Saturday, April 19, 2025
Flats for sale
Homeಕ್ರೈಂಬೆಂಗಳೂರು : ಪತಿಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ,ಮನನೊಂದು ಪತ್ನಿ ಆತ್ಮಹತ್ಯೆ..!

ಬೆಂಗಳೂರು : ಪತಿಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ,ಮನನೊಂದು ಪತ್ನಿ ಆತ್ಮಹತ್ಯೆ..!

ಬೆಂಗಳೂರು : ಬೆಂಗಳೂರಿನ ಹೆಬ್ಬಾಳದ ಕನಕನಗರದಲ್ಲಿ ಪತಿ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ನಡೆದಿದೆ.

ಮೃತಳನ್ನು ಬಾಹರ್ ಅಸ್ಮಾ (29 ) ಎಂದು ತಿಳಿದಿದೆ.ಕಳೆದ ಎರಡು ವರ್ಷಗಳ ಹಿಂದೆ ಬಾಹರ್ ಅಸ್ಮಾ, ಬಶೀರ್ ವುಲ್ಲಾ ಎಂಬಾತನನ್ನು ಮದುವೆ ಆಗಿದ್ದರು.ಆದರೆ ಪತಿ ಬಶೀರ್ ವುಲ್ಲಾ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದಕ್ಕೆ ಬೇಸರಗೊಂಡ ಪತ್ನಿ ಬಾಹರ್ ಅಸ್ಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿದ್ದಾರೆ.

ಮೃತ ಬಾಹರ್ ಅಸ್ಮಾ ಅವರ ಕುಟುಂಬಸ್ಥರಿಂದ ನನ್ನ ಮಗಳ ಕೊಲೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಮಗಳನ್ನು ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಎಂದು ಪತಿ ಬಶೀರ್ ವುಲ್ಲಾ ವಿರುದ್ಧ ಅಸ್ಮಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ.ಸದ್ಯ ಪೊಲೀಸರು, ಪತಿ ಬಶೀರ್ ವುಲ್ಲಾನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular