ಬೆಂಗಳೂರು : ಜೈಲಿನಲ್ಲೇ ರಾಜಾತಿಥ್ಯ ಪಡೆದ ಫೋಟೊ ಹಾಗೂ ವಿಡಿಯೊ ವೈರಲ್ ಆಗುತಿದ್ದ ಹಿನ್ನೆಲೆ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲುವಾಸ ಅನುಭವಿಸುತ್ತಿರುವ , ಆಗುತ್ತಿದ್ದಂತೆ ಸಂಕಷ್ಟ ಎದುರಾಗಿದೆ. ಈಗಾಗಲೇ ನಟ ದರ್ಶನ್ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದೆ. ಈ ಮಧ್ಯೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಕ್ಕೆ ಬೆಂಗಳೂರಿನ 27ನೇ ಎಸಿಎಂಎಂ ಕೋರ್ಟ್ ಒಪ್ಪಿಗೆ ನೀಡಿದೆ.
ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದು, ಪವನ್ , ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ ಶಿಫ್ಟ್ ಆಗಬೇಕಿದೆ. ಜಗದೀಶ್ಗೆ ಶಿವಮೊಗ್ಗ ಜೈಲು, ಧನರಾಜ್ಗೆ ಧಾರವಾಡ ಜೈಲು ಗತಿಯಾಗಿದೆ. ವಿಜಯಪುರ ಜೈಲಿಗೆ ವಿನಯ್ ಸ್ಥಳಾಂತರ ಆಗಬೇಕಿದೆ. ನಾಗರಾಜ್ ಕಲಬುರಗಿ ಜೈಲು, ಲಕ್ಷ್ಮಣ ಶಿವಮೊಗ್ಗ ಜೈಲು, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ.
ಯಾರು ಯಾರನ್ನ ಯಾವ್ಯಾವ ಜೈಲಿಗೆ ಶಿಫ್ಟ್..?
ದರ್ಶನ್- ಬಳ್ಳಾರಿ ಜೈಲು
ಪವನ್- ರಾಘವೇಂದ್ರ, ನಂದೀಶ್- ಮೈಸೂರು ಜೈಲು
ಜಗದೀಶ್- ಶಿವಮೊಗ್ಗ,
ಧನರಾಜ್- ಧಾರವಾಡ ಜೈಲು
ವಿನಯ್- ವಿಜಯಪುರ ಜೈಲು
ನಾಗರಾಜ್- ಕಲಬುರಗಿ
ಲಕ್ಷ್ಮಣ- ಶಿವಮೊಗ್ಗ
ಪ್ರದೂಶ್- ಬೆಳಗಾವಿ
ಪವಿತ್ರಗೌಡ- ಪರಪ್ಪನ ಅಗ್ರಹಾರ
ಅನುಕುಮಾರ್- ಪರಪ್ಪನ ಅಗ್ರಹಾರ
ದೀಪಕ್- ಪರಪ್ಪನ ಅಗ್ರಹಾರ
ಈಗಾಗಲೇ ರವಿ , ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ಜೈಲಿನಲ್ಲೇ ದರ್ಬಾರ್ ಮಾಡುತ್ತಿದ್ದಾರೆ. ಆದರೆ ದರ್ಶನ್ ರಾಜಾಥಿತ್ಯದ ಫೋಟೋ ವೈರಲ್ ಆಗಿ ಕಥೆನೇ ಬೇರೆ ಇದೆ. ಜೈಲಿನೊಳಗಡೆ ಇರುವ ಆ ಎರಡು ಗ್ಯಾಂಗ್ ನಡುವಿನ ಕೋಲ್ಡ್ ವಾರ್ ದಾಸನಿಗೆ ಸಂಕಷ್ಟ ತಂದೊಡ್ಡಿದೆ.ಜೈಲಿನೊಳಗಿನ ರಾಜಕೀಯ ಕೂಡ ನಟ ದರ್ಶನ ಗೆ ನೆಲೆಯಿಲ್ಲದಂತೆ ಮಾಡಿದೆ.


