ಬೆಂಗಳೂರು : ಫೆಡೆಕ್ಸ್ ಕೋರಿಯರ್ ಪಾರ್ಸಲ್ ಹೆಸರಿನಲ್ಲಿ ಸೈಬರ್ ವಂಚನೆ ಎಸಗುತ್ತಿದ್ದ 8 ಮಂದಿ ಖದೀಮರ ಗ್ಯಾಂಗ್ ಬಂಧಿಸುವಲ್ಲಿ ಉತ್ತರ ವಿಭಾಗದ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ವಾಸೀಂ(30)ಅಬ್ದುಲ್ಲಾ(35)ಮುಜಾಯೀದ್ದೀನ್ (24)ಮುಶ್ರಫ್ ಖಾನ್ (24) ನೂರೂಲ್ಲಾ ಖಾನ್ (54)ಮೊಹಮ್ಮದ್ ಉಮರ್ (44)ಸೈಯದ್ ಹುಸೇನ್ ಅಲಿಯಾಸ್ ಮೌಲಾ (36)ಸೈಯದ್ ಹುಸೇನ್ (23) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿAದ 13,17,800 ನಗದು,ವಿವಿಧ ಬ್ಯಾಂಕ್ ಖಾತೆಯಲ್ಲಿ 19 ಲಕ್ಷ ಹಣ ಪ್ರೀಜ್ ಮಾಡಿಸಿ ಕೃತ್ಯಕ್ಕೆ ಬಳಸಿದ 11 ಮೊಬೈಲ್, ವಿವಿಧ ಬ್ಯಾಂಕ್‌ನ 148 ಖಾತೆಗಳ ಪ್ರೀಜ್, ಚೆಕ್ ಬುಕ್, ಪಾಸ್‌ಬುಕ್ ಮತ್ತು ಎಟಿಎಂ ಕಾರ್ಡ್ ಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿ ಕಳೆದ ನ. 10 ರಂದು ವಾಟ್ಸ್ ಆಫ್ ಆಡಿಯೋ ಕಾಲ್ ನಿಂದ ದೂರು ದಾರರನ್ನು ಸಂಪರ್ಕಿಸಿ, ತಾವು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರೆಂದು ಮಾತನಾಡುತ್ತಿರುವುದಾಗಿ ಹೇಳಿ ನಿಮ್ಮ ಪತ್ನಿಯ ಹೆಸರಿನಲ್ಲಿ ಫೆಡೆಕ್ಸ್ ಕೋರಿಯರ್ ನಲ್ಲಿ ಮುಂಬೈನಿಂದ ಥೈಲ್ಯಾAಡ್ ದೇಶಕ್ಕೆ ಕಾನೂನು ಬಾಹಿರ ಪಾರ್ಸಲ್ ಗಳಾದ 4 ಅವಧಿ ಮುಗಿದ ಪಾಸ್‌ಪೋರ್ಟ್,2.35 ಕೆ.ಜಿ. ಬಟ್ಟೆ, 2 ಪೆನ್ ಡ್ರೆöÊವ್, 1 ಲ್ಯಾಪ್‌ಟಾಪ್ ಕ್ರೆಡಿಟ್ ಕಾರ್ಡ್ಮ ತ್ತು ಬ್ಯಾಂಕ್ ದಾಖಲಾತಿಗಳು ಹಾಗೂ140 ಗ್ರಾಂ ಎಂಡಿಎAಎ ಮಾದಕ ವಸ್ತುಗಳು ಸಿಕ್ಕಿವೆ. ಮತ್ತು ನಿಮ್ಮ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ತೆರೆದು ಅದರ ಮೂಲಕ ಮನಿ ಲಾಂಡರಿAಗ್ಆ ಗುತ್ತಿರುವ ಬಗ್ಗೆ ಮಾಹಿತಿಯಿದ್ದಲ್ಲಿ ಆದ ಕಾರಣ ನಿಮ್ಮ ಬ್ಯಾಂಕ್ಖಾ ತೆಯನ್ನು ಆರ್ ಬಿಐ ನವರು ಪ್ರೀಜ್ ಮಾಡುವ ಸಂಭವವಿದೆAದು ಹೇಳಿ ನಿಮ್ಮ ಬ್ಯಾಂಕ್ ಸ್ಟೆಟ್‌ಮೆಂಟ್‌ಅನ್ನು ತನಿಖೆಗಾಗಿ ವಿಚಾರಿಸಬೇಕಾಗಿದೆ ಎಂದು ಬ್ಯಾಂಕ್ ಖಾತೆ ಮಾಹಿತಿ ಪಡೆದು ಹಾಗೂ ತನಿಖಾ ವಿಚಾರಣಾ ಸಲುವಾಗಿ ನೀವು ಮುಂಗಡ ಹಣ ನೀಡಬೇಕು.
ತನಿಖೆ ಮುಗಿದ ನಂತರ ಸದರಿ ಮೊತ್ತವನ್ನು ವಾಪಸು ತಮ್ಮ ಖಾತೆಗೆ ಜಮಾ ಮಾಡುವುದಾಗಿ ಹೇಳಿ ಪಿರ್ಯಾದಿಯ ಹೆಚ್ ಡಿಎಫ್ ಸಿ ಬ್ಯಾಂಕ್ ಖಾತೆಯಿಂದ 66 ಲಕ್ಷ ಮತ್ತು ಜನ್ ಸ್ಮಾಲ್ ಫೈನಾನ್ಸ್ಬ್ಯಾಂ ಕ್ ಖಾತೆಯಿಂದ 42 ಲಕ್ಷ ಸೇರಿದಂತೆ ಒಟ್ಟು 1 ಕೋಟಿ 8 ಲಕ್ಷ ಗಳನ್ನು ವರ್ಗಾಯಿಸಿಕೊಂಡು ವAಚನೆ ಮಾಡಿದ್ದರು.
ಈ ಸಂಬAಧ ನೀಡಿದ ದೂರಿನ ಮೇರೆಗೆ ಸಿಇಎನ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್ ಮತ್ತು ವಂಚನೆ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಸಿಇಎನ್ ಕ್ರೆöÊಂ ಪೊಲೀಸ್ ಇನ್ಸ್ ಪೆಕ್ಟರ್ ಶಿವರತ್ನ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.
ತಂಡವು ತಕ್ಷಣ ಕಾರ್ಯ ಪ್ರವೃತ್ತರಾಗಿ ಪ್ರಕರಣದ ತನಿಖೆ ಕೈಗೊಂಡು, ದೂರುದಾರರ ಫೆಡೆಕ್ಸ್ ಕೋರಿಯರ್ ಪಾರ್ಸಲ್ ಹೆಸರಿನಲ್ಲಿ ವಂಚಿಸಿ ದೂರುದಾರರ ಖಾತೆಯಿಂದ ವರ್ಗಾವಣೆ ಮಾಡಿಕೊಂಡಿದ್ದ1.8 ಕೋಟಿ ರೂಗಳನ್ನು ನಂತರ ಇದೇ ಖಾತೆಯಿಂದ 9,34,೦೦೦/- ಗಳು ಅರೋಪಿಗಳ ಖಾತೆಗೆ ಜಮೆಯಾಗಿದ್ದು, ಆ ಹಣವನ್ನು ದಾವಣಗೆರೆಯ ಆರ್.ಬಿ.ಎಲ್ ಬ್ಯಾಂಕ್‌ನಲ್ಲಿ ವಿತ್ಡ್ರಾ ಮಾಡಿದ್ದು, ಈ ಬಗ್ಗೆ ಸಿ.ಸಿ ಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿ ಇದರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡು ಕೃತ್ಯದಲ್ಲಿ ಭಾಗಿಯಾಗಿರುವ ೮ ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬAಧಿತರು ನೀಡಿದ ಮಾಹಿತಿ ಮೇರೆಗೆ 13,17,800 ಗಳ ನಗದು ಹಣ, ವಿವಿಧ ಬ್ಯಾಂಕ್ ಖಾತೆಯಲ್ಲಿ 19 ಲಕ್ಷ ಹಣ ಪ್ರೀಜ್ ಮಾಡಿದ್ದು ಹಾಗೂ ಕೃತ್ಯಕ್ಕೆ ಬಳಸಿದ 11 ಮೊಬೈಲ್ ಗಳು, ವಿವಿಧ ಬ್ಯಾಂಕ್‌ನ 148 ಖಾತೆಗಳ ಪ್ರೀಜ್ ಮಾಡಿದ್ದು, ಆ ಬ್ಯಾಂಕ್‌ಗಳ ಚೆಕ್ ಬುಕ್,ಪಾಸ್‌ಬುಕ್ ಮತ್ತು ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಆರೋಪಿಗಳ ದಸ್ತಗಿರಿಯಿಂದ ಎನ್ ಸಿಆರ್ ಬಿ ಪೋರ್ಟಲ್ ನಲ್ಲಿ ದಾಖಲಾಗಿದ್ದ ಸುಮಾರು ೭೫ ಸೈಬರ್ ವಂಚನೆಯ ಪ್ರಕರಣಗಳು ಪತ್ತೆಯಾಗಿರುತ್ತವೆ. ಮತ್ತು ಸುಮಾರು 4500/- ರೂ ಬೆಲೆ ಬಾಳುವ ಯುಎಸ್ ಡಿಟಿ ಯನ್ನು ಪ್ರೀಜ್ ಮಾಡಲಾಗಿರುತ್ತದೆ. ಈ ಆರೋಪಿಗಳಿಂದ ಬಂಧನದಿAದ ಉತ್ತರ ವಿಭಾಗದ ಸಿಇಎನ್ ಸ್ರೆöÊಂ ಪೊಲೀಸ್ ಠಾಣೆಯ 2 ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಪ್ರಕರಣವನ್ನು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾರ್ಗದರ್ಶನದಲ್ಲಿ ಎಸಿಪಿ ಮೇರಿ ಶೈಲಜ, ಇನ್ಸ್ಪೆಕ್ಟರ್ಶಿ ವರತ್ನ ಎಸ್ ರವರ ನೇತೃತ್ವದ ಸಿಬ್ಬಂದಿ ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು