Friday, November 22, 2024
Flats for sale
Homeಸಿನಿಮಾಬೆಂಗಳೂರು : 'ಬದುಕು ನಿಶ್ಚಯಿಸಿದ ನಿಶ್ಚಿತಾರ್ಥ' ಎಂದು ಪ್ರೀತಿಯ ಪತ್ನಿ ಫೋಟೋ ಶೇರ್‌ ಮಾಡಿ ಸವಿನೆನಪು...

ಬೆಂಗಳೂರು : ‘ಬದುಕು ನಿಶ್ಚಯಿಸಿದ ನಿಶ್ಚಿತಾರ್ಥ’ ಎಂದು ಪ್ರೀತಿಯ ಪತ್ನಿ ಫೋಟೋ ಶೇರ್‌ ಮಾಡಿ ಸವಿನೆನಪು ಹಂಚಿಕೊಂಡ ವಿಜಯರಾಘವೇಂದ್ರ.

ಬೆಂಗಳೂರು : ‘ಬದುಕು ನಿಶ್ಚಯಿಸಿದ ನಿಶ್ಚಿತಾರ್ಥ’ ಎಂಬ ಟ್ಯಾಗ್‌ಲೈನ್ ಕೊಟ್ಟು ಸ್ಪಂದನಾ ಜೊತೆಯಿದ್ದ, ತಮ್ಮ 2007ರ ಎಂಗೇಜ್‌ಮೆಂಟ್ ಫೋಟೋವನ್ನು ಶೇರ್ ಮಾಡಿದ ನಟ ವಿಜಯರಾಘವೇಂದ್ರ ಅಂದರೆ 20 ಇಂದು, ಏಪ್ರಿಲ್ 2024ರಂದು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ತಮ್ಮ ಹಾಗೂ ಸ್ಪಂದನಾರ ಎಂಗೇಜ್‌ಮೆಂಟ್ ಸವಿನೆನಪನ್ನು ಹಂಚಿಕೊಂಡಿದ್ದಾರೆ.ಅದಕ್ಕೆ ಸಹಜವಾಗಿಯೇ ಬಹಳಷ್ಟು ಕಾಮೆಂಟ್‌ಗಳು ಹರಿದುಬಂದಿವೆ.

ಇಂದು,ನಿಶ್ಚಿತಾರ್ಥದ ದಿನ 17 ವರ್ಷಗಳ ಹಿಂದೆ ಜೊತೆಯಲ್ಲಿ ಇದ್ದು ಈಗ ಇಲ್ಲವೆಂಬ ಒಂಟಿತನದ ಪ್ರೀತಿಯ ಸವಿನೆನಪನ್ನು ನೆನಪಿಸುತ್ತ ಇದೇ ದಿನದಂದು ನಡೆದಿದ್ದ ತಮ್ಮಿಬ್ಬರ ಎಂಗೇಜ್‌ಮೆಂಟ್ ಫೋಟೋವನ್ನು ಶೇರ್ ಮಾಡಿಕೊಂಡು ಸವಿನೆನಪು ಹಂಚಿಕೊಂಡಿದ್ದಾರೆ.
ಈ ಟ್ಯಾಗ್‌ಲೈನ್ ನ್ನು ನೋಡಿ ಸಾಮಾಜಿಕಜಾಲತಾಣದಲ್ಲಿ ಬಹಳಷ್ಟು ಜನ ಕಂಬನಿ ಮಿಡಿದಿದ್ದಾರೆ. ದೇವರು ತಮಗೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಬೇಡಿಕೊಂಡಿದ್ದಾರೆ.ಅನೇಕರು ಅವರ ಕುಟುಂಬದ ದುಃಖದಲ್ಲಿ ತಾವೂ ಭಾಗಿಯಾಗುವುದಾಗಿ ಹೇಳಿಕೊಂಡಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ ಹಾಗೂ ಪತ್ನಿ ಸ್ಪಂದನಾ ಅವರು ಕಳೆದ ವರ್ಷ ಆಗಷ್ಟ್ 7 ರಂದು ರಂದು ಥೈಲ್ಯಾಂಡ್‌ ನ ಬ್ಯಾಂಕಾಕ್‌ ನಲ್ಲಿ ಹೃದಯ ಸ್ಥಂಬನ’ದಿಂದ ನಿಧನರಾದರು. ಸ್ಯಾಂಡಲ್‌ವುಡ್ ಸೇರಿದಂತೆ, ಇಡೀ ಕನ್ನಡನಾಡು ಅವರ ಸಾವಿಗೆ ಶೋಕತಪ್ತವಾಗಿ ಮರುಗಿತು. ಸ್ಪಂದನಾರ ಪತಿ, ನಟ ವಿಜಯರಾಘವೇಂದ್ರ ಅವರಂತೂ ಅಕ್ಷರಶಃ ಕುಸಿದುಬಿದ್ದಿದ್ದರು. ಈಗಲೂ ಅವರು ತಮ್ಮ ಪ್ರೀತಿಯ ಪತ್ನಿಯ ಸಾವಿಗಾಗಿ ಕೊರಗುತ್ತಲೇ ಇದ್ದಾರೆ ಎನ್ನಲಾಗುತ್ತಿದೆ.ಅವಾಗವಾಗ ಸ್ಪಂದನ ನೆನಪನ್ನು ನೆನಪಿಸುತ್ತ ಜೀವನವನ್ನು ಒಂಟಿಯಾಗಿ ಕಳೆಯುತ್ತಿರುವುದು ಕಂಡುಬಂದಿದೆ.ಅದರಿಂದ ಅವರು ಅಗಲಿರುವ ತಮ್ಮ ಪ್ರೀತಿಯ ಪತ್ನಿಯ ಫೋಟೋ ಹಾಕಿ, ಎಂಗೇಜ್‌ಮೆಂಟ್ ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular