ಬೆಂಗಳೂರು ; ಐದು ಸ್ಥಳಗಳಲ್ಲಿ ಮೃತದೇಹದ ತುಂಡುಗಳು ಪತ್ತೆಯಾಗಿದ್ದು, ಮಂಡ್ಯ ಪೊಲೀಸರಿಗೆ ಸವಾಲಾಗಿದೆ.
ತುಂಡರಿಸಿದ ಮೃತದೇಹ ಸುಮಾರು 30 ರಿಂದ 40 ವರ್ಷದ ವ್ಯಕ್ತಿಯದ್ದು ಎನ್ನಲಾಗಿದೆ. ಶವವನ್ನು ಹರಿತವಾದ ಆಯುಧದಿಂದ ಕತ್ತರಿಸಿ ವಿವಿಧೆಡೆ ವಿಲೇವಾರಿ ಮಾಡಲಾಗಿದೆ.
ಮಂಡ್ಯ ತಾಲೂಕಿನ ಹೂಡಘಟ್ಟದ ಹೊರವಲಯದ ಕಾಲುವೆಯೊಂದರ ಬಳಿ ಸೊಂಟದಿಂದ ಮೊಣಕಾಲಿನವರೆಗೆ ದೇಹದ ಒಂದು ಭಾಗ ಪತ್ತೆಯಾಗಿದೆ. ಡಣಾಯಕನಪುರ ಗ್ರಾಮದ ಮೂರು ಸ್ಥಳಗಳಲ್ಲಿ ಮೃತದೇಹದ ತುಂಡರಿಸಿದ ಭಾಗಗಳು ಪತ್ತೆಯಾದಾಗ ಪೊಲೀಸರು ಕಾಲುವೆ ಬಳಿ ಹುಡುಕಾಟ ನಡೆಸಿದರು.
ಒಂದು ಕಡೆ ಕೈಯ ಒಂದು ಭಾಗ, ಇನ್ನೊಂದು ಕಡೆ ಮತ್ತೊಂದು ಕೈ ಕಾಲು ಪತ್ತೆಯಾಗಿದೆ. ಶಿವರ-ಬೆಸಗರಹಳ್ಳಿ ಮುಖ್ಯರಸ್ತೆಯ ರಾಜಕಾಲುವೆ ಬಳಿ ಇನ್ನೂ ಒಂದು ಕಾಲು ಪತ್ತೆಯಾಗಿದೆ. ಕೊಪ್ಪದ ಬಳಿ ತಲೆ ಪತ್ತೆಯಾಗಿದೆ. ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರ ಎಡಗೈಯಲ್ಲಿ ‘ಕಾವ್ಯ ರಘು’ ಮತ್ತು ಬಲಗೈಯಲ್ಲಿ ‘ಮಂಜ-ಮಂಜಾಕ್ಷಿ’ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ.