ಮಾಡಲಾಗಿದೆ ಎಂದು ವರದಿ

ಹಣ ದುರುಪಯೋಗದ ಸಂಶಯದಲ್ಲಿ ಕ್ರಿಮಿಕಲ್​ ಕೇಸ್​ ದಾಖಲಿಸಿ ತನಿಖೆಗೆ ಶಿಪಾರಸ್ಸು

ನ್ಯಾಷಿನಲ್​​ ಹೆಲ್ತ್​ ಮಿಷನ್, ಮೆಡಿಕಲ್​​ ಎಜ್ಯುಕೆಷನ್ ನಿರ್ದೇಶನಾಲಯ, ಬಿಬಿಎಂಪಿ ಕರ್ನಾಟಕ ಮೆಡಿಕಲ್ ಕಾರ್ಫರೆಷನ್ ಸೇರದಂತೆ ಒಟ್ಟು 11 ವಿಭಾಗದಲ್ಲಿ ಹಣ ದುರುಪಯೋಗದ ಬಗ್ಗೆ ಉಲ್ಲೇಖ.

2023ರ ಆಗಸ್ಟ್ 25ರಂದು‌ ರಚನೆಯಾಗಿದ್ದ ಕೋವಿಡ್ ತನಿಖಾ ಆಯೋಗ ರಚನೆ ಮಾಡಲಾಗಿತ್ತು. ಸರ್ಕಾರದಿಂದ ಬಿಡುಗಡೆಯಾದ ಹಣವನ್ನ ಯಾವ ಯಾವ ವಿಭಾಗಗಳು‌‌‌ ಎಷ್ಟು ಖರ್ಚು ಮಾಡಿಕೊಂಡಿದೆ.

11 ವಿಭಾಗಳಿಂದ ಖರ್ಚಾದ ಒಟ್ಟು ಮೊತ್ತದ ವಿವರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 1754 ಕೋಟಿ ರೂ.

ರಾಷ್ಟ್ರೀಯ ಆರೋಗ್ಯ ಅಭಿಯಾನ 1406 ಕೋಟಿ ರೂ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ 918 ಕೋಟಿ ರೂ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ 1394 ಕೋಟಿ ರೂ. (Medical Requirement)

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ 569 ಕೋಟಿ ರೂ. (Drugs)

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ 264 ಕೋಟಿ ರೂ.

ಬಿಬಿಎಂಪಿ ಕೇಂದ್ರ ಕಚೇರಿ 732 ಕೋಟಿ ರೂ.

ಬಿಬಿಎಂಪಿ ದಾಸರಹಳ್ಳಿ ವಲಯ 26 ಕೋಟಿ ರೂ.

ಬಿಬಿಎಂಪಿ ಪೂರ್ವ ವಲಯ 78 ಕೋಟಿ ರೂ.

ಬಿಬಿಎಂಪಿ ಮಹದೇವಪುರ ವಲಯ 48 ಕೋಟಿ ರೂ.

ಬಿಬಿಎಂಪಿ ರಾಜರಾಜೇಶ್ವರಿ ವಲಯದಿಂದ 31 ಕೋಟಿ ರೂ.

ಒಟ್ಟಿನಲ್ಲಿ ಕೋವಿಡ್​ ಹಗರಣದ ಬಗ್ಗೆ ವರದಿ ಸರ್ಕಾರ ಕೈಸೇರಿದ ಬೆನ್ನಲ್ಲೇ ಬಿಜೆಪಿಗರಲ್ಲಿ ಢವಢವ ಶುರುವಾಗಿದೆ. ಕಳೆದ ರಾತ್ರಿ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಸಚಿವ ಎಂ.ಬಿ ಪಾಟೀಲ್‌, ಡಾ.ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಸಮಾಲೋಚನೆ ನಡೆಸಿದ್ದಾರೆ.ಪೂರ್ಣ ವರದಿಯನ್ನು ಸಲ್ಲಿಸಲು ಆಯೋಗವು ತನ್ನ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿದೆ. ಆದರೆ ಮಧ್ಯಂತರ ವರದಿಯಲ್ಲಿನ ಶಿಫಾರಸುಗಳನ್ನು ಪರಿಶೀಲಿಸಲು ಸರ್ಕಾರವು ಸಂಪುಟ ಉಪಸಮಿತಿಯನ್ನು ರಚಿಸುತ್ತದೆಯೇ ಅಥವಾ ಮುಂದಿನ ಕ್ರಮಕ್ಕಾಗಿ ಸಂಪುಟದ ಮುಂದೆ ಇಡುತ್ತದೆಯೇ ನೋಡಬೇಕು ಎಂದು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular