ಬೆಂಗಳೂರು : ಭಾರತದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನ BEML ಉತ್ಪಾದನಾ ಘಟಕದಲ್ಲಿ ವಂದೇಭಾರತ್ ನ ಸ್ಲೀಪರ್ ಕೋಚ್ಗಳನ್ನು ಪರಿಶೀಲಿಸಿದರು.
“ಇಂದಿನಿಂದ ಮೂರು ತಿಂಗಳಲ್ಲಿ ವಂದೇ ಸ್ಲೀಪರ್ ಕೋಚ್ನ ಪ್ರಯಾಣಿಕರ ಕಾರ್ಯಾಚರಣೆಯನ್ನು ನಾವು ನಿರೀಕ್ಷಿಸುತ್ತೇವೆ”.ಎಂದು ಅವರು ತಪಾಸಣೆಯ ಸಮಯದಲ್ಲಿ ಹೇಳಿದರು.ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಸಾಥ್ ನೀಡಿದರು. ಬಳಿಕ ಮಾತನಾಡಿದ ಅಶ್ವಿನಿ ವೈಷ್ಣವ್ “ಇಂದಿನಿಂದ ಮೂರು ತಿಂಗಳ ಒಳಗಾಗಿ ವಂದೇ ಭಾರತ್ ಸ್ಲೀಪರ್ ಕೋಚ್ಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಭರವಸೆ ನೀಡಿದರು.
ಕಳೆದ ೧೫ ವರ್ಷಗಳಿಂದ ರೈಲ್ವೆಯ ಅಭಿವೃದ್ದಿಗಾಗಿ ಮೋದಿ ಸರಕಾರ ಶ್ರಮಿಸುತ್ತಿದೆ ಎಂದು ಹೇಳಿದರು.