ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಬಿಸಿಲಿನ ತಾಪಮಾನಕ್ಕೆ ಮದ್ಯಪ್ರಿಯರು ಚಿಲ್ಡ್ ಬಿಯರ್ ಮೊರೆ ಹೋಗಿದ್ದಾರೆ. ಮದ್ಯಪ್ರಿಯರ ಬಿಯರ್ ಬೇಡಿಕೆಗೆ ಅಬಕಾರಿ ಇಲಾಖೆಯ ಬೊಕ್ಕಸ ತುಂಬಿ ತುಳುಕಿದೆ. ಕೇವಲ ಕಳೆದ ಏಪ್ರಿಲ್ ನ 11 ದಿನಗಳಲ್ಲಿ 17 ಲಕ್ಷ ಲೀ ಕೋಲ್ಡ್ ಬಿಯರ್ ಮಾರಾಟವಾಗಿ ಹಿಂದಿನ 3 ವರ್ಷಗಳ ದಾಖಲೆ ಮುರಿದಿತ್ತು ಇದೀಗ ಮತ್ತಷ್ಟು ಬೇಡಿಕೆ ಹೆಚ್ಚಾಗಿದ್ದು ಬಿಸಿಲಿನ ಬೇಗೆಗೆ ಬಿಯರ್ ಕೋಲ್ಡ್ ಕುಡಿದು ತಂಪಾಗಿಸುವುದು ಕಂಡುಬಂದಿದೆ.
ಇದೀಗ ಮದ್ಯ ಪ್ರಿಯರಿಗೆ ಬ್ಯಾಡ್ ನ್ಯೂಸ್ ಸಿಕ್ಕಿದ್ದು, ಇನ್ನೆರಡು ತಿಂಗಳ ಕಾಲ ಬಿಯರ್ ಸಿಗುವುದು ಕಷ್ಟವಾಗಲಿದೆ. ಯಾಕೆಂದರೆ, ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದ ಕಾರಣ ರಾಜ್ಯದಲ್ಲಿ ಬಿಯರ್ ಅಭಾವ ಉಂಟಾಗಿರುವುದು ಕಂಡುಬಂದಿದೆ.ರಾಜ್ಯದಲ್ಲಿ ಪ್ರಸ್ತುತ ನಿತ್ಯ 11.50 ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿದೆ. ಬೇಸಿಗೆ ಮುನ್ನ ನಿತ್ಯ 8 ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿತ್ತು. ಈಗ ಬೇಸಿಗೆ ಹಿನ್ನೆಲೆ ನಿತ್ಯ 2 ಲಕ್ಷ ಲೀಟರ್ ಬಿಯರ್ ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಸಿಗುತ್ತಿಲ್ಲ. ಇದಕ್ಕೆ ಕಾರಣ ಬಿಯರ್ ತಯಾರಿಕೆಯಲ್ಲಿ ಭಾರಿ ಕುಂಠಿತವಾಗಿರುವುದು. ಬಿಯರ್ ಅಭಾವ ಇರುವ ಬಗ್ಗೆ ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಮುಂದಿನ ಎರಡು ತಿಂಗಳ ಕಾಲ ಬಿಯರ್ ಅಭಾವ ಉಂಟಾಗಲಿದೆ ಎನ್ನಲಾಗಿದೆ ಎಂಬ ಮಾಹಿತಿ ದೊರೆತಿದೆ.
ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ.30 ಮಾರಾಟ ಹೆಚ್ಚಳವಾಗಿದೆ. ಅಗತ್ಯ ಇರುವಷ್ಟು ಬಿಯರ್ ಸಂಗ್ರಹ ಇದೆ ಎಂದು ಅಬಕಾರಿ ಇಲಾಖೆ ಮೂಲಗಳಿಂದ ಕಳೆದ ತಿಂಗಳು ತಿಳಿದುಬಂದಿತ್ತು. ಆದರೆ, ಇದೀಗ ಬಿಯರ್‌ಗೆ ಭಾರಿ ಬೇಡಿಕೆ ಉಂಟಾಗಿದ್ದು, ಅದಕ್ಕೆ ತಕ್ಕಂತೆ ಪೂರೈಕೆಯಾಗದಿರುವುದು ಸಮಸ್ಯೆಗೆ ಕಾರಣವಾಗಿದೆ.ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕೂಡ ಬಿಯರ್ ಉತ್ಪಾದನೆ ಕುಸಿಯಲು ಕಾರಣವಾಗಿದೆ. ಇನ್ನು ಸಾರಿಗೆ ಸಮಸ್ಯೆ, ಚುನಾವಣೆ ಸಮಯದಲ್ಲಿ ಮಳಿಗೆಗಳಲ್ಲಿ ಹೆಚ್ಚುವರಿ ಮದ್ಯ, ಬಿಯರ್ ಸಂಗ್ರಹಣೆ ಮೇಲೆ ನಿರ್ಬಂಧ ಹೇರಿರುವುದು ಕೂಡ ಬಿಯರ್ ಪೂರೈಕೆ ಕುಸಿಯಲು ಕಾರಣವಾಗಿದೆ.
ರಾಜ್ಯದಲ್ಲಿ ಜನಸಾಮನ್ಯರು ಫ್ರೂಟ್ ಜ್ಯೂಸುಗಳು ಹಾಗೂ ಇನ್ನಿತರ ದೇಹವನ್ನು ತಂಪು ಮಾಡುವ ಆಹಾರ ಪದಾರ್ಥ ಗಳಿಗೆ ಮೋದೆಹೋದದ್ದು ಇದೆ ಮೊದಲ ಬಾರಿ ಎಂದು ವರದಿಯಾಗಿದೆ.ಈ ಬಿಸಿಲಿಗೆ ಹಾಟ್ ಡ್ರಿಂಕ್ಸ್ ಕುಡಿದರೆ ದೇಹದ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು,ಪೈಲ್ಸ್ ಇನ್ನಿತರ ಕಾಯಿಲೆಗಳಿಗೆ ತುತ್ತಾಗುವುದರಿಂದ ಬಿಯರ್ ಕುಡಿಯುವುದು ಲೇಸು ಎಂದು ಮದ್ಯಪ್ರಿಯ ಯೋಗೀಶ್ ಕುಮಾರ್ ತಿಳಿಸಿದ್ದಾರೆ.ರಾತ್ರೆ ಕುಡಿದು ಬೆಳಗಿನಜಾವ ತಂಪುಮಾಡಲು ಎಳನೀರಿನ ಮೊರೆಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.