Saturday, November 23, 2024
Flats for sale
Homeರಾಜಕೀಯಬೆಂಗಳೂರು : ಬಣ ರಾಜಕೀಯ : ಸಿಎಂ ಸ್ಥಾನದಿಂದ ಬಿಎಸ್​ವೈಯನ್ನು ಇಳಿಸಿದ್ದು ಕಟೀಲ್ ಗೆ ಟಿಕೆಟ್...

ಬೆಂಗಳೂರು : ಬಣ ರಾಜಕೀಯ : ಸಿಎಂ ಸ್ಥಾನದಿಂದ ಬಿಎಸ್​ವೈಯನ್ನು ಇಳಿಸಿದ್ದು ಕಟೀಲ್ ಗೆ ಟಿಕೆಟ್ ತಪ್ಪಲು ಕರಣವಾಯ್ತಾ ?

ಬೆಂಗಳೂರು : ಹಾವಿನ ದ್ವೇಷ 12 ವರುಷ ಆದರೆ ಈ ರಾಜಕಾರಣಿಗಳ ದ್ವೇಷ ಕೆಲವೇ ವರುಷದಂತಾಗಿದೆ. ಕರ್ನಾಟಕದ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನೂ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸಿದೆ. ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿ ಸಂಸದ, ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​​ಗೆ ಟಿಕೆಟ್ ದೊರೆಯದಂತೆ ಮಾಡುವಲ್ಲಿ ಬಿಎಸ್​ವೈ ಬಣ ಯಶಸ್ವಿಯಾಗಿದ್ದರೆಂಬುದು ಹಲವರ ಅನಿಸಿಕೆ.ಹಾಗೂ ಸಿಎಂ ಸ್ಥಾನದಿಂದ ಇಳಿಸಿದಕ್ಕೆ ಯೆಡಿಯೂರಪ್ಪನವರು ಹಗೆ ತೀರಿಸಿಕೊಂಡರಂತೂ ನಿಜವೆಂಬುದು ಸಾಮಾನ್ಯ ಜನರಿಗೂ ತಿಳಿದ ವಿಚಾರ.

ಬಣ ರಾಜಕೀಯ ಪ್ರಭಲ ವಿರೋಧದ ನಡುವೆಯೂ ಆಪ್ತರಿಗೆ ಟಿಕೆಟ್​ ಕೊಡಿಸುವಲ್ಲಿ ಕೂಡ ಅವರು ಯಶಸ್ವಿಯಾಗಿದ್ದಾರೆ. ಹಾಗೆಂದು, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬಣ ಕೂಡ ಮೇಲುಗೈ ಸಾಧಿಸಿದ್ದರೆ ಇನ್ನು ಕೆಲವು ಕ್ಷೇತ್ರಗಳಿಗೆ ಹೈಕಮಾಂಡ್​ ಸ್ವತಃ ಆಯ್ಕೆ ಮಾಡಿದೆ. ರಾಜಹುಲಿ ಎಂದೇ ಕರೆಯಲ್ಪಡುವ ಬಿಎಸ್ ಯಡಿಯೂರಪ್ಪ ಅವರು ಐದು ವರ್ಷ ಅಧಿಕಾರ ಪೂರ್ಣಗೊಳಿಸದೆ ಎರಡೂವರೆ ವರ್ಷಕ್ಕೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸುವಲ್ಲಿ ಬಿಎಲ್​ ಸಂತೋಷ್ ಆ್ಯಂಡ್ ಟೀಂ ಯಶಸ್ವಿಯಾಗಿತ್ತು ಎನ್ನುವ ಮಾತುಗಳು ಹರಿದಾಡುತಿತ್ತು.ಆದರೆ ಇದೀಗ ಸಂತೋಷ್ ಆ್ಯಂಡ್ ಟೀಂಗೆ ಅಲ್ಪ ಹಿನ್ನಡೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಕಟೀಲ್​ಗೆ ಯಡಿಯೂರಪ್ಪ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಆಯ್ಕೆ ಮಾಡಲಾಗಿದೆ. ಇವರು ಹೈಕಮಾಂಡ್​ ಅಭ್ಯರ್ಥಿ ಎನ್ನಲಾಗಿದೆ.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ರಾಜ್ಯಾಧ್ಯಕ್ಷರಾಗಿದ್ದ ಹಾಗೂ ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಲು ಕಾರಣ ಎಂದು ರಾಜಕೀಯ ವಿಶ್ಲೇಷಕರ ಮಾತು .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತ್ಯಜೀತ್ ಸುರತ್ಕಲ್,ಶ್ರೀಕರ್ ಪ್ರಭು ,ಅರುಣ್ ಪುತ್ತಿಲ ರಂತಹ ಹಿಂದೂ ಫೈರ್ ಬ್ರಾಂಡ್ ನಾಯಕರ ರಾಜಕೀಯ ಜೀವನವನ್ನು ಅಂತ್ಯಗೊಳಿಸಿದರಲ್ಲಿ ನಳಿನ್ ಪಾತ್ರ ಹೆಚ್ಚಾಗಿದ್ದು ಹಲವು ಕಾರ್ಯಕರ್ತರು ಈ ಬಗ್ಗೆ ಹಿಡಿ ಶಾಪ ಹಾಕುತಿದ್ದರು.ಬಿಜೆಪಿ ಕಾರ್ಯಕರ್ತರ ಆಕ್ರೋಶವೇ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈತಪ್ಪಲು ಮತ್ತೊಂದು ಕಾರಣ. ಅಭಿವೃದ್ಧಿ ವಿಚಾರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕಟೀಲ್​ ವಿರುದ್ಧವೇ ಬಿಜೆಪಿ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಯಾವುದೇ ಕಾರಣಕ್ಕೂ ಕಟೀಲ್​ಗೆ ಟಿಕೆಟ್ ಕೊಡದಂತೆ ಎಚ್ಚರಿಕೆಯ ಸಂದೇಶಗಳನ್ನು ಕಾರ್ಯಕರ್ತರು ರವಾನಿಸುತ್ತಲೇ ಬಂದಿದ್ದರು.ಪುತ್ತೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ತಪ್ಪಿಸುವಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಪಾತ್ರ ಪ್ರಮುಖವಾಗಿದೆ ಎಂದು ತಿಳಿದಿದೆ.ಹೀಗಾಗಿ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಕಟೀಲ್ ವಿರುದ್ಧ ಮುನಿಸಿಕೊಂಡಿದ್ದು, ಪುತ್ತಿಲ ಪರಿವಾರ ಎಂಬ ಸಂಘಟನೆ ಹುಟ್ಟಿಕೊಳ್ಳಲು ನಳಿನ್ ಕುಮಾರ್ ಕಟೀಲ್ ಕಾರಣ ಎಂಬುದು ಹಿಂದೂ ಕಾರ್ಯಕರ್ತರ ಮಾತು.

ಇನ್ನು ವಿ. ಸೋಮಣ್ಣ ಹೈಕಮಾಂಡ್​ ಹಾಗೂ ಬಿಎಲ್​ ಸಂತೋಷ ಬಣದ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಕಳೆದ ವಿಧಾನಸಭೆ ಚುನಾವನೆಯಲ್ಲಿ ನೀಡಿದ್ದ ಭರವಸೆ ಈಡೇರಿಸಲೇಬೆಕಿದ್ದ ಅನಿವಾರ್ಯತೆ ಹೈಕಮಾಂಡ್​ ಮೇಲಿತ್ತು. ಹೀಗಾಗಿ ಯಡಿಯೂರಪ್ಪ ಪ್ರಬಲ ವಿರೋಧದ ನಡೆವೆಯೂ ವಿ. ಸೋಮಣ್ಣಗೆ ಟಿಕೆಟ್ ನೀಡಲಾಗಿದೆ.

ರಾಜ್ಯದಲ್ಲಿ ಹೆಚ್ಚು ಸಾಕ್ಷರತೆಯ ಜಿಲ್ಲೆಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡದಿಂದ ಸಂಸದರಾಗಿ ಹೆಚ್ಚು ಸಕ್ರಿಯರಾಗಿರುವ ಹಾಗೂ ಸುಶಿಕ್ಷಿತ ಮುಖವನ್ನು ನೋಡಬೇಕೆಂಬ ಹಂಬಲ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಬಹಳ ಹಿಂದಿನಿಂದಲೂ ಇತ್ತು. ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತನಾಡಲು ಕಟೀಲ್ ಸಮರ್ಥರಾಗದ ಕಾರಣ ಹಲವು ಬಾರಿ ಟೀಕೆಗೆ ಒಳಗಾಗಿದ್ದರು.ಹಿಂದುತ್ವ ಕಾರ್ಯಕರ್ತರು ಅಭಿಯಾನವನ್ನು ಪ್ರಾರಂಭಿಸಿದ್ದು ಹೋರಾಟ ತೀವ್ರಗೊಂಡಿತು. ಇತ್ತೀಚೆಗಷ್ಟೇ ಪುತ್ತಿಲ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಕಟೀಲ್ ಅವರನ್ನು ಬದಲಿಸುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿ ಕಂಡುಬಂದಿದೆ.

ಏತನ್ಮಧ್ಯೆ, ಚೌಟಾ ಅವರಿಗೆ ಲೋಕಸಭೆ ಟಿಕೆಟ್ ನೀಡಿರುವ ಪಕ್ಷದ ನಿರ್ಧಾರವನ್ನು ಕಟೀಲ್ ಸ್ವಾಗತಿಸಿದ್ದಾರೆ. ಹೊಸ ಮುಖಗಳಿಗೆ ಅವಕಾಶ ನೀಡುವ ಮತ್ತು ಆ ಮೂಲಕ ಪಕ್ಷದ ಅಡಿಪಾಯ ಮತ್ತು ಚಟುವಟಿಕೆಗಳನ್ನು ವಿಸ್ತರಿಸುವ ಪಕ್ಷದ ಚಿಂತನೆಗೆ ಅನುಗುಣವಾಗಿ ಬದಲಾವಣೆಯಾಗಿದೆ ಎಂದು ಹೇಳಿದರು. 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿ ಎಂದು ಹಾರೈಸಿದರು. ಪಕ್ಷ ಸಂಘಟನೆಗಾಗಿ ದುಡಿಯುವ ಸುಳಿವವನ್ನು ಕಟೀಲ್ ನೀಡಿದರು.

ಆರು ತಿಂಗಳ ಹಿಂದೆಯೇ ಪಕ್ಷದ ಹೈಕಮಾಂಡ್ ತಮ್ಮ ಅಭಿಪ್ರಾಯ ಕೇಳಿದ್ದು, ಹೊಸ ಮುಖಕ್ಕೆ ದಾರಿ ಮಾಡಿಕೊಡಲು ಸಿದ್ಧ ಎಂದು ಹೇಳಿದ್ದೆ ಎಂದರು. 15 ವರ್ಷಗಳಿಂದ ನನಗೆ ಸಿಕ್ಕ ಅವಕಾಶ ದೊಡ್ಡದು. ಭವಿಷ್ಯದಲ್ಲಿ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಮತ್ತು ಪಕ್ಷ ನನಗೆ ಏನು ಗೊತ್ತುಪಡಿಸುತ್ತದೋ ಅದನ್ನು ಮಾಡುತ್ತೇನೆ ಎಂದರು.ಕೊನೆಗೂ ಉಳಿದಿರುವ ಪ್ರಶ್ನೆ ಸಿಂಹಾಸನದಲ್ಲಿದ್ದ ರಾಜನಿಗೆ ನೆಲದಲ್ಲಿ ಕೂರಕ್ಕೆ ಕಷ್ಟವಾಗುವುದಂತೂ ನಿಜ ಎಂಬುದು ಯಕ್ಷಪ್ರಶ್ನೆ.

RELATED ARTICLES

LEAVE A REPLY

Please enter your comment!
Please enter your name here

Most Popular