Friday, March 13, 2026
Flats for sale
Homeಕ್ರೈಂಬೆಂಗಳೂರು : ಮದ್ಯಪಾನ ಮಾಡಬೇಡ ಎಂದು ಬುದ್ಧಿ ಮಾತು ಹೇಳಿದ ವ್ಯಕ್ತಿ ಕೊಲೆ : ಇಬ್ಬರ...

ಬೆಂಗಳೂರು : ಮದ್ಯಪಾನ ಮಾಡಬೇಡ ಎಂದು ಬುದ್ಧಿ ಮಾತು ಹೇಳಿದ ವ್ಯಕ್ತಿ ಕೊಲೆ : ಇಬ್ಬರ ಬಂಧನ.

ಬೆಂಗಳೂರು : ಮದ್ಯಪಾನ ಮಾಡಬೇಡ ಎಂದು ಬುದ್ಧಿ ಮಾತು ಹೇಳಿದ್ದಕ್ಕೆ ವ್ಯಕ್ತಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.

ವೆಂಕಟೇಶ್ (45) ಕೊಲೆಯಾದವರು,ಕೃತ್ಯ ನಡೆಸಿದ ಪವನ್ ಕುಮಾರ್ ,ನಂದಕುಮಾರ್ ಸೇರಿ ಇಬ್ಬರನ್ನು ಬಂಧನ ಮಾಡಿದ್ದಾರೆ. ಪವನ್ ಕುಮಾರ್ ನಂದಕುಮಾರ್ ಹಾಗೂ ಇನ್ನೊಬ್ಬ ಯುವಕ ಸೇರಿ ಮದ್ಯಪಾನ ಮಾಡುತ್ತಿದ್ದರು. ಇದೇ ವೇಳೆ ಮನೆಗೆ ತೆರಳುತ್ತಿದ್ದ ವೆಂಕಟೇಶ್ ಇವರು, ಕುಡಿಯುತ್ತಿರುವುದನ್ನು ನೋಡಿ ಇನ್ನು ಚಿಕ್ಕ ವಯಸ್ಸಿದೆ. ಮದ್ಯಪಾನ ಮಾಡಬೇಡಿ ಎಂದು ಬುದ್ಧಿ ಮಾತು ಹೇಳಿದ್ದಾರೆ.

ಬುದ್ಧಿ ಮಾತಿನಿಂದ ರೊಚ್ಚಿಗೆದ್ದ ಪವನ್ ಕುಮಾರ್ ಚಾಕು ತೆಗೆದುಕೊಂಡು ವೆಂಕಟೇಶ್ ಗೆ ಇರಿದಿದ್ದಾನೆ. ಇರಿತದಿಂದ ಗಾಯಗೊಂಡಿದ್ದ ವೆಂಕಟೇಶ್?ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದರೆಂದು ವರದಿಯಾಗಿದೆ.ಮಕ್ಕಳಿಗೆ ಒಳ್ಳೆ ಮಾತನ್ನು ಹೇಳಿದರೆ ಈ ರೀತಿ ಹತ್ಯೆಮಾಡುತ್ತಾರೆಂಬುದು ವಿಪರ್ಯಾಸ.

RELATED ARTICLES

LEAVE A REPLY

Please enter your comment!
Please enter your name here

Most Popular