Friday, November 22, 2024
Flats for sale
Homeರಾಜ್ಯಬೆಂಗಳೂರು : ಬಿಜೆಪಿಗೆ ತಿರುಗೇಟು ನೀಡಲು ರಾಜ್ಯದಲ್ಲಿ100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್​ನಲ್ಲಿ ಹಣ ನೀಡುವಂತೆ...

ಬೆಂಗಳೂರು : ಬಿಜೆಪಿಗೆ ತಿರುಗೇಟು ನೀಡಲು ರಾಜ್ಯದಲ್ಲಿ100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್​ನಲ್ಲಿ ಹಣ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆ ಪ್ರಸ್ತಾವನೆ.

ಬೆಂಗಳೂರು : ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ದಿನದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ವಿರೋಧಿ ಪಟ್ಟ ಕಟ್ಟಿದ್ದ ಬಿಜೆಪಿ ಇದೀಗ ಬಿಜೆಪಿ ಗೆ ಸಡ್ದು ಹೊಡೆಯಲು ಹಿಂದೂಗಳ ಮತ ಬ್ಯಾಂಕ್ ಪಡೆಯಲು ಕಾಂಗ್ರೆಸ್ ಸರಕಾರ ಹಲವು ತಂತ್ರಗಳನ್ನು ಮಾಡುತ್ತಿದೆ.

ಬಿಜೆಪಿ ರಾಮ ಜಪ ಮಾಡುತ್ತ ಲೋಕ ಸಭಾ ಚುನಾವಣೆ ಎದುರಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಅನೇಕ ಬಾರಿ ಟೀಕೆ ಮಾಡಿದೆ.ಸದ್ಯ ಈಗ ಅದೇ ಶ್ರೀರಾಮನ ಹೆಸರಿನಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಹೊಸ ಯೋಜನೆ ರೂಪಿಸಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಶ್ರೀರಾಮ ಮಂದಿರಗಳ ಅಭಿವೃದ್ಧಿಗೆ ತಯಾರಿ ಶುರುವಾಗಿದೆ. ರಾಜ್ಯದ 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಡಲು ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ 100 ರಾಮಮಂದಿರಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿದ್ದು 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ರಾಜ್ಯ ಬಜೆಟ್​ನಲ್ಲಿ ಹಣಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ರಾಮನ ವಿರೋಧಿಗಳು, ಹಿಂದೂ ಧರ್ಮ ವಿರೋಧಿಗಳು ಎಂಬ ಹಣೆಪಟ್ಟಿ ಕಿತ್ತೆಸೆಯಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ರಾಜ್ಯದಲ್ಲಿನ 100 ಹಳೆಯ, ಪ್ರಸಿದ್ಧ ರಾಮ ಮಂದಿರಗಳ ಜೀರ್ಣೋದ್ಧಾರದ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಬಜೆಟ್​ನಲ್ಲಿ ಹಣ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ರಾಮ ಎಲ್ಲರಿಗೂ ಸಲ್ಲುವ ದೇವರು, ಒಂದು ಪಕ್ಷದ ದೇವರಲ್ಲ. ರಾಮನ ದೇವಸ್ಥಾನವನ್ನೂ ನಿರ್ಮಾಣ ಮಾಡ್ತಿವಿ, ಈಶ್ವರನ ದೇವಸ್ಥಾನವನ್ನೂ ನಿರ್ಮಾಣ ಮಾಡ್ತೀವಿ. ಶ್ರೀರಾಮನನ್ನು ದೇಶದಲ್ಲಿ ಎಲ್ರೂ ಪೂಜಿಸುತ್ತಾರೆ.ರಾಮ ಬಿಜೆಪಿ ಅವ್ರಿಗೆ ಮಾತ್ರ ದೇವರಲ್ಲ ಎಲ್ಲರಿಗೂ ದೇವರು ಎಂದು ಧಾರ್ಮಿಕ ದತ್ತಿ ಇಲಾಖೆಯಾ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ. ಸಚಿವ ರಾಮಲಿಂಗ ರೆಡ್ಡಿ ರಾಮಮಂದಿರ ಜೀರ್ಣೋದ್ಧಾರಕ್ಕಾಗಿ ಬಜೆಟ್​ನಲ್ಲಿ ಹಣ ಬಿಡುಗಡೆ ಮಾಡಲು ಡಿಮ್ಯಾಂಡ್ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನವರು ರಾಮನ ಜಪದಲ್ಲಿ ಶ್ರೀರಾಮನ ಓಲೈಕೆಗೆ ಮುಂದಾಗಲು ತಯಾರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular