ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು ಶೋಧ ಕಾರ್ಯಕ್ಕೆ ಇಳಿದಿದ್ದಾರೆ. ಮಾಸ್ಕ್ ಮ್ಯಾನ್ ಯಾವುದೇ ಜಾಗ ತೋರಿಸಿದರು ಅದನ್ನು ಪಾಯಿಂಟ್ ಎಂದು ಗುರುತಿಸದೇ ನೇರವಾಗಿ ಹೋಗಿ ಅಗೆಯಲು ಎಸ್‌ಐಟಿ ಅಧಿಕಾರಿಗಳು
ನಿರ್ಧರಿಸಿದ್ದಾರೆ. ಒಂದೇ ವೇಳೆ ಮಾಸ್ಕ್ ಮ್ಯಾನ್ ತಪ್ಪು ಮಾಡಿದರೇ ನೇಣಿಗೆ ಹಾಕಲಿ ಎಂಬುದಾಗಿ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೀಗ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದ ಪ್ರಕರಣಕ್ಕೆ ಸಂಬAಧಪಟ್ಟAತೆ ಮಾಸ್ಕ್ ಮ್ಯಾನ್ ತಪ್ಪು ಮಾಹಿತಿ ನೀಡಿದ್ದರೇ ನೇಣಿಗೆ ಹಾಕಲಿ. ಈ ಪ್ರಕರಣದಲ್ಲಿ ಯಾವುದೇ ಮುಸ್ಲಿಂ ಸಂಘಟನೆಗಳ ಕೈವಾಡವಿಲ್ಲ. ಬಿಜೆಪಿಯವರು ಹಿಂದೂ-ಮುಸ್ಲಿಂ ಎAದು ಬಿಂಬಿಸಲು ಹೊರಟಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಎಸ್ ಐ ಟಿ ಅಧಿಕಾರಿಗಳು ಮಧ್ಯಂತರ ವರದಿ ಸಲ್ಲಿಸಲು ಬರುವುದಿಲ್ಲ. ಗರ್ಭಗುಡಿಯವರೆಗೂ ಕೈ ಹಾಕಲು ಬಿಡುವುದಿಲ್ಲ ಎಂದು ಬೆAಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದ್ದಾರೆ.


