ಬೆಂಗಳೂರು : ನೆಟ್ಟೂರ್ ಟೆಕ್ನಿಕಲ್ ಟ್ರೇನಿಂಗ್ ಫೌಂಡೇಶನ್ (ಎನ್‌ಟಿಟಿಎಫ್) ಸಂಸ್ಥೆಯು ಮ್ಯಾಜಿಕ್ ಬಿಲಿಯನ್ ಮತ್ತು ಐಎಚ್‌ಕೆ, ಜರ್ಮನಿ ಜತೆ ಹೊಸ ಒಪ್ಪಂದ ಮಾಡಿಕೊಂಡಿದೆ. ಯುವ ಉತ್ಸಾಹಿ ಭಾರತೀಯರಿಗೆ ಪರಿವರ್ತಕ ವೃತ್ತಿ ಅವಕಾಶವನ್ನು ನೀಡಲು ಈ ಕಾರ್ಯತಂತ್ರದ ಪಾಲುದಾರಿಕೆಯನ್ನು ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ದೀರ್ಘಾವಧಿಯ (ಶಿಷ್ಯವೃತ್ತಿ) ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮ ಪ್ರಾರಂಭಿಸಲು ಅವಕಾಶದ ಬಾಗಿಲು ತೆರೆದಿದೆ. ಸುಧಾರಿತ ತಂತ್ರಜ್ಞಾನ ಮತ್ತು ಉತ್ಪಾದನೆಯಲ್ಲಿ ಜಾಗತಿಕ ನಾಯಕನನ್ನಾಗಿ ರೂಪಿಸುವ ಕಾರ್ಯವನ್ನು ಇದು ಮಾಡಲಿದೆ.
ಕೇವಲ ಅಪ್ರೆಂಟಿಸ್‌ಶಿಪ್‌ಗಿಂತ ಹೆಚ್ಚಾಗಿ, ಇದು ವಿಶ್ವ ದರ್ಜೆಯ ಶಿಕ್ಷಣ ಮತ್ತು ಅತ್ಯಾಧುನಿಕ ಜರ್ಮನ್ ಕೈಗಾರಿಕೆಗಳಲ್ಲಿ ವೃತ್ತಿಜೀವನದ ಪ್ರವೇಶಾವಕಾಶ ಕಲ್ಪಿಸುವ ವೇದಿಕೆ ಆಗಿದೆ. ಭಾಗವಹಿಸುವವರು ಉನ್ನತ
ಜರ್ಮನ್ ಕಂಪನಿಗಳಲ್ಲಿ ಮುಂದಿನ ದಿನಗಳಲ್ಲಿ ತರಬೇತಿಯಲ್ಲಿ ತೊಡಗುತ್ತಾರೆ.
ಆಟೋಮೋಟಿವ್ ಮೆಕಾಟ್ರಾನಿಕ್ಸ್, ಪ್ಲಾಂಟ್ ಮೆಕ್ಯಾನಿಕ್ಸ್, ಎಲೆಕ್ಟ್ರಾನಿಕ್ಸ್, ಕಾರ್ ಟೆಕ್ನಾಲಜಿ ಮತ್ತು ಕಟಿಂಗ್ ಮೆಷಿನ್ ಟೆಕ್ನಾಲಜಿಯಂತಹ ಹೆಚ್ಚಿನ ಬೇಡಿಕೆಯ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುತ್ತಾರೆ.
ಬೆಂಗಳೂರಿನ ಡೆಪ್ಯೂಟಿ ಜರ್ಮನ್ ಕಾನ್ಸುಲರ್ ಎಂಎಸ್ ಆನೆಟ್ ಬೇಸ್ಲರ್ ಅವರು ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿದರು. ಎನ್‌ಟಿಟಿಎಫ್ ಆರ್ ರಾಜಗೋಪಾಲನ್, ಶ್ರೀ ಬಿ ವಿ ಸುದರ್ಶನ್ ಮತ್ತು ನೋಯ್ಡಾದ ಮ್ಯಾಜಿಕ್ ಬಿಲಿಯನ್ ಸಂಸ್ಥಾಪಕ ಬಾಬ್ ಬ್ಯಾನರ್ಜಿ ಉಪಸ್ಥಿತರಿದ್ದರು. ಎನ್‌ಟಿಟಿಎಫ್ ಮತ್ತು ಮ್ಯಾಜಿಕ್ ಬಿಲಿಯನ್ ಸಂಸ್ಥೆಗಳು ಹೊಸ ಹಾದಿಯಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಲು ಸಜ್ಜಾಗಿವೆ ನಾವು ಹತ್ತು ತಿಂಗಳ ಕಾಲ ಕ್ಯಾಂಪಸ್‌ನಲ್ಲಿಯೇ ಸಮಗ್ರ ತರಬೇತಿಯನ್ನು (ಎ1, ಎ2 ಮತ್ತು ಬಿ1 ಹಂತಗಳನ್ನು ಒಳಗೊಂಡಂತೆ ) ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಈಗಾಗಲೇ, 100 ಎನ್‌ಟಿಟಿಎಫ್ವಿ ದ್ಯಾರ್ಥಿಗಳನ್ನು ಉನ್ನತ ಹಾಗೂ ಅಸಾಧಾರಣ ಅವಕಾಶಕ್ಕಾಗಿ ಶಾರ್ಟ್ಲಿಸ್ಟ್ ಮಾಡಲಾಗಿದೆ. ಅವರಲ್ಲಿ 7-ಜನರು ಈಗಾಗಲೇ ಪ್ರತಿಷ್ಠಿತ ಜರ್ಮನ್ ಕಂಪನಿಗಳಿAದ ಆಹ್ವಾನವನ್ನು ಸ್ವೀಕರಿಸಿದ್ದಾರೆ