ಬೆಂಗಳೂರು : ಭಾರತ ದೇಶದಲ್ಲಿ ತೆರೆಮರೆಯಲ್ಲಿ ಜೀಹಾದಿಗಳ ಕೆಲಸಕಾರ್ಯ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ ಆದರೆ ಭಾರತದ ವಿರುದ್ಧ ಜಿಹಾದಿ ಯುದ್ಧಕ್ಕೆ ಇಲ್ಲಿನ ಮುಸ್ಲಿಂ ಯುವ ಸಮುದಾಯವನ್ನು ಸಜ್ಜುಗೊಳಿಸುತ್ತಿದ್ದ ಪಾಕಿಸ್ತಾನ ಮೂಲದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಶಂಕಿತ ಉಗ್ರನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಹಲವು ದಿನಗಳಿಂದ ಪಾಕಿಸ್ತಾನ ಮೂಲದ ‘ಹಿಜಬ್-ಉತ್-ಥರಿರ್’ ಹೆಸರಿನ ಸಂಘಟನೆಯಲ್ಲಿ ಅಜೀಜ್ ಸಕ್ರಿಯವಾಗಿದ್ದ. ಈ ಸಂಘಟನೆ ಮೂಲಕ ಮೂಲಕ ಮುಸ್ಲಿಂ ಸಮುದಾಯದ ಯುವ ಸಮೂಹಕ್ಕೆ ಮೂಲಭೂತವಾದ ಬೋಧಿಸಿ ಭಾರತದ ವಿರುದ್ಧ ಜಿಹಾದಿ ಯುದ್ಧಕ್ಕೆ ಆತ ಸಜ್ಜುಗೊಳಿಸುತ್ತಿದ್ದ. ಈ ಸಂಘಟನೆಯು ಪಾಕಿಸ್ತಾನ ಇಸ್ಲಾಂ ಧಾರ್ಮಿಕ ಗುರು ತಾಖಿ ಅಲ್ ದಿನಾಲ್ ನಭಾನಿ ಸಂದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದೆ ಎಂದು ಎನ್ಐಎ ಹೇಳಿದೆ.
ತಮಿಳುನಾಡು ಮೂಲದ ಅಜೀಜ್ ಅಹ್ಮದ್ ಅಲಿಯಾಸ್ ಜಲೀಲ್ ಅಜೀಜ್ ಬಂಧಿತನಾಗಿದ್ದು, ಸೌದಿ ಅರೇಬಿಯಾಕ್ಕೆ ಪರಾರಿಯಾಗಲು ಮುಂದಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅಜೀಜ್ನನ್ನು ಕೆಐಎ ವಲಸೆ ವಿಭಾಗದ ಸಹಕಾರದಲ್ಲಿ ಎನ್ಐಎ ಶುಕ್ರವಾರ ರಾತ್ರಿ ಸೆರೆಹಿಡಿದು ಕರೆದೊಯ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.