ಬೆಂಗಳೂರು : ರಾಜ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿವಿಧ ಬಣಗಳ ಡಿನ್ನರ್ ಮಿಟಿಂಗ್ಗಳು ಪೈಪೋಟಿ ಮೇಲೆ ನಡೆಯುತ್ತಿವೆ. ಈ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾ.10 ರಂದು ಅಧಿಕೃತ ವಾಗಿ ಡಿನ್ನರ್ ಮೀಟಿಂಗ್ ಆಯೋಜಿಸಿರು ವುದು ಭಾರಿ ಕುತೂಹಲ ಕೆರಳಿಸಿದೆ.
ತಾವು ಕೆಪಿಸಿಸಿ ಅಧ್ಯಕ್ಷರಾಗಿ ಮಾ.೬ಕ್ಕೆ ೬ ವರ್ಷ ಪೂರೈಸುತ್ತಿರುವ ಕಾರಣಕ್ಕೆ ಈ ಔತಣಕೂಟಎಂದು ಹೇಳಿಕೊಂಡಿದ್ದಾರೆ. ನಾಯಕತ್ವ ಬದಲಾವಣೆಗೆ ಸಂಬAಧಿಸಿದAತೆ ಸಿಎಂ ಬಣದ ಸಚಿವರು, ಶಾಸಕರು ಈಗಾಗಲೇ ಹಲವು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಅತ್ತ ಡಿಸಿಎಂ ಬೆಂಬಲಿತ ಶಾಸಕರು ಕೂಡ ಪೈಪೋಟಿಗೆ ಬಿದ್ದವರಂತೆ ಡಿನ್ನರ್ ಆಯೋಜಿಸಿದ್ದಾರೆ.
ಇದೀಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಏರ್ಪಡಿಸಿರುವ ಔತಣಕೂಟವು ಹಲವುಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. ಮಾ.೧೦ಕ್ಕೆ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿರುವ ಡಿನ್ನರ್ ಮೀಟಿಂಗ್ಗೆ ಸಿಎಂ ಸಿದ್ದರಾಮಯ್ಯ, ಸಂಪುಟದ ಎಲ್ಲಾ ಸಚಿವರು, ಕಾಂಗ್ರೆಸ್ ಶಾಸಕರು, ಮೇಲ್ಮನೆ ಸದಸ್ಯರು ಹಾಗೂ ಪಕ್ಷದ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಮುಖಂಡರಿಗೆ ಅಧಿಕೃತವಾಗಿ ಆಹ್ವಾನ ಕೊಡುವ ಕೆಲಸ ಆರಂಭವಾಗಿದೆ. ಮಾ.೬ರಿAದಲೇ ಮುಂಗಡಪತ್ರ ಅಧಿವೇಶನ ಆರಂಭವಾಗುತ್ತಿದ್ದು, ಇದರ ನಡುವೆಯೇ ಡಿನ್ನರ್ಮೀಟಿಂಗ್ ನಡೆಸುತ್ತಿರು ವುದು ವಿಶೇಷವಾಗಿದೆ.
ಸಿಎಂ ಅಧಿಕಾರ ಹಂಚಿಕೆ ಸಂಬAಧ ಪರವಿರೋಧ ಪರಾಕಾಷ್ಠೆ ತಲುಪಿದ್ದರೂ, ಎರಡೂಬಣಗಳು ನಾಯಕತ್ವದ ಬಗ್ಗೆ ಕ್ಲಾರಿಟಿ ಕೊಡಿ ಎಂದು ಹಕ್ಕೊತ್ತಾಯ ಮಂಡಿಸಿದ್ದರೂ, ಪಕ್ಷದಹೈಕಮಾಂಡ್ ಮಾತ್ರ ಗೊಂದಲ ಬಗೆಹರಿಸುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಈಎಲ್ಲದರ ನಡುವೆಯೇ ಸಿಎಂ ಸ್ಥಾನಾಕಾಂಕ್ಷಿ ಡಿಸಿಎA ಮುಖ್ಯಮಂತ್ರಿ ಆದಿಯಾಗಿ ಎಲ್ಲರನ್ನೂಔತಣಕೂಟಕ್ಕೆ ಆಹ್ವಾನಿಸುತ್ತಿರುವುದು ಮಾತ್ರ ರಾಜಕೀಯವಾಗಿ ಬೇರೆಬೇರೆ ರೀತಿಯವಿಶ್ಲೇಷಣೆಗೆ ಗ್ರಾಸವಾಗುತ್ತಿದೆ.
ಪಕ್ಷದ ಅಧ್ಯಕ್ಷನಾಗಿ ಖಂಡಿತಾ ನನಗೆ ಆರು ವರ್ಷ ಸಾಕು, ಹೊಸ ರಕ್ತ, ಹೊಸ ಆಲೋಚನೆ ಪಕ್ಷಕ್ಕೆಬೇಕು. ಹೊಸ ರಕ್ತಕ್ಕೆ ಅವಕಾಶ ನೀಡಲು ನಾವು ಆ ಸ್ಥಾನ ಬಿಡ ಬೇಕು ಎನ್ನುವ ಮೂಲಕ ಪಕ್ಷದಸಾರಥ್ಯ ತೊರೆಯುವ ಇಂಗಿತವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿದರು. ಡಿಸಿಎಂ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಮತ್ತು ಸರ್ಕಾರದಲ್ಲಿ ಹೊಸಬರು ಬರಲಿ. ನಾನು ಸ್ಟ್ರೀಟ್ ಫೈಟರ್, ಹೇಗೆ ಹೋರಾಟ ಮಾಡಬೇಕು ಎಂದು ನನಗೆ ಗೊತ್ತಿದೆ. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ ಎಂದರು


