ಬೆಂಗಳೂರು : ರೆನೌಲ್ಯೂಷನ್ ಇಂಡಿಯಾ 2024 ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಗೆ ಕಾರ್ಯತಂತ್ರದ ಉಪಕ್ರಮದ ಅಡಿಯಲ್ಲಿ, ಈ ಫ್ರೆಂಚ್ ಕಾರು ತಯಾರಕ ಸಂಸ್ಥೆ ಮುಂದಿನ ಮೂರು ವರ್ಷಗಳಲ್ಲಿ ಐದು ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ.
ಭಾರತವನ್ನೂ ಒಳಗೊಂಡAತೆ, ಯುರೋಪೇತರ ಐದು ಪ್ರಮುಖ ಅಂತಾರಾಷ್ಟ್ರೀಯ ಕೇಂದ್ರಗಳಿಗೆ ರೆನೌ ಬ್ರಯಾಂಡ್ ಘೋಷಿಸಿದ್ದ 3 ಬಿಲಿಯನ್ ಹೂಡಿಕೆಗೆ ಹೆಚ್ಚುವರಿಯಾಗಿ ಈ ಉಪಕ್ರಮವಿದೆ. ಬಿಡುಗಡೆಯಾದ ಐದು ಉತ್ಪನ್ನಗಳಲ್ಲಿ: ಸಂಪೂರ್ಣ ಹೊಸ ಮಾದರಿಗಳು ಮತ್ತು ಕಿಗರ್ ಮತ್ತು ಟ್ರೈಬರ್‌ನ ಮುಂದಿನ ಪೀಳಿಗೆಗಳಿವೆ. ’ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಗೆ ತನ್ನ ಬದ್ಧತೆಯನ್ನು ಎತ್ತಿಹಿಡಿಯುವ ಮೂಲಕ, ರೆನೌ ಇಂಡಿಯಾ ತನ್ನ ಚೆನ್ನೈ ಉತ್ಪಾದನಾ ಘಟಕ, ಲಾಜಿಸ್ಟಿಕ್ಸ್ ಮತ್ತು ಟೆಕ್ನಾಲಜಿ ಸೆಂಟರ್ ಮತ್ತು ಡಿಸೈನ್ ಸ್ಟುಡಿಯೊ ಇತ್ಯಾದಿಗಳ ಮೂಲಕ ಸ್ಥಳೀಯವಾಗಿ ನೆಲೆಗೊಂಡಿದೆ. ರೆನೌ, ಸ್ಥಳೀಯ ಉತ್ಪಾದನೆ ಮತ್ತು ನಾವೀನ್ಯತೆಗೆ ಹೆಚ್ಚೆಚ್ಚು ಬದ್ಧವಾಗಿರುವುದನ್ನು ಮುಂದುವರೆಸಿದೆ.
ರೆನೌ ಇಂಡಿಯಾ ಆಪರೇಷನ್ಸ್ ಕಂಟ್ರಿ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ವೆಂಕಟರಾಮ್ ಮಾಮಿಲ್ಲಪಲ್ಲೆ: “ಮುಂದಿನ ಮೂರು ವರ್ಷಗಳಲ್ಲಿ, ನಾವು ಐದು ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದೇವೆ – ನಮ್ಮ ಪ್ರಸ್ತುತ ಉತ್ಪನ್ನಗಳ ಶ್ರೇಣಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ಮಾದರಿಗಳು ಮತ್ತು ಮುಂದಿನ ಪೀಳಿಗೆ ಉತ್ಪನ್ನಗಳು.ರೆನೌಗೆ ಕರ್ನಾಟಕ ಬಹಳ ಪ್ರಮುಖವಾದ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
ಭಾರತದಲ್ಲಿ ರೆನೌಲ್ಯೂಷನ್ ಆರಂಭವನ್ನು ಗುರುತಿಸಲು, ಈ ಫ್ರೆಂಚ್ ಕಾರು ತಯಾರಕರು ಹೊಸ ೨೦೨೪ ಶ್ರೇಣಿಯನ್ನು ಪರಿಚಯಿಸುವುದರೊಂದಿಗೆ ಅದರ ಹಾಲಿ ಉತ್ಪನ್ನ ಪೋಟ್ಫೋðಲಿಯೊಗೆ ಅತ್ಯುತ್ತಮ ಸೇರ್ಪಡೆಗಳನ್ನು ಮಾಡುತ್ತಿದೆ. ಹೊಸ ಶ್ರೇಣಿಯು ಮೂರು ಮಾದರಿಗಳಲ್ಲಿ 10+ ಹೊಸ ವರ್ಗ- ಪ್ರಮುಖ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.
ವೈವಿಧ್ಯಮಯ ಮತ್ತು ಬೆಳೆಯುತ್ತಿರುವ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಮತ್ತು ವಿಶಾಲವಾದ ವಿಭಾಗದ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು, 5 ಹೊಸ ರೂಪಾಂತರಗಳನ್ನು ಪರಿಚಯಿಸಲಾಗಿದೆ.


