Sunday, January 25, 2026
Flats for sale
HomeUncategorizedಬೆಂಗಳೂರು : ಬಿ.ನಾಗೇಂದ್ರ ಎಂದು ದಾಖಲೆಗಳಲ್ಲಿ ನಮೂದಿಸಿದ ಮುಂಬೈ ಮಹಿಳೆ, ಹೈಕೋರ್ಟ್ ಗೆ ಪ್ರಶ್ನಿಸಿ ಸಿಬಿಐ...

ಬೆಂಗಳೂರು : ಬಿ.ನಾಗೇಂದ್ರ ಎಂದು ದಾಖಲೆಗಳಲ್ಲಿ ನಮೂದಿಸಿದ ಮುಂಬೈ ಮಹಿಳೆ, ಹೈಕೋರ್ಟ್ ಗೆ ಪ್ರಶ್ನಿಸಿ ಸಿಬಿಐ ಅರ್ಜಿ.

ಬೆಂಗಳೂರು : ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದೆ.

ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ನಡೆಸುವಾಗ ಅಕ್ರಮ ಹಣ ವರ್ಗಾವಣೆಯ ಇನ್ನೆರಡು ಹಗರಣ ಬೆಳಕಿಗೆ ಬಂದಿದ್ದು ಅವುಗಳಲ್ಲಿ ಮುಂಬೈನ ಒಬ್ಬ ಮಹಿಳೆ ತನ್ನ ಗಂಡನ ಹೆಸರು ಬಿ.ನಾಗೇಂದ್ರ ಎಂದು ದಾಖಲೆಗಳಲ್ಲಿ ನಮೂದಿಸಿಕೊಂಡಿದ್ದಾರೆ’ ಎAದು ಸಿಬಿಐ ಹೈಕೋರ್ಟ್ಗೆ ತಿಳಿಸಿದೆ.

ಸಿಬಿಐ ಪರ ವಾದ ಮಂಡಿಸಿದ ಪಿ.ಪ್ರಸನ್ನ ಕುಮಾರ್, `ವಾಲ್ಮೀಕಿ ಹಗರಣದ ತನಿಖೆ ನಡೆಸುವಾಗ ಮತ್ತೆರಡು ಹಗರಣ ಬೆಳಕಿಗೆ ಬಂದಿದ್ದು ಇವುಗಳನ್ನೂ ತನಿಖೆ ನಡೆಸಲು ಇದೇ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅನುಮತಿ ನೀಡಿದೆ.

ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದಾಗ ಮುಂಬೈನ ಇಬ್ಬರು ಮಹಿಳೆಯರಿಗೆ ಹಣ ಅಕ್ರಮವಾಗಿ ತಲುಪಿರುವುದು ಪತ್ತೆಯಾಗಿದೆ’ ಎಂದರು. ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ ಖಾತೆಯಿಂದ ನೆಕ್ಕಂಟಿ ನಾಗರಾಜ್ ಆಪ್ತರಿಗೆ ಒಟ್ಟು 2.17 ಕೋಟಿ ಸಂದಾಯವಾಗಿದೆ ಮತ್ತು ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನ ಕೇಂದ್ರದಿAದ ನೆಕ್ಕಂಟಿ ಅವರಿಗೆ ? 95 ಲಕ್ಷ ಪಾವತಿಯಾಗಿದೆ. ಈ ಹಣ ಮುಂಬೈ ಮಹಿಳೆಯರಿಗೆ ತಲುಪಿದ್ದು ಇಬ್ಬರೂ ಒಟ್ಟು 95 ಲಕ್ಷ ಮೊತ್ತದ ಬಂಗಾರ ಖರೀದಿಸಿದ್ದಾರೆ. ಅವರಲ್ಲಿನ ಒಬ್ಬ ಮಹಿಳೆ ತನ್ನ ಮನೆಯ ಬಾಡಿಗೆ ಕರಾರು ಪತ್ರದಲ್ಲಿ, ತಾನು ಬಿ.ನಾಗೇಂದ್ರ ಅವರ ಪತ್ನಿ ಎಂದು ಕಾಣಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular