Monday, October 20, 2025
Flats for sale
Homeರಾಜಕೀಯಬೆಂಗಳೂರು : ಮತ ಕಳ್ಳತನದಿಂದ ಮೋದಿ ಪ್ರಧಾನಿ : ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ...

ಬೆಂಗಳೂರು : ಮತ ಕಳ್ಳತನದಿಂದ ಮೋದಿ ಪ್ರಧಾನಿ : ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ..!

ಬೆಂಗಳೂರು : ಮೋದಿ ಮತ ಕಳ್ಳತನ ಮಾಡಿ ಪ್ರಧಾನಿ ಆಗಿದ್ದಾರೆ. ಚುನಾವಣಾ ಆಯೋಗ, ಸಂವಿಧಾನದ ಮೇಲೆ ನೀವು ದಾಳಿ ಮಾಡಿದರೆ, ನಾವು ನಿಮ್ಮ ಮೇಲೆ ದಾಳಿ ಮಾಡುತ್ತೇವೆ. ಇದು ನನ್ನೊಬ್ಬನ ಧ್ವನಿಯಲ್ಲ ಪ್ರತಿಪಕ್ಷಗಳ ಒಗ್ಗಟ್ಟಿನ ಧ್ವನಿ ಮಾತ್ರವಲ್ಲ ಇಡೀ ದೇಶದ ಮತದಾರರ ಧ್ವನಿ ಇನ್ನು ನಿಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಪುಸ್ತಕದಲ್ಲಿ ಭಾರತದ ಸಾವಿರಾರು ವರ್ಷದ ಇತಿಹಾಸ ಅಡಗಿದೆ. ಬಸವಣ್ಣ, ನಾರಾಯಣ ಗುರು, ಪುಲೆಯವರ ಧ್ವನಿ ಅಡಗಿದೆ. ಇದರ ಅಡಿಪಾಯವೇ ಒಬ್ಬ ವ್ಯಕ್ತಿ ಒಂದು ಮತ. ಕಳೆದ ಚುನಾವಣೆಯಲ್ಲಿ ಮೋದಿ ಅವರು ಸಾಂವಿಧಾನಿಕ ಸಂಸ್ಥೆಯನ್ನು ಮುಗಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ನಮ್ಮ ಸಮೀಕ್ಷೆಯಂತೆ ಕರ್ನಾಟಕದಲ್ಲಿ 15-16 ಸೀಟು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ೯ ಸ್ಥಾನ ಗೆದ್ದೆವು. ಕೇಳಿದರೂ ಚುನಾವಣಾ ಆಯೋಗ ಸಾಫ್ಟ್ ಕಾಪಿ ಕೊಡಲು ನಿರಾಕರಿಸಿತು. ಮತಗಟ್ಟೆಗಳ ವಿಡಿಯೋ ಕೇಳಿದ್ದೆವು. ಅದನ್ನೂ ಕೊಡಲಿಲ್ಲ. ಬದಲಿಗೆ ಕಾನೂನು ಬದಲಾವಣೆ ಮಾಡಿದರು. ಒಂದು ಲೋಕಸಭೆ ಕ್ಷೇತ್ರ ಹಾಗೂ ಮಹದೇವಪುರದ ವಿಧಾನಸಭೆ ಕ್ಷೇತ್ರದಲ್ಲಿ ಫಲಿತಾಂಶ ವಿಶ್ಲೇಷಣೆ ಮಾಡಿದೆವು. ಅದರಲ್ಲಿ 100% ಬಿಜೆಪಿ, ಚುನಾವಣಾ ಆಯೋಗ ನಿಮ್ಮಿಂದ ಮತವನ್ನು ಕದ್ದಿದೆ. ಅದರಲ್ಲಿ 1,೦೦,250 ಮತಗಳನ್ನು ಕಳ್ಳತನ ಮಾಡಿದ್ದಾರೆ. ಅದರರ್ಥ ಆರು ಮತಗಳಲ್ಲಿ ಒಂದು ಮತ ಕದಿಯಲಾಗಿದೆ. 5 ರೀತಿಯಲ್ಲಿ ಮತ ಕದಿದ್ದಾರೆ ಎಂದು ಹೇಳಿದ್ದಾರೆ.

ಮನೆಯ ಮಾಲೀಕ ಬಿಜೆಪಿ ಮುಖಂಡ. ಆ ಮನೆಯಲ್ಲಿ50-80 ಮತದಾರರು ಇದ್ದರು. 32,೦೦೦ ಪ್ರಕರಣಗಳಲ್ಲಿ ಫಾರ್ಮ್ ನಂ.6 ಮೂಲಕ ಸಲ್ಲಿಕೆಯಾದ ಹೊಸ ಮತದಾರರ ಪಟ್ಟಿಯಲ್ಲಿ ಅಕ್ರಮ ಆಗಿದೆ. ನಕಲಿ ಮತದಾರ ಒಂದು ಸಾರಿ ಕರ್ನಾಟಕದಲ್ಲಿ ಮತ ಹಾಕುತ್ತಾನೆ. ಆತನೇ ಉತ್ತರ ಪ್ರದೇಶದಲ್ಲೂ ಮತ ಹಾಕುತ್ತಾನೆ. ಚುನಾವಣಾ ಆಯೋಗ ಮತ್ತು ಬಿಜೆಪಿ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಒಪ್ಪಂದ ಮಾಡಿಕೊಂಡಿವೆ. ಆಯೋಗ ನನಗೆ ಅಫಿಡವಿಟ್ ಸಲ್ಲಿಸಲು ಮತ್ತು ಪ್ರಮಾಣ ವಚನದ ಮೂಲಕ ದಾಖಲೆಗಳನ್ನು ಸಲ್ಲಿಸುವಂತೆ ಕೇಳಿದೆ. ನಾನು ಸಂವಿಧಾನವನ್ನು ಹಿಡಿದುಕೊಂಡು ಸಂಸತ್ತಿನೊಳಗೆ ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದೇನೆ ಎಂದು ರಾಹುಲ್ ತಿರುಗೇಟು ನೀಡಿದರು.

ನಾವು ಬಿಡುಗಡೆ ಮಾಡಿದ ದತ್ತಾಂಶದ ಆಧಾರದ ಮೇಲೆ ಜನರು ಚುನಾವಣಾ ಆಯೋಗವನ್ನು ಪ್ರಶ್ನಿಸುತ್ತಿದ್ದರೆ, ನಮ್ಮ ವ್ಯೂಹರಚನೆ ಕುಸಿಯುತ್ತದೆ ಎಂಬ ಆತಂಕದಿAದ ಆಯೋಗವು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ತನ್ನ ವೆಬ್‌ಸೈಟ್‌ಗಳನ್ನು ಬಂದ್ ಮಾಡಿದೆ. ನಾವು ಕೇಳಿದ ದಾಖಲೆಗಳನ್ನು ಆಯೋಗ ನೀಡಿದರೆ ಕೇವಲ ಒಂದು ಸ್ಥಾನ ಮಾತ್ರ ಅಲ್ಲ ಇಡೀ ದೇಶದಲ್ಲಿ ಎಷ್ಟೆಷ್ಟು ಮತ ಕಳ್ಳತನ ಆಗಿದೆ ಎಂಬುದನ್ನು ತೋರಿಸುತ್ತೇವೆ. ಆಯೋಗ ಸಂವಿಧಾನದ ಪರವಾಗಿ ನಿಲ್ಲಬೇಕು ಎಂದರು.

ಕರ್ನಾಟಕ ಸರ್ಕಾರ ತನಿಖೆ ಮಾಡಿಸಲಿ: ದೇಶದ ಬಡ ಜನರ ಮೇಲೆ ದಾಳಿ ಮಾಡಿ ಬಚಾವ್ ಆಗುತ್ತೀರಿ ಅಂದುಕೊAಡಿದ್ದರೆ ಅದು ಸಾಧ್ಯವಿಲ್ಲ. ನಿಮಗೆ ಪಾಠ ಕಲಿಸುತ್ತೇವೆ. ಮೋದಿ ಕೇವಲ 25 ಸ್ಥಾನಗಳಿಂದ ಪ್ರಧಾನಿ ಆಗಿದ್ದಾರೆ. ಅಷ್ಟನ್ನೂ ಕೇವಲ 3೦,೦೦೦ ಮತಗಳ ಅಂತರದಿAದ ಗೆದ್ದಿದ್ದಾರೆ. ಕರ್ನಾಟಕದಲ್ಲಿ ಈ ರೀತಿ ಅಪರಾಧ ಚಟುವಟಿಕೆ ನಡೆದಿದೆ. ಮತದಾರರಿಗೆ ಆಯೋಗ ಮತ್ತು ಬಿಜೆಪಿ ವಂಚಿಸಿವೆ. ರಾಜ್ಯ ಸರ್ಕಾರ ಇದರ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಚುನಾವಣಾ ಆಯೋಗ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular