ಬೆಂಗಳೂರು: ಇನ್ನೇನು ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವುದು ರಾಜ್ಯದಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕ್ಷಣಗಣಗೆ ಆರಂಭಗೊಂಡಿದ್ದು , ಕೆಲವು ಹಾಲಿ ಸಂಸದರಿಗೆ ಟಿಕೆಟ್ ತಪ್ಪಲಿದೆ ಎಂಬ ವದಂತಿ ಸಂಸದರೂ ಸೇರಿದಂತೆ ಅವರ ಬೆಂಬಲಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ.ಈ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಕುದುರೆಯನ್ನು ಹುಡುಕುವದೇ ತಲೆನೋವಿನಸಂಗಾತಿಯಾಗಿದೆ,ಬಿಜೆಪಿ ಯಲ್ಲಿ ಟಿಕೆಟ್ ಸಿಗದೇ ಅಸಮಾಧಾನಗೊಂಡವರನ್ನು ತನ್ನತ್ತ ಸೆಳೆಯಲು ಕೈ ಕಾಯುತ್ತಿದೆ.
ಮೈಸೂರು ಸಂಸದ ಸಿ.ಕೆ.ಪ್ರತಾಪ್ ಸಿಂಹ ಅವರು ಕಳೆದ ರಾತ್ರಿ ಫೇಸ್ಬುಕ್ ಲೈವ್ನಲ್ಲಿ ಆಡಿದ ಮಾತುಗಳು ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ. ದೆಹಲಿಯಲ್ಲಿ ಸೋಮವಾರ ತಡರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಕರ್ನಾಟಕ ೨೫ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊAಡಿದ್ದು, ಜೆಡಿಎಸ್ಗೆ 2 ಸ್ಥಾನಗಳೋ ಅಥವಾ 3 ಸ್ಥಾನಗಳೋ ಎಂಬ ವಿಚಾರವಷ್ಟೇ ಅಂತಿಮಗೊಳ್ಳಬೇಕಿದೆ.
ಕರ್ನಾಟಕದ ಜತೆಗೆ ಇತರ ರಾಜ್ಯಗಳ ಅಭ್ಯರ್ಥಿಗಳ ಹೆಸರುಗಳೂ ಎರಡನೇ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿರುವ ಹಿನ್ನೆಲೆಯಲ್ಲಿ ಮತ್ತೊಂದು ಕೇಂದ್ರೀಯ ಚುನಾವಣಾ ಸಮಿತಿ ಸಭೆಯ ಬಳಿಕ ಪಟ್ಟಿ ಬಿಡುಗಡೆ ಆಗಲಿದೆ.
ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಕೆಲವು ಕ್ಷೇತ್ರಗಳ ಮಾತುಕತೆ ನಡೆದಿವೆ. ಕೆಲವೊಂದು ಹಾಗೆ ಇವೆ. ರಾತ್ರಿ ಅಥವಾ ಬುಧವಾರ ಒಂದು ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ದೆಹಲಿ ಸಭೆ ಮುಗಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಭ್ಯರ್ಥಿಗಳ ಆಯ್ಕೆ ಗೆಲ್ಲುವಂತಹ ಮಾನದಂಡದ ಮೇಲೆ ತೀರ್ಮಾನ ಮಾಡುತ್ತಿದ್ದಾರೆ. ಹೊಸ ಮುಖಗಳ ಜೊತೆಯಲ್ಲಿ ಹಳಬರಿಗೂ ಅವಕಾಶ ನೀಡಲಾಗಿದೆ. ಹಾಲಿ ಸಂಸದರ ಕಾರ್ಯವೈಖರಿ ಬಗ್ಗೆ ಚರ್ಚೆ ಆಗಿದೆ. ಕೆಂದ್ರ ನಾಯಕರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ ತಾಳ್ಮೆ ಪ್ರತಾಪ್ ಸಿಂಹಗೆ ಸಲಹೆ ಸಂಸದ ಪ್ರತಾಪ್ ಸಿಂಹ ಫೇಸ್ಬುಕ್ ಲೈವ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಅಸಮಾಧಾನ ಆಗೋದು ಬೇಡ. ಇನ್ನೂ ಸಮಯವಿದ್ದು, ಕೇಂದ್ರ ನಾಯಕರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನೂ ಟಿಕೆಟ್ ಘೋಷಣೆಯೇ ಮಾಡಿಲ್ಲ. ಆ ರೀತಿ ಅಸಮಾಧಾನ ಹೊರಹಾಕುವುದು ಬೇಡ. ತಾಳ್ಮೆ ಇರಬೇಕು ಎಂದು ಸಂಸದರಿಗೆ ಸಲಹೆ ನೀಡಿದರು.


