Thursday, November 21, 2024
Flats for sale
Homeರಾಜ್ಯಬೆಂಗಳೂರು : ಬಿಎಂಟಿಸಿ ನಿರ್ವಾಹಕ,ಚಾಲಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ..!

ಬೆಂಗಳೂರು : ಬಿಎಂಟಿಸಿ ನಿರ್ವಾಹಕ,ಚಾಲಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ..!

ಬೆಂಗಳೂರು : ಮೊನ್ನೆ ತಾನೇ (BMTC) ನಿರ್ವಾಹಕನಿಗೆ ಬಿಹಾರ ಮೂಲದ ಯುವಕ ಚೂರಿ ಹಿರಿದಿದ್ದು ಈ ಹಿನ್ನೆಲೆ ತಮ್ಮನ್ನು ತಾವು ರಕ್ಷಿಸಲು ಪಿಸ್ತೂಲಿಗೆ ಬೇಡಿಕೆಯಿಟ್ಟ ಬೆನ್ನಲ್ಲೇ ಪ್ರಯಾಣಿಕ ಬಿಎಂಟಿಸಿ ಬಸ್​ ನಿರ್ವಾಹಕ ಮತ್ತು ಚಾಲಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಬಿಎಂಟಿಸಿ ವೋಲ್ವೋ ಬಸ್ ಗುರುವಾರ ಸಂಜೆ 4:15ರ ಸುಮಾರಿಗೆ​ ಅತ್ತಿಬೆಲೆಯಿಂದ ಮೆಜಸ್ಟಿಕ್​ಗೆ ಹೋಗುತ್ತಿತ್ತು. ಬೆದರಿಕೆ ಹಾಕಿದ ಪ್ರಯಾಣಿಕ ಕೊನಪ್ಪನ ಅಗ್ರಹಾರದಲ್ಲಿ ಬಸ್ ಹತ್ತಿದ್ದಾನೆ. ​ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ನೀಡುವ ಸಂಬಂಧ ಬಸ್​ ಅನ್ನು ಅದೇ ನಿಲ್ದಾಣದಲ್ಲಿ ಕೆಲ ಹೊತ್ತು ನಿಲ್ಲಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಹೊಸ ರೋಡ್ ಬಸ್ ನಿಲ್ದಾಣದಲ್ಲಿ ಬಸ್​ನಿಂದ ಇಳಿದು, ಬ್ಯಾಗ್​ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು, ಚಾಲಕ ಮತ್ತು ನಿರ್ವಾಹಕನಿಗೆ ತೋರಿಸಿ, ಚುಚ್ಚಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.ಈ ಬಗ್ಗೆ ಬಿಎಂಟಿಸಿ ಚಾಲಕರು ರಕ್ಷಣೆಗೆ ಅಧಿಕಾರಿಗಳ ಮೊರೆ ಹೋಗಿದ್ದಾರೆಂಬುದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular