Saturday, November 23, 2024
Flats for sale
Homeಕ್ರೈಂಬೆಂಗಳೂರು : ಮದುವೆಗೆ ನಿರಾಕರಿಸಿದ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಕೊಲೆ.

ಬೆಂಗಳೂರು : ಮದುವೆಗೆ ನಿರಾಕರಿಸಿದ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಕೊಲೆ.

ಬೆಂಗಳೂರು : ಮದುವೆಗೆ ನಿರಾಕರಿಸಿದ ಪ್ರಿಯತಮೆಯನ್ನು ಆರೋಪಿ ಕತ್ತು ಕೂಯ್ದು 15 ಕ್ಕೂ ಹೆಚ್ಚು ಕಡೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಮಾಹಿತಿ ಜಯನಗರ ಪೊಲೀಸರತನಿಖೆಯಿಂದ ತಿಳಿದುಬಂದಿದೆ.

ಆರೋಪಿ ಗಿರೀಶ್ ಅಲಿಯಾಸ್ ರಿಯಾನ್ ಖಾನ್(35)ನನ್ನು ಬಂದಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಾ.30 ರಂದು ಸಂಜೆ 7 ಗಂಟೆ ಸುಮಾರಿಗೆ ಜಯನಗರದ ಶಾಲಿನಿ ಪಾರ್ಕ್ ಪ್ರಿಯತಮೆ ಫರೀದಾಳನ್ನು ಕರೆದುಕೊಂಡು ಹೋದ ಆರೋಪಿ ಕೆಲಸ ಬಿಟ್ಟು ನನ್ನನ್ನು ಮದುವೆಯಾಗು, ಇಬ್ಬರು ಸೇರಿ ಪ್ರತ್ಯೇಕ ಜೀವನ ನಡೆಸೋಣ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾನೆ. ಇದಕ್ಕೆ ಫರೀದಾ (42) ಒಪ್ದದ ಇದ್ದಾಗ ಕೋಪಗೊಂಡ ಆರೋಪಿ, ಚಾಕುವಿನಿಂದ ಆಕೆಯ ಕುತ್ತಿಗೆ ಕೂಯ್ದು, ಮನಬಂದಂತೆ ದೇಹದ 15 ಕ್ಕೂ ಹೆಚ್ಚು ಕಡೆ ಇರಿದು ಕೊಲೆ ಮಾಡಿ ಕೊನೆಗೆ ಠಾಣೆಗೆ ಬಂದು ಶರಣಾಗಿದ್ದಾನೆ. ಭೀಕರವಾಗಿ ಕೊಲೆಯಾಗಿರುವ ಫರೀದಾ ಶವ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular