ಬೆಂಗಳೂರು : ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು.ಸಭೆಯಲ್ಲಿ ಬೊಮ್ಮಾಯಿ ಯುಕೆ ಹೂಡಿಕೆದಾರರನ್ನು ಕರ್ನಾಟಕದಲ್ಲಿ ಆರ್ & ಡಿ ಮತ್ತು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆಹ್ವಾನಿಸಿದರು.
” ವರದಿಯ ಪ್ರಕಾರ, ಭಾರತವು 618 ಬ್ರಿಟಿಷ್-ಮಾಲೀಕತ್ವದ ಕಂಪನಿಗಳನ್ನು ಹೊಂದಿದೆ, ಅದರಲ್ಲಿ 14% ಕರ್ನಾಟಕ ದಲ್ಲಿದೆ.
ಕರ್ನಾಟಕ ಮತ್ತು ಕೇರಳಕ್ಕೆ ಹೊಸದಾಗಿ ನೇಮಕಗೊಂಡ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಕೂಡ ಉಪಸ್ಥಿತರಿದ್ದರು.