Monday, October 20, 2025
Flats for sale
Homeವಾಣಿಜ್ಯಬೆಂಗಳೂರು : ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಬೇರೆಯವರಿಗೆ ಬಾಡಿಗೆ ಕೊಡುವಂತಿಲ್ಲ : ಬಾಡಿಗೆ ಕಾಯ್ದೆಗೆ...

ಬೆಂಗಳೂರು : ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಬೇರೆಯವರಿಗೆ ಬಾಡಿಗೆ ಕೊಡುವಂತಿಲ್ಲ : ಬಾಡಿಗೆ ಕಾಯ್ದೆಗೆ ಹೊಸ ನಿಯಮದಂತೆ ಮಹತ್ವದ ತಿದ್ದುಪಡಿಗೆ ಸರ್ಕಾರ ಚಿಂತನೆ..!

ಬೆಂಗಳೂರು : ಕರ್ನಾಟಕ ಸರ್ಕಾರದಿಂದ ಬಾಡಿಗೆ ಕಾಯ್ದೆಗೆ ಮಹತ್ವದ ತಿದ್ದುಪಡಿ ಮಾಡಲಾಗುತ್ತಿದೆ. ಹೊಸ ನಿಯಮದಂತೆ ಬಾಡಿಗೆದಾರರಿಗೆ ಮಾತ್ರವಲ್ಲ, ಮಾಲೀಕರಿಗೂ ನಿಯಮ ಉಲ್ಲಂಘಿಸಿದರೆ ದೊಡ್ಡ ಮೊತ್ತದ ದಂಡ ಬೀಳಲಿದೆ.

ಜತೆಗೆ ದುಬಾರಿ ಬಾಡಿಗೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ದು, ಮಾರುಕಟ್ಟೆಗೆ ಅನುಗುಣವಾಗಿ ಬಾಡಿಗೆ ದರ ನಿಗದಿ ಮಾಡಲು ತೀರ್ಮಾನಿಸಿದೆ. ಈ ತಿದ್ದುಪಡಿಯಿಂದ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಮತ್ತು ಮನೆ ಮಾಲೀಕರು ಇಬ್ಬರಿಗೂ ಹೊಸ ನಿಯಮಗಳು ಅನ್ವಯಿಸುತ್ತವೆ. ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಬೇರೆಯವರಿಗೆ ಬಾಡಿಗೆ ಕೊಡುವಂತಿಲ್ಲ. ಅದರಲ್ಲೂ ಮಾಲೀಕರ ಅನುಮತಿ ಇಲ್ಲದೆ ಬೇರೆಯವರಿಗೆ ಬಾಡಿಗೆಗೆ ನೀಡಿದರೆ, ಈಗಿನ ದಂಡದ ಮೊತ್ತವನ್ನು ೫೦೦೦ ರೂಪಾಯಿಯಿಂದ 5೦,೦೦೦ ರೂ.ಗೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ.

ಕೇವಲ ಬಾಡಿಗೆದಾರರಿಗೆ ಮಾತ್ರವಲ್ಲ, ಮನೆ ಮಾಲೀಕರಿಗೂ ದಂಡ ಬೀಳಲಿದೆ. ಬಾಡಿಗೆ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಲು ಅವಕಾಶ ಮಾಡಿಕೊಟ್ಟರೆ, ಅಂತಹ ಮನೆ ಮಾಲೀಕರಿಗೆ 3,೦೦೦ ರೂಪಾಯಿಯಿಂದ 3೦,೦೦೦ ರೂಪಾಯಿಗೆ ದಂಡ ಹೆಚ್ಚಳವಾಗಲಿದೆ. ಜೈಲು ಶಿಕ್ಷೆಯ ಬದಲು, ದಂಡದ ಮೊತ್ತವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಬ್ರೋಕರ್‌ಗಳಿಗೂ ದಂಡ
ಅನಧಿಕೃತವಾಗಿ ಕಾರ್ಯನಿರ್ವಹಿಸುವ ಬ್ರೋಕರ್‌ಗಳಿಗೂ ಸರ್ಕಾರ ಬಿಸಿ ಮುಟ್ಟಿಸಲಿದೆ. ಕಾಯ್ದೆಯ ಸೆಕ್ಷನ್ 2೦ರ ಅಡಿಯಲ್ಲಿ ನೋಂದಣಿ ಮಾಡಿಸದ ಬ್ರೋಕರ್‌ಗಳಿಗೆ ದಿನಕ್ಕೆ 25೦೦೦ ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಮೊದಲು, ಇದು 2೦೦೦ ರೂಪಾಯಿ ಇತ್ತು. ಮತ್ತೆ ಮತ್ತೆ ತಪ್ಪು ಮಾಡಿದರೆ, ದಿನಕ್ಕೆ 2೦೦೦೦ ರೂಪಾಯಿ ಹೆಚ್ಚುವರಿ ದಂಡ ಬೀಳುತ್ತದೆ. ಬಾಡಿಗೆ ಒಪ್ಪಂದಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲು ಸರ್ಕಾರವು ಪೋರ್ಟಲ್ ಪ್ರಾರಂಭಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular