Friday, March 6, 2026
Flats for sale
Homeಕ್ರೈಂಬೆಂಗಳೂರು : ಬಿಜೆಪಿಯ ಯುವ ಮೋರ್ಚಾದ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ...

ಬೆಂಗಳೂರು : ಬಿಜೆಪಿಯ ಯುವ ಮೋರ್ಚಾದ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಆರೋಪಿ ಮೊಹಮ್ಮದ್ ಜಬೀರ್‌ಗೆ ಜಾಮೀನು ನಿರಾಕರಣೆ.

ಬೆಂಗಳೂರು : ಹಿಂದೂ ಮುಖಂಡ ಸರಳ ಸ್ವಾಮ್ಯದ ವ್ಯಕ್ತಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಮೊಹಮ್ಮದ್‌ ಜಬೀರ್‌ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಆರೋಪಿ 35 ವರ್ಷದ ಜಬೀರ್‌ ಅವರು ತಮ್ಮ ಕಸ್ಟಡಿ ವಿಸ್ತರಣೆ ಮಾಡಿ ಡಿಫಾಲ್ಟ್‌ ಜಾಮೀನು ತಿರಸ್ಕರಿಸಿ ವಿಶೇಷ ಎನ್‌ಐಎ ನ್ಯಾಯಾಲಯವು 2023ರ ಫೆಬ್ರವರಿ 9ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ವಕೀಲೆ ಹಲೀಮಾ ಅಮೀನ್‌ ಆರೋಪಿ ಪರ ಅರ್ಜಿ ಸಲ್ಲಿಸಿದ್ದು ಎನ್‌ಐಎ ಪರವಾಗಿ ಹಾಜರಾಗಿ ಅರ್ಜಿದಾರರ ಕಸ್ಟಡಿ ಆದೇಶ ವಿಸ್ತರಿಸುವಂತೆ ಕೋರಿರುವವರು ವಿಶೇಷ ಸರ್ಕಾರಿ ಅಭಿಯೋಜಕರಲ್ಲ. ಅಲ್ಲದೇ, ಅವರ ಮೌಖಿಕ ಕೋರಿಕೆಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಪರಿಗಣಿಸಬಾರದಿತ್ತು ಎಂದಿದ್ದಾರೆ. ಅಮೀನ್‌ ಅವರ ವಾದವು ತಥಾಕಥಿತ ಮತ್ತು ತಾಂತ್ರಿಕವಾಗಿದೆ; ಅಮೀನ್‌ ಅವರ ವಾದ ಒಪ್ಪಿದರೆ ವಕೀಲರ ಜೂನಿಯರ್‌ ಅಥವಾ ಸಹೋದ್ಯೋಗಿ ಅವರ ಪರವಾಗಿ ಹಾಜರಾಗುವಂತಿಲ್ಲ” ಎಂದು ಆದೇಶದಲ್ಲಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಆರೋಪಿ ಜಬೀರ್‌ ಅವರ ಕಸ್ಟಡಿ ವಿಸ್ತರಿಸುವಂತೆ ಮೌಖಿಕವಾಗಿ ಕೋರಿದ್ದಾರೆ. ಅದರಂತೆ 2023ರ ಫೆಬ್ರವರಿ 8ರಂದು ಪ್ರಕರಣದ ವಿಚಾರಣೆ ನಡೆಸಲಾಗಿದೆ. ಹೀಗಾಗಿ, 2023ರ ಫೆಬ್ರವರಿ 7ರಂದು ನ್ಯಾಯಾಲಯದ ಮುಂದೆ ಹಾಜರಾಗಿ ಕಸ್ಟಡಿ ವಿಸ್ತರಣೆ ಕೋರಲು ಆ ವಕೀಲರಿಗೆ ಅವಕಾಶವಿಲ್ಲ ಎಂದು ಹೇಳಲಾಗದು ಎಂದು ನ್ಯಾಯಾಲಯವು ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular