ಬೆಂಗಳೂರು : ಜನ ನಿದ್ದೆಯ ಮಂಪರಿನಲ್ಲಿರುವಾಗ ಮೊಬೈಲ್ ಇದ್ದಕಿದ್ದಂತೆ ಕಳ್ಳತನವಾಗುವ ಪ್ರಕರಣಗಳು ಲಿಂಗರಾಜ ಪುರಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ರಾಜ್ಯದ ರಾಜಧಾನಿಯಲ್ಲಿ ಮಕ್ಕಳನ್ನು ಮುಂದೆ ಬಿಟ್ಟು ಕಳ್ಳತನ ಮಾಡಲಾಗುತ್ತಿರುವ ಗುಂಪೊಂದು ಪತ್ತೆಯಾಗಿದೆ.ಮೀಸೆ ಚಿಗುರದ ಹುಡುಗರ ಕೈಯಲ್ಲಿ ಮಾದಕ ವಸ್ತು ಹಾಗೂ ಹಣದ ಆಮಿಷ ತೋರಿಸಿ ಮೊಬೈಲ್ ಕಳ್ಳತನ ಮಾಡುವ ದಂದೆಯ ಬಗ್ಗೆ ಲಿಂಗರಾಜಪುರ ನಿವಾಸಿಗಳು ಆರೋಪ ಮಾಡಿದ್ದಾರೆ.
ಐದು, ಆರು, ಏಳನೇ ತರಗತಿ ಮಕ್ಕಳು ಕಳ್ಳತನ ಮಾಡುತ್ತಿದ್ದು,ಈ ಗುಂಪು ಮಕ್ಕಳಿಂದ ಒಂದು ಮೊಬೈಲ್ ಪಡೆದು ಅವರಿಗೆ ಐನೂರು ಸಾವಿರ ರೂಪಾಯಿ ನೀಡಿ ಕಳ್ಳತನಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಿದ್ರು ಪ್ರಯೋಜನ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ರಸ್ತೆ ಬದಿಯಲ್ಲಿರುವ ಮನೆಗಳಿಗೆ ಕನ್ನ ಹಾಕುವ ಈ ಗ್ಯಾಂಗ್ ಮನೆಯಲ್ಲಿ ಮಧ್ಯಾಹ್ನ ಮಲಗಿರುವ ವ್ಯಕ್ತಿಗಳ ಮೊಬೈಲ್ ಫೋನ್ ಅನ್ನು ಎಗರಿಸಿ ಸಿಮ್ ಕಾರ್ಡ್ ಕಚ್ಚಿ ಬಿಸಾಡಿ ಪರಾರಿಯಾಗುತ್ತಾರೆ ಮಾದಕ ವ್ಯಸನಿಗಳ ಮಕ್ಕಳ ಹಿಂದೆ ಕಾಣದ ಕೈಗಳ ಕೈವಾಡ ವಿದೆಯೆಂದು ಸ್ಥಳೀಯರು ತನಿಖೆ ನಡೆಸಲು ಪೊಲೀಸರಿಗೆ ಒತ್ತಾಯಿಸಿದ್ದಾರೆ.