Friday, March 13, 2026
Flats for sale
Homeರಾಜ್ಯಬೆಂಗಳೂರು : ಮಗಳ ದುರಂತ ಅಂತ್ಯದ ಬಳಿಕ ನೂರಾರು ಬಡ ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾದ ASI...

ಬೆಂಗಳೂರು : ಮಗಳ ದುರಂತ ಅಂತ್ಯದ ಬಳಿಕ ನೂರಾರು ಬಡ ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾದ ASI .

ಬೆಂಗಳೂರು : 2019 ರಲ್ಲಿ ತನ್ನ ಮಗಳನ್ನ ಕಳೆದುಕೊಂಡಿದ್ದ ಶಿವಾಜಿನಗರ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಲೊಕೇಶಪ್ಪರವರು ಅವಳ ಸಾವಿನ ಗೌರವಾರ್ಥವಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸುಮಾರು 600 ವಿದ್ಯಾರ್ಥಿಗಳಿಗೆ ಶಾಲಾ ಸಾಮಾಗ್ರಿಗಳನ್ನು ಧನ ಸಹಾಯ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ಜನಸಾಮಾನ್ಯರಿಗೆ ಏನೋ ಒಂದು ಭಾವನೆ. ಆದರೆ ಇವರು ಒಂದು ದಾನ ಶೂರ ಕರ್ಣನಂತೆ ಒಬ್ಬಳೇ ಒಬ್ಬ ಮಗಳಾದ ಹರ್ಷಾಲಿಯನ್ನು ಬೆಂಕಿ ಅವಘಡದಲ್ಲಿ ಕಳೆದುಕೊಂಡಿದ್ದರು. ಲೊಕೇಶಪ್ಪ ಪತ್ನಿ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂಧಿಯಾಗಿದ್ದು ತನ್ನ ಮಗಳ ಹೆಸರಿನಲ್ಲಿ ಎನ್ ಜಿ ಒ ಸ್ಥಾಪಿಸಿದ್ದರು ತನ್ನ ಎರಡು ತಿಂಗಳ ಸಂಬಳವನನ್ನ ಮಕ್ಕಳ ವಿಧ್ಯಾಭ್ಯಾಸದ ಅಗತ್ಯಕ್ಕೆ ಮುಡಿಪಾಗಿಟ್ಟಿದ್ದು ಬಡ ವಿದ್ಯಾರ್ಥಿಗಳಿಗೆ ದಾರಿ ದೀಪ‌ವಾಗಿದ್ದಾರೆ.

ಬೆಂಗಳೂರಿನ 200 ಮಕ್ಕಳು ಸೇರಿದಂತೆ ಮೈಸೂರು , 1 ಹಾಸನ 4 , ಶಾಲೆಗಳ ಸುಮಾರು 600‌ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡುತ್ತಿದ್ದು ತನ್ನ ಮಗಳ ಶಿಕ್ಷಣಕ್ಕೆ ವ್ಯಹಿಸಲು ಇಟ್ಟಿದ್ದ ಹಣವನ್ನು ಬಡ ಮಕ್ಕಳ ಶಾಲಾ ಸಾಮಾಗ್ರಿಗಳಿಗೆ ನೀಡಲುನಿರ್ಧರಿಸಿದ್ದಾರೆ. ಸದ್ಯ ಲೊಕೇಶಪ್ಪರವರ ಎಸೈಐ ಅವರ ಕೆಲಸಕ್ಕೆ ಹಲವೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದು ಸದ್ಯ ಬಡವರ ಮಕ್ಕಳ ದಾರಿದೀಪವಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular