ಬೆಂಗಳೂರು : ಈ ಸೈಬರ್ ಕಳ್ಳರು ಯಾರನ್ನು ಬಿಡುವುದಿಲ್ಲವಬುದಕ್ಕೆ ಈ ಸುದ್ದಿ ಸಾಕ್ಷಿ. ದಿನ ದಿನಕ್ಕೂ ಸೈಬರ್ ವಂಚನೆಗಳು ಹೆಚ್ಚುತ್ತಿದ್ದು, ಅಪರಾಧಗಳೂ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸೈಬರ್ ಅಪರಾಧಗಳಿಗೆ ಮೂಗುದಾರ ಹಾಕಲು ಸರ್ಕಾರ, ಪೊಲೀಸರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದ್ರೂ ಕೂಡ ಕಂಟ್ರೋಲ್ ಮಾಡೋಕೆ ಆಗ್ತೀಲ್ಲ, ಈ ಇದೀಗ ಮಾಜಿ ಸಿಎಂ ಸದನಾಂದ ಗೌಡ ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಸೈಬರ್ ಕಳ್ಳರು 3 ಲಕ್ಷ ರೂ. ದೊಚಿದ್ದಾರೆ.
ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು ನಿನ್ನೆ ನನ್ನ 3 ಅಕೌಂಟ್ ಹ್ಯಾಕ್ ಮಾಡಿದ್ದಾರೆ. ಅದರಲ್ಲಿದ್ದ ತಲಾ ಒಂದೊಂದು ಲಕ್ಷ ಹಣ ಎಗರಿಸಿದ್ದಾರೆ.ಸುಮಾರು 3 ಲಕ್ಷ ರೂ. ಹಣ ಹೋಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ 75 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ 75 ಪೌರ ಕಾರ್ಮಿಕರರಿಗೆ ಆರ್‌ಎಂವಿ ಎಕ್ಸ್ ಟೆನ್ಷನ್‌ನ ಬಿಬಿಎಂಪಿ ಪಾರ್ಕ್‌ನಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಡಿವಿಎಸ್ ಮಾಧ್ಯಮಗಳ ಜೊತೆ ಈ ಬಗ್ಗೆ ತಿಳಿಸಿದ್ದಾರೆ.
ಹೆಚ್‌ಡಿಎಫ್‌ಸಿ, ಎಸ್‌ಬಿಐ ಹಾಗೂ ಆಕ್ಸಿಸ್ ಬ್ಯಾಂಕಿನ ಖಾತೆಯಲ್ಲಿದ್ದ ಹಣ ಕಳ್ಳತನವಾಗಿದೆ. ಯುಪಿಐ ಮೂಲಕ ಹ್ಯಾಕ್ ಮಾಡಿ ಹಣ ಕಳ್ಳತನ ಮಾಡಿದ್ದು ಸೈಬರ್ ಕ್ರೈಮ್ ಗೆ ದೂರು ನೀಡುತ್ತೇನೆ ಎಂದು ಹೇಳಿದರು.ಸರಕಾರ ಈ ಸೈಬರ್ ಕಳ್ಳರನ್ನು ಮಟ್ಟ ಹಾಕದಿದ್ದರೆ ಮುಂದೊಂದು ದಿನ ದೊಡ್ಡ ಮೊತ್ತದ ಲೂಟಿ ಪ್ರಕರಣ ನಡೆಯುತ್ತಲೇ ಇರುತ್ತದೆಂದು ಹಣ ಕಳೆದುಕೊಂಡ ಕೆಲವರು ತಿಳಿಸಿದ್ದಾರೆ.